’9/11-ಮಾನವೀಯ ಮೌಲ್ಯಗಳನ್ನು ಸಾರಿದ ದಿನ ಮತ್ತು ಮಾನವೀಯತೆ ಮೇಲೆ ದಾಳಿಯಾದ ದಿನ‘-ಪ್ರಧಾನಿ ಮೋದಿ

1893ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ್ದನ್ನು ನೆನಪಿಸಿಕೊಂಡು ಇಂದು ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದರು. ಹಾಗೇ, ಅಮೆರಿಕದ ಮೇಲೆ ಅಲ್​-ಖೈದಾ ಉಗ್ರರ ದಾಳಿಯನ್ನೂ ನೆನಪಿಸಿದ್ದಾರೆ.

’9/11-ಮಾನವೀಯ ಮೌಲ್ಯಗಳನ್ನು ಸಾರಿದ ದಿನ ಮತ್ತು ಮಾನವೀಯತೆ ಮೇಲೆ ದಾಳಿಯಾದ ದಿನ‘-ಪ್ರಧಾನಿ ಮೋದಿ
ಪಿಎಂ ನರೇಂದ್ರ ಮೋದಿ

ದೆಹಲಿ: ಭಾರತ ಅಳವಡಿಸಿಕೊಂಡು, ಜಗತ್ತಿಗೇ ಸಾರುತ್ತಿರುವ ಮಾನವೀಯ ಮೌಲ್ಯಗಳ ಮೂಲಕ, 9/11ರ ದಾಳಿಯಂಥ ದುರಂತಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಹೇಳಿದ್ದಾರೆ. ಇಂದು ಗುಜರಾತ್​ನ ಅಹ್ಮದಾಬಾದ್​ನಲ್ಲಿ ಸರ್ದಾರಧಾಮ ಭವನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.  ಸೆಪ್ಟೆಂಬರ್​ 11 ನಮಗೆ ಇನ್ನೊಂದು ಕಾರಣಕ್ಕೆ ಅತ್ಯಂತ ಮುಖ್ಯದಿನವಾಗಿದೆ. 1893ರ ಈ ದಿನದಂದು ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಭಾಷಣ ಮಾಡಿದ್ದರು. ಅಂದು ಮಾನವೀಯ ಮೌಲ್ಯಗಳನ್ನು ಸಾರಿದ್ದರು. ಅದೇ ದಿನ ಈ ಸರ್ದಾರ ಧಾಮ ಭವನ ಕೂಡ ಉದ್ಘಾಟನೆಯಾಗುತ್ತಿದೆ ಎಂದೂ ನರೇಂದ್ರ ಮೋದಿ ಹೇಳಿದ್ದಾರೆ.  

ಹಾಗೇ, 2001ರ ಸೆಪ್ಟೆಂಬರ್​ 11ರಂದು ಅಮೆರಿಕದ ಮೇಲೆ ನಡೆದ ಅಲ್​-ಖೈದಾ ಉಗ್ರ ದಾಳಿಯನ್ನು ನೆನೆಪಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ, 9/11 ಈ ದಿನ ಜಾಗತಿಕ ಇತಿಹಾಸದಲ್ಲಿ ಕಾರಣಕ್ಕೆ ಮುಖ್ಯ ಎಂದುಕೊಳ್ಳುತ್ತೇನೆ. ಇದೇ ದಿನದಂದು ಭಾರತ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿತ್ತು. ಹಾಗೇ, ಅದೇ 9/11ರಂದು ಮನುಕುಲದ ಮೇಲೆ ಭಯಂಕರ ದಾಳಿಯಾಯಿತು ಎಂದು ಹೇಳಿದರು.

ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ
1893ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ್ದನ್ನು ನೆನಪಿಸಿಕೊಂಡು ಇಂದು ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದರು. ಅಂದು ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣವನ್ನು ಶೇರ್ ಮಾಡಿದ ನರೇಂದ್ರ ಮೋದಿ, 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣದಲ್ಲಿ ಭಾರತದ ಸಂಸ್ಕೃತಿಯ ಸೊಬಗನ್ನು ಅತ್ಯಂತ ಸುಂದರವಾಗಿ ತೆರೆದಿಟ್ಟರು. ಅವರ ಮಾತಿನ ಚೈತನ್ಯಕ್ಕೆ ಸಮೃದ್ಧ, ಅಂತರ್ಗತ ಮತ್ತು ನ್ಯಾಯಯುತವಾದ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Samantha: ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡ ಸಮಂತಾ; ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್

US Open 2021: ದಾಖಲೆಯ 31ನೇ ಬಾರಿ ಗ್ರ್ಯಾನ್ ಸ್ಲಾಮ್ ಫೈನಲ್​ಗೆ ಜೋಕೊವಿಚ್: ಇತಿಹಾಸ ನಿರ್ಮಿಸುವ ಅವಕಾಶ

Click on your DTH Provider to Add TV9 Kannada