ಕೊಚ್ಚಿ (ಕೇರಳ): ಪ್ರದಾನಿ ನರೇಂದ್ರ ಮೋದಿ (Narendra Modi) ಅವರು ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ (Water Metro, Kochi) ಸೇವೆಗೆ ಇಂದು( ಏಪ್ರಿಲ್ 25) ಚಾಲನೆ ನೀಡಲಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಮೆಟ್ರೋ ಸಂಪರ್ಕದ ವಿಸ್ತರಣೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಇದಕ್ಕೆ ವಾಟರ್ ಮೆಟ್ರೋ ವಿಧಾನ ಪ್ರಮುಖ ಉದಾಹರಣೆಯಾಗಿದೆ. ಈ ಯೋಜನೆಯು ಆರ್ಥಿಕಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದೊಂದು ವಿಶಿಷ್ಟವಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತೆಯೇ ಅದೇ ಅನುಭವ ಮತ್ತು ಪ್ರಯಾಣದ ಸುಲಭತೆಯನ್ನು ನೀಡಲಿದೆ. ಕೊಚ್ಚಿಯಂತಹ ನಗರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.
ವಿಶಾಲವಾದ ಕಿಟಕಿಗಳನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ವಾಟರ್ ಮೆಟ್ರೋ ಹಿನ್ನೀರಿನ ಸುಂದರ ದೃಶ್ಯಗಳ ಜೊತೆಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಹೆಚ್ಚನ ಭದ್ರತೆಯೂ ನೀಡಲಾಗಿದೆ. ಈ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂಪಾಯಿಯಾಗಿದೆ.
ಅತ್ಯಂತ ಜನನಿಬಿಡ ಜಿಲ್ಲೆಯಲ್ಲಿ ಒಂದಾಗಿರುವ ಕೊಚ್ಚಿಯ ಪೋರ್ಟ್ ಸಿಟಿಯಲ್ಲಿ 1,137 ಕೋಟಿ ರೂಪಾಯಿ ವೆಚ್ಚದಲ್ಲಿ ವಾಟರ್ ಮೆಟ್ರೋ ನಿರ್ಮಾಣ ಮಾಡಲಾಗಿದ್ದು, ಕೊಚ್ಚಿಯ ಸುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುತ್ತದೆ. ಕೊಚ್ಚಿ ವಾಟರ್ ಮೆಟ್ರೋ 8 ಎಲೆಕ್ಟ್ರಿಕ್ ಬೋಟ್‌ಗಳು 76 ಕಿಮೀ ಹಾಗೂ 38 ಟರ್ಮಿನಲ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸಲಿದೆ. ವಾಟರ್ ಮೆಟ್ರೋ ಯೋಜನೆಯು 78 ಕಿಲೋಮೀಟರ್ ವ್ಯಾಪಿಸಿದ್ದು, ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
A significant enhancement to Kochi’s infrastructure! The Kochi Water Metro would be dedicated to the nation. It will ensure seamless connectivity for Kochi. pic.twitter.com/SAvvEz8SFt
— Narendra Modi (@narendramodi) April 23, 2023
ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಬೇಕಾದರೆ ಕೊಚ್ಚಿ 1 ಕಾರ್ಡ್ ಹೊಂದಿರಬೇಕು. ಪ್ರಯಾಣಿಕರು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದ್ದು, ಹೈಕೋರ್ಟ್-ವೈಪೀನ್ ಮಾರ್ಗದ ಪ್ರಯಾಣ ದರ 20 ರೂ. ನಿಗದಿ ಮಾಡಲಾಗಿದೆ, ವೈತ್ತಿಲ-ಕಾಕನಾಡ್ ಮಾರ್ಗದ ಪ್ರಯಾಣದ ದರ 30 ರೂ. ನಿಗದಿ ಮಾಡಲಾಗಿದೆ. ಇದಲ್ಲದೆ, ಪಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ವಾರದ ಪಾಸ್ 12 ಟ್ರಿಪ್ಗೆ 180 ರೂ. ನಿಗದಿ ಮಾಡಲಾಗಿದ್ದರೆ, ಮಾಸಿಕ ಪಾಸ್ 50 ಟ್ರಿಪ್ಗೆ 600 ರೂಪಾಯಿ ಮತ್ತು ತ್ರೈಮಾಸಿಕ ಪಾಸ್ 150 ಟ್ರಿಪ್ಗೆ 1,500 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಚಿತ್ತರಗಿ ಶ್ರೀ, ಪೇಚಿಗೆ ಸಿಲುಕಿದ ಸಂಘಟಕರು
ಮೆಟ್ರೋ ಲೈಟ್: ಇದು ಕಡಿಮೆ ವೆಚ್ಚದ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಆಗಿದ್ದು, ಆರಾಮ, ಅನುಕೂಲತೆ, ಸುರಕ್ಷತೆ, ಸಮಯಪ್ರಜ್ಞೆ, ವಿಶ್ವಾಸಾರ್ಹತೆ ಮತ್ತು ಪರಿಸರ ಸ್ನೇಹಿ ವಿಷಯದಲ್ಲಿ ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತೆಯೇ ಅದೇ ಅನುಭವ ಮತ್ತು ಪ್ರಯಾಣದ ಸುಲಭತೆಯನ್ನು ಹೊಂದಿದೆ. ಮೆಟ್ರೋ ಲೈಟ್ ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯ 40% ವೆಚ್ಚವಾಗುತ್ತದೆ. ಜಮ್ಮು, ಶ್ರೀನಗರ ಮತ್ತು ಗೋರಖ್ಪುರದಂತಹ ನಗರಗಳಲ್ಲಿ ಇದನ್ನು ಯೋಜಿಸಲಾಗಿದೆ.
ಮೆಟ್ರೋ ನಿಯೋ: ಇದು ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದೆ, ಇದು ರಸ್ತೆಯ ಸ್ಲ್ಯಾಬ್ನಲ್ಲಿ ಚಲಿಸುವ ಓವರ್ಹೆಡ್ ಟ್ರಾಕ್ಷನ್ ಸಿಸ್ಟಮ್ನಿಂದ ಚಾಲಿತವಾಗಿದೆ. ಆರಾಮ, ಅನುಕೂಲತೆ, ಸುರಕ್ಷತೆ, ಸಮಯಪ್ರಜ್ಞೆ, ವಿಶ್ವಾಸಾರ್ಹತೆ ಮತ್ತು ಪರಿಸರ ಸ್ನೇಹಿ ವಿಷಯದಲ್ಲಿ ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತೆಯೇ ಅದೇ ಅನುಭವ ಮತ್ತು ಪ್ರಯಾಣದ ಸುಲಭತೆಯನ್ನು ಹೊಂದಿದೆ. ಇದನ್ನು ಮಹಾರಾಷ್ಟ್ರದ ನಾಸಿಕ್ನಲ್ಲಿ ಯೋಜಿಸಲಾಗಿದೆ.
ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ: ಇದೇ ಮೊದಲ ಬಾರಿಗೆ ಎನ್ಸಿಆರ್ನ (ದೆಹಲಿ-ಮೀರತ್) ಎರಡು ನಗರಗಳನ್ನು ಸಂಪರ್ಕಿಸುವ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಪ್ರಾದೇಶಿಕ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನುಂಟುಮಾಡುವ ಪರಿವರ್ತನಾತ್ಮಕ ಮಧ್ಯಪ್ರವೇಶವಾಗಿ ಇದನ್ನು ಕಲ್ಪಿಸಲಾಗಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sun, 23 April 23