ಯೋಗಿ ಆದಿತ್ಯನಾಥ್ರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ; ನಿಮ್ಮ ಮೆಚ್ಚುಗೆಗೆ ಹೃತ್ಪೂರ್ವಕ ಧನ್ಯವಾದ ಎಂದ ಯುಪಿ ಸಿಎಂ
ಸದ್ಯ ಉತ್ತರ ಪ್ರದೇಶ ರಾಜಕೀಯ ಕುತೂಹಲಕ್ಕೆ ಕಾರಣವಾದ ರಾಜ್ಯ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಅಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆಯೂ ಸುದ್ದಿ ಎದ್ದಿತ್ತು. ಆದರೆ ಬಿಜೆಪಿ ವರಿಷ್ಠರು ಅದನ್ನು ಅಲ್ಲಗಳೆದಿದ್ದಾರೆ.
ದೆಹಲಿ: ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ, ಕಾನೂನು ನೆರವು ಸೇರಿ ಅಗತ್ಯ ಸೇವೆಗಳನ್ನು ನೀಡುವ ಸಲುವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಯೋಗಿ ಆದಿತ್ಯನಾಥ್ ಅವರ ಈ ಯೋಜನೆಗೆ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಾಗೇ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಗಳಿದ್ದಾರೆ.
ಟ್ವೀಟ್ ಮಾಡಿರುವ ಪಿಎಂ ಮೋದಿ, ಇದು ಅತ್ಯುತ್ತಮವಾದ ಯೋಜನೆಯಾಗಿದ್ದು, ಒಳ್ಳೆಯ ಪ್ರಾರಂಭ ಎಂದು ಶ್ಲಾಘಿಸಿದ್ದಾರೆ. ಹಾಗೇ ಸಿಎಂ ಯೋಗಿ ಆದಿತ್ಯನಾಥ್ರನ್ನು ಟ್ಯಾಗ್ ಮಾಡಿದ್ದಾರೆ. ಅದಾದ ಕೆಲವೇ ಹೊತ್ತಲ್ಲಿ ಯೋಗಿ ಆದಿತ್ಯನಾಥ್ ಪ್ರಧಾನಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ನಿಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಡಿ ಈ ಎಲ್ಡರ್ಲೈನ್ ಕಾರ್ಯಕ್ರಮ ಶುರು ಮಾಡಿದೆ. ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಹಾಯ ಮತ್ತು ಮಾನಸಿಕ ಬೆಂಬಲ ನೀಡುವುದು ಇದರ ಉದ್ದೇಶ. ನೀವಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತುಂಬ ಖುಷಿಯಾಗಿದೆ. ರಾಜ್ಯದ ಎಲ್ಲ ಜನರ ಪರವಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಸದ್ಯ ಉತ್ತರ ಪ್ರದೇಶ ರಾಜಕೀಯ ಕುತೂಹಲಕ್ಕೆ ಕಾರಣವಾದ ರಾಜ್ಯ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಅಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆಯೂ ಸುದ್ದಿ ಎದ್ದಿತ್ತು. ಆದರೆ ಬಿಜೆಪಿ ವರಿಷ್ಠರು ಅದನ್ನು ಅಲ್ಲಗಳೆದಿದ್ದಾರೆ. ಇತ್ತೀಚೆಗೆ ಯೋಗಿ ಆದಿತ್ಯನಾಥ್ ಜನ್ಮದಿನಕ್ಕೂ ಪ್ರಧಾನಿ ಮೋದಿ ಶುಭಕೋರಲಿಲ್ಲ ಎಂಬುದೊಂದು ವಿಷಯವೂ ದೊಡ್ಡಮಟ್ಟಕ್ಕೆ ಚರ್ಚೆಯಾಗಿತ್ತು. ಆದರೆ ಕೊವಿಡ್ 19 ಎರಡನೇ ಅಲೆ ಉಲ್ಬಣವಾದ ನಂತರ ಮೋದಿ ಯಾರಿಗೂ ವಿಶ್ ಮಾಡಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ವಾರದ ಹಿಂದೆ ಯುಪಿ ಸಿಎಂ ಯೋಗಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ ಈ Elderline ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಷ್ಟಕ್ಕೂ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುವಲ್ಲಿ ಯೋಗಿ ಆದಿತ್ಯನಾಥ್ ಸದಾ ಮುಂದಿರುತ್ತಾರೆ ಎಂಬುದನ್ನು ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಸಾಬೀತು ಮಾಡುತ್ತಿದ್ದಾರೆ.
Very good initiative! @myogiadityanath https://t.co/Wl9thDO9Wk
— Narendra Modi (@narendramodi) June 13, 2021
आपके सर्वसमावेशी मंत्र 'सबका साथ, सबका विकास, सबका विश्वास' से ही प्रेरणा लेकर @UPGovt अपने प्रदेश के वृद्ध नागरिकों को 'प्रोजेक्ट एल्डरलाइन' के माध्यम से सहयोग, भावनात्मक देखभाल और समर्थन देने का कार्य कर रही है।
सभी प्रदेशवासियों की ओर से आपकी आत्मीय प्रशंसा हेतु हार्दिक आभार। https://t.co/muKZX1dKHI
— Yogi Adityanath (@myogiadityanath) June 13, 2021
PM Narendra Modi praises Uttar Pradesh government to offer helpline facility to senior citizens