Vanijya Bhawan: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ವಾಣಿಜ್ಯ ಭವನ ಉದ್ಘಾಟನೆ; ನಿರ್ಯಾತ್ ಪೋರ್ಟಲ್ಗೆ ಚಾಲನೆ
ಇಂಡಿಯಾ ಗೇಟ್ ಬಳಿ ನಿರ್ಮಿಸಲಾದ ವಾಣಿಜ್ಯ ಭವನವನ್ನು ಸ್ಮಾರ್ಟ್ ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ.
ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಆವರಣವಾದ ‘ವಾಣಿಜ್ಯ ಭವನ’ವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಇದೇ ವೇಳೆ ನಿರ್ಯಾತ್ (National Import-Export Record for Yearly Analysis of Trade) ಪೋರ್ಟಲ್ಗೂ ಮೋದಿ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ಪೋರ್ಟಲ್ NIRYAT (ವಾರ್ಷಿಕ ವ್ಯಾಪಾರದ ವಿಶ್ಲೇಷಣೆಗಾಗಿ ರಾಷ್ಟ್ರೀಯ ಆಮದು-ರಫ್ತು ದಾಖಲೆ) ಅನ್ನು ಕೂಡ ಉದ್ಘಾಟಿಸಲಿದ್ದಾರೆ. ಇದು ಮಧ್ಯಸ್ಥಗಾರರಿಗೆ ಭಾರತದ ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆಯಲು ಸಿಂಗಲ್ ಸ್ಟಾಪ್ ವೇದಿಕೆಯಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
PM Modi to inaugurate Vanijya Bhawan today
Read @ANI Story | https://t.co/1r4tOZ0CNE#PMModi #VanijyaBhawan pic.twitter.com/d6F0SKGKll
— ANI Digital (@ani_digital) June 22, 2022
ಇಂಡಿಯಾ ಗೇಟ್ ಬಳಿ ನಿರ್ಮಿಸಲಾದ ವಾಣಿಜ್ಯ ಭವನವನ್ನು ಸ್ಮಾರ್ಟ್ ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಇಂಧನ ಉಳಿತಾಯದ ಬಗ್ಗೆ ವಿಶೇಷ ಗಮನವನ್ನು ಹೊಂದಿರುವ ವಾಸ್ತುಶಿಲ್ಪದಿಂದ ನಿರ್ಮಿಸಲಾದ ಕಟ್ಟಡವಾಗಿದೆ. ಇದನ್ನು ಸಚಿವಾಲಯದ ಅಡಿಯಲ್ಲಿ ಎರಡು ಇಲಾಖೆಗಳು ಅಂದರೆ ವಾಣಿಜ್ಯ ಇಲಾಖೆ ಮತ್ತು ಉದ್ಯಮ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಉತ್ತೇಜನಕ್ಕಾಗಿ ಬಳಸಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ