ದೆಹಲಿ: ಅಂತೂ ಬಹುದಿನಗಳಿಂದ ಬಾಕಿ ಉಳಿದಿದ್ದ ಕೇಂದ್ರ ಸಂಪುಟ ಮರು ರಚನೆ ಕಾರ್ಯ ಮುಕ್ತಾಯವಾಗಿದೆ. ಇಂದು 43 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಬಾರಿ ಕೇಂದ್ರ ಸಂಪುಟ ವಿಸ್ತರಣೆಗೂ ಮೊದಲು ಪ್ರಧಾನಿ ಮೋದಿ ಸಾಲುಸಾಲು ಸಭೆ ನಡೆಸಿದ್ದರು. ಪ್ರತಿ ಖಾತೆಯ ಸಚಿವರೊಟ್ಟಿಗೂ ಮಾತುಕತೆ ನಡೆಸಿದ್ದರು. ಅಂತೆಯೇ ಇಂದು ಹಲವು ಪ್ರಮುಖ ಸಚಿವರ ರಾಜೀನಾಮೆಯೂ ಆಗಿದೆ..ಹೊಸ ಮುಖಗಳು ಕ್ಯಾಬಿನೆಟ್ ಸೇರಿವೆ. ಇಷ್ಟೆಲ್ಲ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಒಂದು ಗ್ರೂಪ್ ಫೋಟೋ ಶೇರ್ ಮಾಡಿಕೊಂಡು, ಹೊಸಬರಿಗೆ ಶುಭ ಹಾರೈಸಿದ್ದಾರೆ. Govt 4 Growth (ಅಭಿವೃದ್ಧಿಗಾಗಿ ಸರ್ಕಾರ) ಎಂಬ ಹ್ಯಾಷ್ಟ್ಯಾಗ್ ಕೊಟ್ಟಿದ್ದಾರೆ.
ಎಲ್ಲ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನನ್ನೆಲ್ಲ ಸಹೋದ್ಯೋಗಿ ಮಿತ್ರರಿಗೆ ಅಭಿನಂದನೆಗಳು. ಅವರ ಮಂತ್ರಿಮಂಡಲದ ಅವಧಿಗೆ ನನ್ನ ಶುಭ ಹಾರೈಕೆಗಳು. ನಾವೆಲ್ಲರೂ ಒಟ್ಟಾಗಿ ಈ ದೇಶದ ಜನರ ಆಕಾಂಕ್ಷೆಗಳನ್ನು ಪೂರೈಸಬೇಕು. ಸಮೃದ್ಧ, ಬಲಿಷ್ಠ ಭಾರತ ಕಟ್ಟಬೇಕು ಎಂದು ಹೇಳಿದ್ದಾರೆ.
I congratulate all the colleagues who have taken oath today and wish them the very best for their ministerial tenure. We will continue working to fulfil aspirations of the people and build a strong and prosperous India. #Govt4Growth pic.twitter.com/AVz9vL77bO
— Narendra Modi (@narendramodi) July 7, 2021
ಹಾಗೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಎಲ್ಲ ನೂತನ ಸಚಿವರಿಗೆ ಅಭಿನಂದನೆಗಳು. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ಕಟ್ಟೋಣ. ದೇಶದ ಅಭಿವೃದ್ಧಿಯೇ ಎಲ್ಲರ ಗುರಿಯಾಗಿರಲಿ ಎಂದಿದ್ದಾರೆ. ಹಾಗೇ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, ಸಂಪುಟವನ್ನು ಹೊಸದಾಗಿ ಸೇರಿದವರಿಗೆ ಶುಭ ಕೋರಿದ್ದಾರೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನೆಲ್ಲ ಒಡನಾಡಿಗಳಿಗೆ ಅಭಿನಂದನೆಗಳು. ಸರ್ಕಾರದ ಕಲ್ಯಾಣ ನೀತಿಗಳು ಎಲ್ಲರೂ ಸೇರಿ ಜನರಿಗೆ ತಲುಪಿಸೋಣ. ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸೋಣ ಎಂದಿದ್ದಾರೆ. ಇನ್ನು ಸಚಿವ ನಿತಿನ್ ಗಡ್ಕರಿ ಸೇರಿ ಅನೇಕ ಪ್ರಮುಖ ನಾಯಕರು ಟ್ವೀಟ್ ಮಾಡಿ ಹೊಸಬರಿಗೆ ಶುಭಹಾರೈಸಿದ್ದಾರೆ.
प्रधानमंत्री श्री @narendramodi के नेतृत्व वाली मंत्रिपरिषद के सदस्य के रूप में आज शपथ लेने वाले सभी साथियों को हार्दिक बधाई एवं शुभकामनाएँ।
पूरी टीम एक विकसित और सशक्त भारत के निर्माण में प्राण-पण से मोदीजी के दिशानिर्देशन में काम करेगी और #Govt4Growth की कसौटी पर खरी उतरेगी।
— Rajnath Singh (@rajnathsingh) July 7, 2021
ಇದನ್ನೂ ಓದಿ: Cabinet Reshuffle: ನರೇಂದ್ರ ಮೋದಿ ಸಚಿವ ಸಂಪುಟ ಸೇರಿದ ನೂತನ ಸಚಿವರ ಕಿರು ಪರಿಚಯ
PM Narendra Modi extends best wishes to 43 new inductees of his Cabinet