ರಾಹುಲ್ ಗಾಂಧಿಗಿಂತ ಹೆಚ್ಚು ಟ್ವೀಟ್​, ಫಾಲೋವರ್​ಗಳನ್ನು ಹೊಂದಿರುವ ಪ್ರಧಾನಿ ಮೋದಿ; ಈ ವಿಷಯದಲ್ಲಿ ರಾಹುಲ್ ಗಾಂಧಿಯದೇ ಮೇಲುಗೈ

| Updated By: ಸುಷ್ಮಾ ಚಕ್ರೆ

Updated on: Apr 14, 2022 | 7:49 PM

2019ರ ಜ. 1 ಮತ್ತು 2021ರ ಡಿ. 31ರ ನಡುವೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಟ್ವಿಟ್ಟರ್ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಅಧ್ಯಯನ ವಿಶ್ಲೇಷಿಸಿದೆ. ಗಮನಾರ್ಹವಾಗಿ, 2019-21ರಲ್ಲಿ ರಾಹುಲ್ ಗಾಂಧಿಯವರ ಟ್ವಿಟರ್ ಎಂಗೇಜ್​ಮೆಂಟ್​ನ ಸರಾಸರಿ ಹೆಚ್ಚಾಗಿದೆ.

ರಾಹುಲ್ ಗಾಂಧಿಗಿಂತ ಹೆಚ್ಚು ಟ್ವೀಟ್​, ಫಾಲೋವರ್​ಗಳನ್ನು ಹೊಂದಿರುವ  ಪ್ರಧಾನಿ ಮೋದಿ; ಈ ವಿಷಯದಲ್ಲಿ ರಾಹುಲ್ ಗಾಂಧಿಯದೇ ಮೇಲುಗೈ
ರಾಹುಲ್ ಗಾಂಧಿ- ನರೇಂದ್ರ ಮೋದಿ
Follow us on

ನವದೆಹಲಿ: ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಟ್ವಿಟರ್‌ ಅನುಯಾಯಿಗಳ ಸಂಖ್ಯೆ 77.8 ಮಿಲಿಯನ್‌ ಆಗಿದ್ದರೆ, ಅವರ ಪ್ರಮುಖ ಎದುರಾಳಿ ರಾಹುಲ್‌ ಗಾಂಧಿ (Rahul Gandhi) 20.4 ಮಿಲಿಯನ್‌ ಫಾಲೋವರ್​ಗಳನ್ನು ಹೊಂದಿದ್ದಾರೆ. ಆದರೆ, ರಾಹುಲ್ ಗಾಂಧಿಯವರ ಒಟ್ಟು ಟ್ವಿಟರ್ ಎಂಗೇಜ್​ಮೆಂಟ್​ ಮಾಹಿತಿಯಂತೆ ಲೈಕ್​ಗಳು, ರೀ-ಟ್ವೀಟ್‌ಗಳು ಮತ್ತು ಮೆನ್ಷನ್​ಗಳು 2019-21ರಲ್ಲಿ ಪ್ರಧಾನಿ ಮೋದಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ನರೇಂದ್ರ ಮೋದಿ ತಮ್ಮ ಫಾಲೋವರ್​ಗಳ ಸಂಖ್ಯೆಯನ್ನು ಸುಮಾರು ನಾಲ್ಕು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.

ದೆಹಲಿ ಮೂಲದ ಥಿಂಕ್ ಟ್ಯಾಂಕ್ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಕಳೆದ ತಿಂಗಳು ಪ್ರಕಟಿಸಿದ ‘ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ನಾಯಕರು: ಅನ್ವೇಷಣಾ ವಿಶ್ಲೇಷಣೆ’ ಎಂಬ ಶೀರ್ಷಿಕೆಯ ಅರ್ಥಶಾಸ್ತ್ರಜ್ಞರಾದ ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರ ಸಂಶೋಧನಾ ಪ್ರಬಂಧದ ಕೆಲವು ಸಂಶೋಧನೆಗಳಲ್ಲಿ ಈ ಮಾಹಿತಿ ಲಭ್ಯವಾಗಿದೆ. ಪತ್ರಿಕೆಯು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರ ಟ್ವಿಟರ್ ಬಳಕೆ ಮತ್ತು ಅವರ ವ್ಯೂವರ್​ಗಳ ಪ್ರತಿಕ್ರಿಯೆಯನ್ನು ವಿಶ್ಲೇಷಿಸಲು ಪ್ರಯತ್ನಿಸಿದೆ.

ಈ ಅವಧಿಯಲ್ಲಿ ರಾಹುಲ್ ಗಾಂಧಿ ದಿನಕ್ಕೆ ಸರಾಸರಿ 1.7ರಷ್ಟು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದರೆ, ಶೇಕಡಾ 49ರಷ್ಟು ಸಮಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿ ಪ್ರತಿದಿನ ಸುಮಾರು ಎಂಟು ಟ್ವೀಟ್‌ಗಳನ್ನು ಪೋಸ್ಟ್​ ಮಾಡಿದರೆ ಅವುಗಳಲ್ಲಿ ಶೇಕಡಾ 72ರಷ್ಟು ಇಂಗ್ಲಿಷ್‌ನಲ್ಲಿವೆ. ಆದರೆ, ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗಿಂತ ಹೆಚ್ಚು “ನೆಗೆಟಿವ್” ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ರಿಟ್ವೀಟ್‌ಗಳನ್ನು ಪಡೆಯುವ ವಿಷಯದಲ್ಲಿ ಅನುಕೂಲಕರವಾಗಿ ಕೆಲಸ ಮಾಡಿದೆ.

ರೀ-ಟ್ವೀಟ್‌ಗಳನ್ನು ಹೊರತುಪಡಿಸಿ, 2019ರ ಜನವರಿ 1 ಮತ್ತು 2021ರ ಡಿಸೆಂಬರ್ 31ರ ನಡುವೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಟ್ವಿಟ್ಟರ್ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಅಧ್ಯಯನ ವಿಶ್ಲೇಷಿಸಿದೆ. ಗಮನಾರ್ಹವಾಗಿ, 2019-21ರಲ್ಲಿ ರಾಹುಲ್ ಗಾಂಧಿಯವರ ಟ್ವಿಟರ್ ಎಂಗೇಜ್​ಮೆಂಟ್​ನ ಸರಾಸರಿ ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದು ಕೋವಿಡ್ ನಿರ್ವಹಣೆ, ವಲಸೆ ಕಾರ್ಮಿಕರ ಬಿಕ್ಕಟ್ಟು ಮತ್ತು ರೈತರ ಪ್ರತಿಭಟನೆಗಳ ಬಗ್ಗೆ ಸರ್ಕಾರದ ಟೀಕೆಗಳಿದ್ದಾಗ ಪ್ರಕ್ಷುಬ್ಧತೆಯ ಅವಧಿಯಾಗಿದೆ.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ವೇದಿಕೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ಆಗಸ್ಟ್‌ನಲ್ಲಿ ತನ್ನ ಖಾತೆಯನ್ನು ಕೆಲಕಾಲ ಫ್ರೀಜ್ ಮಾಡಿದ ನಂತರ ಹೊಸ ಅನುಯಾಯಿಗಳ ಕುಸಿತಕ್ಕೆ ತಾನು ಸಾಕ್ಷಿಯಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದನ್ನು ಸಹ ನಾವು ನೆನಪಿಸಿಕೊಳ್ಳಬಹುದು.

ಒಟ್ಟಾರೆಯಾಗಿ, ಈ ಇಬ್ಬರು ನಾಯಕರು 2019-21ರಲ್ಲಿ 11,312 ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅವುಗಳಲ್ಲಿ 16 ಪ್ರತಿಶತ ರಾಹುಲ್ ಗಾಂಧಿಯಿಂದ ಮತ್ತು 84 ಪ್ರತಿಶತದಷ್ಟು ನರೇಂದ್ರ ಮೋದಿಯಿಂದ ಬಂದಿವೆ. ಆದರೆ, ರಾಹುಲ್ ಗಾಂಧಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ತೊಡಗಿಸಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಹೆಚ್ಚಿನ ವರ್ಧನೆಯ ಹಿಂದಿನ ಕಾರಣವೆಂದರೆ ಜನರ ಸಮಸ್ಯೆಗಳನ್ನು ಹೆಚ್ಚು ಗುರುತಿಸಬಲ್ಲ ವಿರೋಧ ಪಕ್ಷದ ನಾಯಕನಾಗಿ ಅವರ ಪಾತ್ರವನ್ನು ಅವರು ನಿಭಾಯಿಸಿರುವುದಾಗಿದೆ.

2020ರ ಟ್ವಿಟರ್ ನೀತಿಯ ಬದಲಾವಣೆಯು ನರೇಂದ್ರ ಮೋದಿಯವರಿಗಿಂತ ರಾಹುಲ್ ಗಾಂಧಿಯ ಮೇಲೆ ಹೆಚ್ಚು ಪ್ರಭಾವ ಬೀರಿತು. ಅಕ್ಟೋಬರ್ 2020ರಲ್ಲಿ ಅಮೇರಿಕನ್ ಅಧ್ಯಕ್ಷೀಯ ಚುನಾವಣೆಗಳಿಗೆ ಮುಂಚಿತವಾಗಿ, ಬಳಕೆದಾರರಿಗೆ ತಪ್ಪು ಮಾಹಿತಿಯನ್ನು ಹರಡಲು ಹೆಚ್ಚು ಕಷ್ಟಕರವಾಗಿಸುವ ಉದ್ದೇಶದಿಂದ ಟ್ವಿಟ್ಟರ್​ ಬದಲಾವಣೆಗಳನ್ನು ಘೋಷಿಸಿತು. ORF ಅಧ್ಯಯನದ ಪ್ರಕಾರ, ಈ ನೀತಿಯು ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರ ಲೈಕ್​ಗಳು, ಮೆನ್ಷನ್​ಗಳು ಮತ್ತು ರಿಟ್ವೀಟ್‌ಗಳ ಮೇಲೆ ಪ್ರಭಾವ ಬೀರಿತು. ಆದರೆ ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹೆಚ್ಚು ಪ್ರಭಾವ ಬೀರಿತು. ಮೋದಿಯವರ ಮೆನ್ಷನ್ ಟ್ವೀಟ್‌ಗಳು ವಾಸ್ತವವಾಗಿ 50 ಪ್ರತಿಶತದಷ್ಟು ಹೆಚ್ಚಿದ್ದರೆ, ರಾಹುಲ್ ಗಾಂಧಿಯವರದು 38 ಪ್ರತಿಶತದಷ್ಟು ಕುಸಿದಿದೆ.

ರಾಹುಲ್ ಅವರು ತಮ್ಮ ನಕಾರಾತ್ಮಕ ಟ್ವೀಟ್‌ಗಳಿಗೆ ಶೇಕಡಾ 42ರಷ್ಟು ಕಡಿಮೆ ರೀಟ್ವೀಟ್‌ಗಳನ್ನು ಪಡೆಯುತ್ತಿದ್ದಾರೆ. ಟ್ವಿಟ್ಟರ್​ ನೀತಿ ಬದಲಾವಣೆಯ ಮೊದಲು ಅವರ ಸರಾಸರಿ ರಿಟ್ವೀಟ್‌ಗಳು 11, 829 ರಿಟ್ವೀಟ್‌ಗಳಿಂದ ನೀತಿ ಬದಲಾವಣೆಯ ಬಳಿಕ ಕೇವಲ 6,823ಕ್ಕೆ ಕುಸಿಯಿತು.

ಇದನ್ನೂ ಓದಿ: ನಾವು ಕರ್ನಾಟಕವನ್ನ ರಾಹುಲ್ ಗಾಂಧಿ -ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ

ನೆಹರು ಅವರಿಂದ ಮೋದಿವರೆಗೆ: 14 ಪ್ರಧಾನಿಗಳ ಕೊಡುಗೆಯನ್ನು ಸ್ಮರಿಸುವ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಏನೇನಿದೆ?

Published On - 7:48 pm, Thu, 14 April 22