Narendra Modi: ದೆಹಲಿ ವಿಶ್ವವಿದ್ಯಾಲಯಕ್ಕೆ ಮೆಟ್ರೋ ಮೂಲಕ ತೆರಳಿದ ಪ್ರಧಾನಿ ನರೇಂದ್ರ ಮೋದಿ
ದೆಹಲಿ ಜನತೆಗೆ ಮುಂಜಾನೆಯೇ ಪ್ರಧಾನಿ ಮೋದಿ ಸರ್ಪ್ರೈಸ್ ನೀಡಿದ್ದಾರೆ. ಮೋದಿಯನ್ನು ದೆಹಲಿಯ ಮೆಟ್ರೋ(Metro)ದಲ್ಲಿ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು.
ದೆಹಲಿ ಜನತೆಗೆ ಮುಂಜಾನೆಯೇ ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಪ್ರೈಸ್ ನೀಡಿದ್ದಾರೆ. ಮೋದಿಯನ್ನು ದೆಹಲಿಯ ಮೆಟ್ರೋ(Metro)ದಲ್ಲಿ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು. ದೆಹಲಿಯ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು. ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಿ ಮೋದಿ ಕೌಂಟರ್ನಲ್ಲಿ ಟಿಕೆಟ್ ಟೋಕನ್ ಪಡೆದು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು. ಪ್ರಧಾನಿ ಮೆಟ್ರೋದಲ್ಲಿ ಪ್ರಯಾಣದಿಂದ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯವು 100 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯವನ್ನು ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಮೇ1 1922 ರಲ್ಲಿ ಸ್ಥಾಪಿಸಲಾಯಿತು.
ಪ್ರಧಾನಿ ಮೋದಿ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. 1978 ರಲ್ಲಿ, PM DU ನಿಂದ BA ಮಾಡಿದರು. ದೆಹಲಿ ಮೆಟ್ರೋದಲ್ಲಿ ಸಾಮಾನ್ಯರಂತೆ ಕುಳಿತು ಪ್ರಧಾನಿ ಮೋದಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ವಿಶ್ವವಿದ್ಯಾಲಯದವರೆಗೆ ಹಳದಿ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸಿದರು, ಎಎಫ್ಸಿ ಗೇಟ್ನಿಂದ ಟೋಕನ್ ಮೂಲಕ ನಿಲ್ದಾಣ ಪ್ರವೇಶಿಸಿದ್ದರು.
ಮತ್ತಷ್ಟು ಓದಿ: Video Viral: ದೆಹಲಿ ಮೆಟ್ರೋವನ್ನು ರಣರಂಗ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಇವರ ಗುದ್ದಾಟಕ್ಕೆ ಇತರ ಪ್ರಯಾಣಿಕರು ಹೈರಾಣ
ಆರಂಭದಲ್ಲಿ ಪ್ರಧಾನಿ ಮೋದಿ ಅವರ ಸುತ್ತ ಯಾರೂ ಇರಲಿಲ್ಲ. ಆದಾಗ್ಯೂ, ಕ್ರಮೇಣ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಸುತ್ತುವರೆದರು. ಈ ವೇಳೆ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿದರು. ಪ್ರಧಾನಿ ಮೋದಿ ಅವರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ, ಪಿಎಂ ಮೋದಿ ಅವರು ಕಂಪ್ಯೂಟರ್ ಸೆಂಟರ್ ಮತ್ತು ಫ್ಯಾಕಲ್ಟಿ ಆಫ್ ಟೆಕ್ನಾಲಜಿಯಲ್ಲಿನ ಅಕಾಡೆಮಿಕ್ ಬ್ಲಾಕ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ದೆಹಲಿ ವಿಶ್ವವಿದ್ಯಾಲಯವನ್ನು 1 ಮೇ 1922 ರಂದು ಸ್ಥಾಪಿಸಲಾಯಿತು. ದೆಹಲಿ ವಿಶ್ವವಿದ್ಯಾಲಯವು 46 ವಿಭಾಗಗಳು, 90 ಕಾಲೇಜುಗಳು ಮತ್ತು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರಧಾನಮಂತ್ರಿ ಅವರನ್ನು ಸ್ವಾಗತಿಸಲು ಕ್ರೀಡಾ ಆವರಣವನ್ನು ಸಿದ್ಧಪಡಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Fri, 30 June 23