ದೆಹಲಿ: ಕೊವಿಡ್-19 ಸಂಕಷ್ಟಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಒಳಗಾಗಿರುವ ಈ ಸಂದರ್ಭದಲ್ಲಿ, ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ‘ಒನ್ ಅರ್ಥ್, ಒನ್ ಹೆಲ್ತ್’ ಎಂಬ ಪರಿಕಲ್ಪನೆಯನ್ನು ನೀಡಿದರು. ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗೆ ಭಾರತವೂ ಕೂಡ ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆಯುತ್ತಿರುವ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ಪಡೆದಿತ್ತು. ಪ್ರಧಾನಿ ಮೋದಿ ಕೂಡ ಈ ಶೃಂಗಸಭೆಯಲ್ಲಿ ವರ್ಚುವಲ್ ವಿಧಾನದ ಮೂಲಕ ಭಾಗವಹಿಸಿದರು.
ಜರ್ಮನ್ನ ಚಾನ್ಸೆಲರ್ ಮರ್ಕೆಲ್ ಪ್ರಧಾನಿ ಮೋದಿ ಹೇಳಿದ ‘ಒನ್ ಅರ್ಥ್, ಒನ್ ಹೆಲ್ತ್’ ಪರಿಕಲ್ಪನೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ತಮ್ಮ ಸಂಪೂರ್ಣ ಬೆಂಬಲವನ್ನು ತಿಳಿಸಿದರು.
ಶೃಂಗಸಭೆಯಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿಶ್ವ ವ್ಯಾಪಾರ ಸಂಸ್ಥೆಗೆ (ಡಬ್ಲ್ಯುಟಿಒ) ಮಾಡಿದ್ದ ಕೊವಿಡ್ ಲಸಿಕೆಯ ಮೇಲಿನ ಕಾಪಿರೈಟ್ ತೆರೆಯುವಿಕೆಯ ಪ್ರಸ್ತಾಪವಾಯಿತು. ಈ ವೇಳೆ, ನರೇಂದ್ರ ಮೋದಿ ಜೊತೆಗಿನ ಮಾತುಕತೆಯನ್ನು ಉಲ್ಲೇಖಿಸಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ ಕೊವಿಡ್-19 ವಿರುದ್ಧದ ಲಸಿಕೆಯ ಮೇಲಿನ ಕಾಪಿರೈಟ್ ತೆರೆಯುವಿಕೆ ವಿಚಾರಕ್ಕೆ ಬೆಂಬಲ ಸೂಚಿಸಿದರು.
ಫ್ರಾನ್ಸ್ ಪ್ರಧಾನಿ ಮಾಕ್ರೊನ್ ಇಮ್ಯಾನುಯೆಲ್ ಕೊವಿಡ್ ಲಸಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಭಾರತದಂತಹ ದೇಶಗಳಿಗೆ ಹೆಚ್ಚು ಕಳಿಸಬೇಕು. ಇದರಿಂದ ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಲಿದೆ ಎಂದು ತಿಳಿಸಿದರು.
ಇಂಗ್ಲೆಂಡ್ ಆಹ್ವಾನದ ಮೇರೆಗೆ ವರ್ಚುವಲ್ ವಿಧಾನದ ಮೂಲಕ ಭಾಗಿ ಜಿ7 ರಾಷ್ಟ್ರಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು, ನಾಳೆ ನಡೆಯಲಿರುವ ಜಿ7 ರಾಷ್ಟ್ರಗಳ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಜಿ7 ರಾಷ್ಟ್ರಗಳಿಂದ 2003ರಿಂದ ಭಾರತಕ್ಕೆ ವಿಶೇಷ ಆಹ್ವಾನ ನೀಡಲಾಗುತ್ತಿದೆ. ಶೃಂಗಸಭೆಯಲ್ಲಿ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಭಾಗಿಯಾಗಿದ್ದರು.
Cabinet Expansion: ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಕೇಂದ್ರ ಸಚಿವ ಸಂಪುಟ; ಪ್ರಧಾನಿ ಮೋದಿ-ಅಮಿತ್ ಶಾ ಉನ್ನತ ಸಭೆ
Published On - 11:04 pm, Sat, 12 June 21