
ನವದೆಹಲಿ, ನವೆಂಬರ್ 1: ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಿದ್ದರು ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಇಂದು (ನವೆಂಬರ್ 1) ಮಧ್ಯಪ್ರದೇಶದ ರೇವಾದ ಟಿಆರ್‌ಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ಉಪೇಂದ್ರ ದ್ವಿವೇದಿ, ಈ ನಿರ್ಣಾಯಕ ನಾಯಕತ್ವ ಮತ್ತು ದೃಷ್ಟಿಕೋನದ ಸ್ಪಷ್ಟತೆಯು ಮಿಲಿಟರಿಗೆ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಮತ್ತು ಆಪರೇಷನ್ ಸಿಂಧೂರ್ ಅಡಿಯಲ್ಲಿ ಐತಿಹಾಸಿಕ ವಿಜಯವನ್ನು ನೀಡಲು ಅನುವು ಮಾಡಿಕೊಟ್ಟಿತು ಎಂದು ಒತ್ತಿ ಹೇಳಿದ್ದಾರೆ.
“ನಮ್ಮ ರಾಜಕೀಯ ನಾಯಕತ್ವದ ಚಿಂತನೆ ಸ್ಪಷ್ಟವಾಗಿತ್ತು. ಪ್ರಧಾನಿ ಮೋದಿ ನಮಗೆ ಸ್ವಾತಂತ್ರ್ಯ ನೀಡಿದರು. ಪ್ರಧಾನಿ ಸೇನಾ ಪಡೆಗಳಿಗೆ ಇಂತಹ ಸ್ವಾತಂತ್ರ್ಯವನ್ನು ನೀಡಿದ ಘಟನೆ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿರಲಿಲ್ಲ” ಎಂದು ಜನರಲ್ ದ್ವಿವೇದಿ ಹೇಳಿದ್ದಾರೆ.
#WATCH | Rewa, Madhya Pradesh | Addressing an event at TRS College, Chief of the Army Staff, General Upendra Dwivedi says, “… The third ‘C’ is clarity. The thinking of our political leader was clear. They gave us a free hand. It has never happened in history before that the… pic.twitter.com/GQTVK4iQlW
— ANI (@ANI) November 1, 2025
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನ ಪತನ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
ಆಪರೇಷನ್ ಸಿಂಧೂರ್‌ನ ಯಶಸ್ವಿ ಅನುಷ್ಠಾನವನ್ನು ಜನರಲ್ ದ್ವಿವೇದಿ ವಿವರಿಸಿದ್ದು, ಇದನ್ನು ಕೇವಲ ಮಿಲಿಟರಿ ವಿಜಯವಲ್ಲದೆ ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ಶಾಂತಿಯನ್ನು ಪುನಃ ಸ್ಥಾಪಿಸುವ ಧ್ಯೇಯ ಎಂದೂ ಕರೆದಿದ್ದಾರೆ.
#WATCH | Rewa, Madhya Pradesh | Addressing an event at TRS College, Chief of the Army Staff, General Upendra Dwivedi says, “…Other than gaining the victory over the enemy, Operation Sindoor was to re-establish sovereignty, integrity and peace… It was the Prime Minister who… pic.twitter.com/LhvW9PxR22
— ANI (@ANI) November 1, 2025
ಈ ಕಾರ್ಯಾಚರಣೆಗೆ ಪ್ರಧಾನಿ ಮೋದಿಯವರೇ ಹೆಸರಿಟ್ಟರು. ‘ಸಿಂಧೂರ್’ ಎಂಬ ಹೆಸರು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ತಾಯಿ, ಸಹೋದರಿ ಅಥವಾ ಮಗಳು ಸಿಂಧೂರ್ ಅನ್ನು ಹಚ್ಚಿಕೊಂಡಾಗಲೆಲ್ಲ ಅದು ದೇಶದ ಗಡಿಯಲ್ಲಿ ಕಾವಲು ಕಾಯುತ್ತಿರುವ ಸೈನಿಕನಿಗಾಗಿ ಪ್ರಾರ್ಥನೆ ಮಾಡುವುದನ್ನು ಸಂಕೇತಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ