ವಿದ್ವಾಂಸರ ವ್ಯಾಖ್ಯಾನವಿರುವ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
Bhagavad Gita: ಭಗವದ್ಗೀತೆಯು ಇಡೀ ಜಗತ್ತಿನದು. ಗೀತೆಯನ್ನು ವಿಶ್ವದ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ವಿವಿಧ ದೇಶಗಳು ಭಗವದ್ಗೀತೆಯ ಮೇಲೆ ಅಧ್ಯಯನ ಕೈಗೊಂಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ದೆಹಲಿ: ದೇಶದ 21 ಘನ ವಿದ್ವಾಂಸರು ಬರೆದಿರುವ ಭಗವದ್ಗೀತೆಯ ವ್ಯಾಖ್ಯಾನದ ಹಸ್ತಪ್ರತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಮಾರ್ಚ್ 9) ನಗರದ ಲೋಕ್ ಕಲ್ಯಾಣ್ ಮಾರ್ಗದಲ್ಲಿ ಬಿಡುಗಡೆಗೊಳಿಸಿದರು. 11 ಸಂಪುಟವನ್ನು ಒಳಗೊಂಡಿರುವ ಭಗವದ್ಗೀತೆಯ ಈ ಹಸ್ತಪ್ರತಿಯು ಶ್ಲೋಕಾರ್ಥ ಸಹಿತವಾಗಿದೆ. ಈ ಕೃತಿಯ ಬಿಡುಗಡೆ ವೇಳೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕಾಂಗ್ರೆಸ್ ನಾಯಕ ಹಾಗೂ ಡಾ. ಕರಣ್ ಸಿಂಗ್ ಧರ್ಮಾರ್ಥ ಟ್ರಸ್ಟ್ನ ಮುಖ್ಯಸ್ಥರೂ ಆಗಿರುವ ಡಾ. ಕರಣ್ ಸಿಂಗ್ ಹಾಜರಿದ್ದರು.
ಭಗವದ್ಗೀತೆಯು ಇಡೀ ಜಗತ್ತಿನದು. ಗೀತೆಯನ್ನು ವಿಶ್ವದ ಹಲವು ಭಾಷೆಗಳಿಗೆ ಭಾಷಾಂತರಿಸಲಾಗಿದೆ. ವಿವಿಧ ದೇಶಗಳು ಭಗವದ್ಗೀತೆಯ ಮೇಲೆ ಅಧ್ಯಯನ ಕೈಗೊಂಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಭಾರತೀಯ ಸಂತ ಹಾಗೂ ತತ್ವಜ್ಞಾನಿಗಳಾಗಿದ್ದ ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಸ್ವಾಮಿ ವಿವೇಕಾನಂದರಂಥವರು ಹೇಗೆ ಭಗವದ್ಗೀತೆಯನ್ನು ಗ್ರಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಮತ್ತು ಬಾಲಗಂಗಾಧರ ತಿಲಕರು ಗೀತೆಯನ್ನು ಹೇಗೆ ಕಂಡರು ಎಂಬ ಬಗ್ಗೆಯೂ ಮೋದಿ ಮಾತನಾಡಿದರು.
ಭಾರತವನ್ನು ಏಕತೆ ಎಂಬ ಒಂದು ದಾರದ ಮೂಲಕ ಬಂಧಿಸಿದ್ದ ಆದಿ ಶಂಕರಾಚಾರ್ಯರು ಗೀತೆಯನ್ನು ಆಧ್ಯಾತ್ಮಿಕ ಪ್ರಜ್ಞೆಯಾಗಿ ಕಂಡರು. ರಾಮಾನುಜಾಚಾರ್ಯರು ಗೀತೆಯನ್ನು ಧಾರ್ಮಿಕ ಜ್ಞಾನಭಂಡಾರವಾಗಿ ಮುಂದಿಟ್ಟರು. ಸ್ವಾಮಿ ವಿವೇಕಾನಂದರು ಭಗವದ್ಗೀತೆಯನ್ನು ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲವಾಗಿ ನೋಡಿದರು ಎಂದು ಮೋದಿ ತಿಳಿಸಿದರು.
ಭಾರತೀಯ ಯುವಸಮುದಾಯವು ಭಗವದ್ಗೀತೆಯಂಥ ಕೃತಿಗಳನ್ನು ಓದಬೇಕು. ಜನರು ಅದನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಗೀತೆ ಹೇಗೆ ಶಕ್ತಿ ತುಂಬಿತು. ಆಧ್ಯಾತ್ಮಿಕ ಬಂಧನದಲ್ಲಿ ಗೀತೆ ದೇಶವನ್ನು ಹೇಗೆ ಒಟ್ಟಾಗಿರಿಸಿತು ಎಂದು ನಾವು ತಿಳಿಯಬೇಕು. ಅಧ್ಯಯನ ನಡೆಸಬೇಕು, ಬರೆಯಬೇಕು ಎಂದು ಮೋದಿ ಹೇಳಿದರು.
Prime Minister Narendra Modi releases 11 volumes of the manuscript with commentaries by 21 scholars on shlokas of Bhagavad Gita
Jammu and Kashmir Lieutenant Governor Manoj Sinha and Dr Karan Singh also present pic.twitter.com/iBG2aDYQ20
— ANI (@ANI) March 9, 2021
ಅತಿ ವಿರಳವಾದ, ಕೃತಿಕಾರರ ಸ್ವಂತ ಕೈಬರಹದ ಸಂಸ್ಕೃತ ಶ್ಲೋಕಾರ್ಥಗಳು ಈ ಪುಸ್ತಕದಲ್ಲಿ ಇರಲಿದೆ. ಹಸ್ತಪ್ರತಿಯನ್ನು ಧರ್ಮಾರ್ಥ ಟ್ರಸ್ಟ್ ಪ್ರಕಟಿಸಿದೆ.
ಇದನ್ನೂ ಓದಿ: Maitri Setu: ಭಾರತ-ಬಾಂಗ್ಲಾ ನಡುವಣ ‘ಮೈತ್ರಿ ಸೇತು’ ಸಂಪರ್ಕ ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಇದನ್ನೂ ಓದಿ: Womens Day 2021: ಇಂದು ಮಹಿಳಾ ಉದ್ಯಮಿಗಳಿಂದ ಭರ್ಜರಿ ಶಾಪಿಂಗ್ ಮಾಡಿದ ಪ್ರಧಾನಿ ನರೇಂದ್ರ ಮೋದಿ..
Published On - 8:11 pm, Tue, 9 March 21