ಜೀರ್ಣೋದ್ಧಾರಗೊಂಡ ಪುರಾತನ ತ್ರಿಪುರ ಸುಂದರಿ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಜ್ಯ ಸರ್ಕಾರದ 7 ಕೋಟಿ ರೂ.ಗಳ ಕೊಡುಗೆಯ ಜೊತೆಗೆ ಪ್ರವಾಸೋದ್ಯಮ ಸಚಿವಾಲಯದ 'ಪ್ರಸಾದ್' ಯೋಜನೆಯ ನಿಧಿಯಿಂದ ತ್ರಿಪುರ ಸುಂದರಿ ದೇವಾಲಯವನ್ನು ಪುನರಾಭಿವೃದ್ಧಿ ಮಾಡಲಾಗಿದೆ. ತ್ರಿಪುರದಲ್ಲಿರುವ ಮಾತಾ ತ್ರಿಪುರ ಸುಂದರಿ ದೇವಸ್ಥಾನವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇದು ಅಪಾರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ತ್ರಿಪುರ ಸುಂದರಿ ದೇವಿಗೆ ಸಮರ್ಪಿತವಾದ ಈ ದೇವಸ್ಥಾನವು ವಾರ್ಷಿಕವಾಗಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

ಜೀರ್ಣೋದ್ಧಾರಗೊಂಡ ಪುರಾತನ ತ್ರಿಪುರ ಸುಂದರಿ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ
Pm Modi In Tripura Temple

Updated on: Sep 22, 2025 | 5:52 PM

ತ್ರಿಪುರ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಸೋಮವಾರ) ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಜೀರ್ಣೋದ್ಧಾರಗೊಂಡ 5 ಶತಮಾನಗಳಷ್ಟು ಹಳೆಯದಾದ ತ್ರಿಪುರ ಸುಂದರಿ ದೇವಾಲಯವನ್ನು (Tripura Sundari Temple) ಉದ್ಘಾಟಿಸಿದರು. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ನಂತರ ತ್ರಿಪುರಕ್ಕೆ ಆಗಮಿಸಿದ ಮೋದಿ ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತ್ರಿಪುರ ಸುಂದರಿ ದೇವಾಲಯವು ದೇಶಾದ್ಯಂತದ 51 ಹಿಂದೂ ಶಕ್ತಿಪೀಠ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ಪ್ರಧಾನಿ ಮೋದಿ ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ (MBB) ವಿಮಾನ ನಿಲ್ದಾಣದಲ್ಲಿ ಬಂದಿಳಿದು ಹೆಲಿಕಾಪ್ಟರ್‌ನಲ್ಲಿ ಗೋಮತಿಗೆ ಆಗಮಿಸಿದರು. ಬಳಿಕ ಅವರನ್ನು ಉದಯಪುರದ ಹೊರವಲಯದಲ್ಲಿರುವ ಪಲತಾನಾದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು. ಹೆಚ್ಚಿನ ಭದ್ರತೆಯ ನಡುವೆ ಮಧ್ಯಾಹ್ನ 3.30ಕ್ಕೆ ಅವರು ವಾಹನ ಮೆರವಣಿಗೆಯಲ್ಲಿ ದೇವಾಲಯದ ಆವರಣವನ್ನು ತಲುಪಿದರು.


ಇದನ್ನೂ ಓದಿ: ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಮೋದಿ ಅವರು ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು ಮತ್ತು ಪುನರ್ನಿರ್ಮಾಣಗೊಂಡ ಸ್ಥಳದ ವಿವಿಧ ಭಾಗಗಳಿಗೆ ಭೇಟಿ ನೀಡಿದರು. ತ್ರಿಪುರ ರಾಜ್ಯಪಾಲ ಇಂದ್ರಸೇನ ರೆಡ್ಡಿ ನಲ್ಲು, ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಪ್ರವಾಸೋದ್ಯಮ ಸಚಿವ ಸುಶಾಂತ ಚೌಧರಿ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ರಾಜೀಬ್ ಭಟ್ಟಾಚಾರ್ಯ ಅವರು ಪ್ರಧಾನಿ ಮೋದಿ ಅವರೊಂದಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.


2018 ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸರ್ಕಾರವು ತ್ರಿಪುರ ಸುಂದರಿ ದೇವಾಲಯದ ಸುತ್ತಲಿನ ಪ್ರವಾಸೋದ್ಯಮ ವಲಯವನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. 52 ಕೋಟಿ ರೂ. ವೆಚ್ಚದಲ್ಲಿ ಮರುಅಭಿವೃದ್ಧಿಪಡಿಸಲಾದ ಈ ದಏವಾಲಯ ಎಲ್ಲಾ 51 ಶಕ್ತಿಪೀಠಗಳ ಪ್ರತಿಕೃತಿಯನ್ನು ಹೊಂದಿರುವ ಹತ್ತಿರದ ಸ್ಥಳದೊಂದಿಗೆ, ಈಶಾನ್ಯ ಪ್ರದೇಶದ ಪ್ರವಾಸೋದ್ಯಮಕ್ಕೆ ಒಂದು ಪ್ರಮುಖ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಇಂದು ಉದ್ಘಾಟನೆಯಾಗಲಿರುವ 51 ಶಕ್ತಿ ಪೀಠಗಳಲ್ಲಿ ಒಂದಾದ ಮಾತಾ ತ್ರಿಪುರ ಸುಂದರಿ ದೇವಾಲಯ ಹೇಗಿದೆ ನೋಡಿ

ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್ ಅಥವಾ ‘ಪ್ರಸಾದ್’ ಯೋಜನೆಯ ನಿಧಿಯಿಂದ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಯಿತು. ಇದರ ಜೊತೆಗೆ ರಾಜ್ಯ ಸರ್ಕಾರದಿಂದ 7 ಕೋಟಿ ರೂ.ಗಳ ಕೊಡುಗೆಯನ್ನು ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:49 pm, Mon, 22 September 25