ಬಿಹಾರದ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ಕರ್ಪೂರಿ ಠಾಕೂರ್ ಕುಟುಂಬ ಭೇಟಿ ಮಾಡಿದ ಮೋದಿ

ರಾಮ್ ನಾಥ್ ಠಾಕೂರ್ ಅವರು ತಮ್ಮ ಕುಟುಂಬದ ಪರವಾಗಿ, ಬಿಹಾರದ ಪರವಾಗಿ ಮತ್ತು ದಮನಿತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಪರವಾಗಿ ಈ ಗೌರವಕ್ಕಾಗಿ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಮೊಮ್ಮಗ ರಂಜಿತ್‌ ಕುಮಾರ್‌ ಅವರು,  ಎರಡನೇ ದೀಪಾವಳಿಯಂತೆಯೇ ಇದು ನಮಗೆ ಸಂತೋಷದ ಕ್ಷಣವಾಗಿತ್ತು. ಪಟಾಕಿ ಸಿಡಿಸಿ ಸಿಹಿ ಹಂಚಿದ್ದೇವೆ ಎಂದಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ಕರ್ಪೂರಿ ಠಾಕೂರ್ ಕುಟುಂಬ ಭೇಟಿ ಮಾಡಿದ ಮೋದಿ
ಕರ್ಪೂರಿ ಠಾಕೂರ್ ಕುಟುಂಬದೊಂದಿಗೆ ಮೋದಿImage Credit source: PM modi/X account
Follow us
ರಶ್ಮಿ ಕಲ್ಲಕಟ್ಟ
|

Updated on: Feb 12, 2024 | 5:32 PM

ದೆಹಲಿ ಫೆಬ್ರುವರಿ 12: ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ (Bharat Ratna) ಪುರಸ್ಕೃತ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ (Karpoori Thakur) ಅವರ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಭೇಟಿಯಾದರು. ಪ್ರಮುಖ ಸಮಾಜವಾದಿ ನಾಯಕನ ಕುಟುಂಬ ಸದಸ್ಯರು, ಅವರ ಪುತ್ರ ರಾಜ್ಯಸಭಾ ಸದಸ್ಯ ಮತ್ತು ಜೆಡಿಯು ನಾಯಕ ರಾಮ್ ನಾಥ್ ಠಾಕೂರ್ ನೇತೃತ್ವದಲ್ಲಿ ಪ್ರಧಾನ ಮಂತ್ರಿಯನ್ನು ಅವರ 7, ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. “ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಜನನಾಯಕ್ ಕರ್ಪೂರಿ ಠಾಕೂರ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ. ಕರ್ಪೂರಿ ಜಿ ಅವರು ಸಮಾಜದ ಹಿಂದುಳಿದ ಮತ್ತು ವಂಚಿತ ವರ್ಗಗಳ ಮಿಸಾಯ ಆಗಿದ್ದಾರೆ, ಅವರ ಜೀವನ ಮತ್ತು ಆದರ್ಶಗಳು ದೇಶವಾಸಿಗಳಿಗೆ ಸ್ಫೂರ್ತಿ ನೀಡುವುದು” ಎಂದು ಪ್ರಧಾನಿ ಹೇಳಿದರು.

ರಾಮ್ ನಾಥ್ ಠಾಕೂರ್ ಅವರು ತಮ್ಮ ಕುಟುಂಬದ ಪರವಾಗಿ, ಬಿಹಾರದ ಪರವಾಗಿ ಮತ್ತು ದಮನಿತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಪರವಾಗಿ ಈ ಗೌರವಕ್ಕಾಗಿ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.  ಎರಡನೇ ದೀಪಾವಳಿಯಂತೆಯೇ ಇದು ನಮಗೆ ಸಂತೋಷದ ಕ್ಷಣವಾಗಿತ್ತು. ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಮೊಮ್ಮಗ ರಂಜಿತ್‌ ಕುಮಾರ್‌ ಹೇಳಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಒಂದು ದಿನದ ನಂತರ ಪ್ರಧಾನಿ ಕರೆ ಮಾಡಿದ್ದು ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಮಾತನಾಡಿದ್ದಾರೆ ಮತ್ತು ದೆಹಲಿಯಲ್ಲಿ ಅವರನ್ನು ಭೇಟಿಯಾಗಲು ಅವರನ್ನು ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿಯೂ ನಮ್ಮ ಕುಟುಂಬದವರಲ್ಲಿ ಒಬ್ಬರಂತೆ ಎಂದು ನಾನು ಭಾವಿಸಿದೆ” ಎಂದು ಅವರು ಹೇಳಿದರು.

ಜನ್ ನಾಯಕ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕರ್ಪೂರಿ ಠಾಕೂರ್ ಅವರು ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ