Indian Air Force Day: ನಿಮ್ಮಿಂದಲೇ ಭಾರತದ ವಾಯು ಪ್ರದೇಶ ಸುರಕ್ಷಿತವಾಗಿದೆ: ಪ್ರಧಾನಿ ಮೋದಿ
ನಿಮ್ಮಿಂದಲೇ ಭಾರತದ ವಾಯು ಪ್ರದೇಶ ಸುರಕ್ಷಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಭಾರತೀಯ ವಾಯುಪಡೆ ದಿನದ ಹಿನ್ನೆಲೆಯಲ್ಲಿ ವಾಯು ಯೋಧರು ಹಾಗೂ ಅವರ ಕುಟುಂಬಕ್ಕೆ ಶುಭಾಶಯ ತಿಳಿಸಿದರು. ಭಾರತದ ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಅವರ ಮಹಾನ್ ಸೇವೆ ಹಾಗೂ ತ್ಯಾಗದಿಂದಲೇ ನಮ್ಮ ವಾಯು ಪ್ರದೇಶ ಸುರಕ್ಷಿತವಾಗಿದೆ. ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡುವಲ್ಲಿ ಅವರ ಕೊಡುಗೆಗೆ ಸಾಟಿಯಿಲ್ಲ ಎಂದರು.
ನಿಮ್ಮಿಂದಲೇ ಭಾರತದ ವಾಯು ಪ್ರದೇಶ ಸುರಕ್ಷಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ವಾಯುಪಡೆ ದಿನ(Indian Air Force Day)ದ ಹಿನ್ನೆಲೆಯಲ್ಲಿ ವಾಯು ಯೋಧರು ಹಾಗೂ ಅವರ ಕುಟುಂಬಕ್ಕೆ ಶುಭಾಶಯ ತಿಳಿಸಿದರು. ಭಾರತದ ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಅವರ ಮಹಾನ್ ಸೇವೆ ಹಾಗೂ ತ್ಯಾಗದಿಂದಲೇ ನಮ್ಮ ವಾಯು ಪ್ರದೇಶ ಸುರಕ್ಷಿತವಾಗಿದೆ. ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡುವಲ್ಲಿ ಅವರ ಕೊಡುಗೆಗೆ ಸಾಟಿಯಿಲ್ಲ ಎಂದರು.
90 ವರ್ಷಗಳ ಹಿಂದೆ 1932ರ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಯಿತು. ಭಾರತದ ಎಲ್ಲಾ ವಾಯುನೆಲೆಗಳಲ್ಲಿ ಭಾರತೀಯ ವಾಯುಪಡೆ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪ್ರಯಾಗರಾಜ್‌ನಲ್ಲಿ ವಾಯುಪಡೆಯ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಮಾಹಿತಿ ಪ್ರಕಾರ, ಭಾರತೀಯ ಯೋಧರು ಸುಖೋಯ್, ತೇಜಸ್ ಮತ್ತು ರಫೇಲ್ ಸೇರಿದಂತೆ ಸುಮಾರು 100 ಯುದ್ಧ ವಿಮಾನಗಳೊಂದಿಗೆ ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಏರ್ ಶೋ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮುಖ್ಯ ಅತಿಥಿಯಾಗಿದ್ದಾರೆ.
ಮತ್ತಷ್ಟು ಓದಿ: Indian Air Force Day 2023: 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆ, ಇಂದು ವಿಶ್ವದ 4ನೇ ಪ್ರಬಲ ವಾಯುಸೇನೆ
ರಾಜ್ಯ ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ಸೇನಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್, ಸೆಂಟ್ರಲ್ ಏರ್ ಕಮಾಂಡ್, ಏರ್ ಮಾರ್ಷಲ್ ಆರ್.ಜಿ. ಆಫ್. ಕಪೂರ್ ಕೂಡ ಇದ್ದಾರೆ.
Best wishes to all air warriors and their families on Air Force Day. India is proud of the valour, commitment and dedication of the Indian Air Force. Their great service and sacrifice ensure our skies are safe. pic.twitter.com/HJ5coUq2eP
— Narendra Modi (@narendramodi) October 8, 2023
ಭಾರತೀಯ ವಾಯುಪಡೆಗೆ ಹೊಸ ಧ್ವಜ ಇಂದು ಭಾರತೀಯ ವಾಯುಪಡೆ ಹೊಸ ಧ್ವಜವನ್ನು ಸ್ವೀಕರಿಸಿದೆ. 72 ವರ್ಷಗಳ ನಂತರ ಈ ಬದಲಾವಣೆ ಮಾಡಲಾಗಿದೆ. ಏರ್ ಸ್ಟಾಫ್ ಮುಖ್ಯಸ್ಥ ಚೀಫ್ ಏರ್ ಮಾರ್ಷಲ್ ವಿಆರ್ ಚೌಧರಿ ಅವರು ಪರೇಡ್‌ನಲ್ಲಿ ಧ್ವಜವನ್ನು ಬದಲಾಯಿಸಿದರು ಮತ್ತು ವಾಯು ಯೋಧರಿಗೆ ಪ್ರಮಾಣ ವಚನ ಬೋಧಿಸಿದರು. ಬಮ್ರೌಲಿಯಲ್ಲಿ ನಡೆಯುವ ವಿಧ್ಯುಕ್ತ ಮೆರವಣಿಗೆಯಲ್ಲಿ ಸ್ಕೈ ಪ್ಯಾರಾ ಜಂಪರ್‌ಗಳು ತಮ್ಮ ಕೈಚಳಕವನ್ನು ತೋರಿಸಲಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯ ಬೆಟಾಲಿಯನ್ ಕೂಡ ಪರೇಡ್‌ನಲ್ಲಿ ಸೇರ್ಪಡೆಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ