ದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಅಕ್ಟೋಬರ್ 1) ಬೆಳಗ್ಗೆ 11 ಗಂಟೆಗೆ ನಗರ ವಿಭಾಗದ ಸ್ವಚ್ಛ ಭಾರತ ಮಿಷನ್ 2.0 ಮತ್ತು ಅಮೃತ್ 2.0 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ದೇಶದ ಎಲ್ಲ ನಗರಗಳನ್ನೂ ಕಸಮುಕ್ತಗೊಳಿಸುವ ಮತ್ತು ನೀರಿನ ಮೂಲಗಳ ಸುರಕ್ಷಿತವಾಗಿರಿಸುವ ಉದ್ದೇಶದ ಮೇರೆಗೆ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.
2009ರಲ್ಲಿ ಜಾರಿಗೆ ಬಂದಿದ್ದ ನಿರ್ಮಲ ಭಾರತ ಯೋಜನೆಯು ಅಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳದ ಕಾರಣ 2014ರ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ವಚ್ಛ ಭಾರತ ಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಕ್ಕೆ ತಂದಿತು. 2019ಕ್ಕೆ ಸ್ವಚ್ಛ ಭಾರತ್ ಮಿಶನ್ ಮೊದಲನೇ ಹಂತ ಮುಕ್ತಾಯಗೊಂಡಿದ್ದು 2020-2021ರಿಂದ 2024-2025ರವರೆಗೆ ಸ್ವಚ್ಛ ಭಾರತ್ ಯೋಜನೆಯ 2ನೇ ಹಂತ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
PM Narendra Modi to launch Swachh Bharat Mission-Urban 2.0 and AMRUT 2.0 tomorrow – 1st October, at 11 am. Missions designed to make all our cities ‘Garbage Free’ and ‘Water Secure: Prime Minister’s Office
(file photo) pic.twitter.com/n41cYVc6X5
— ANI (@ANI) September 30, 2021
ಸ್ವಚ್ಛ ಭಾರತ್ ಯೋಜನೆಯನ್ನು ಗ್ರಾಮೀಣ ಮತ್ತು ನಗರಗಳೆಂಬ ಎರಡು ವಿಭಾಗ ಮಾಡಲಾಗಿದೆ. ಕುಡಿಯುವ ನೀರಿನ ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆಯೇ ಮೊದಲಾದ ಹಲವು ಕಾರ್ಯಗಳನ್ನು ಈ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಸ್ವಚ್ಛ ಭಾರತ ಯೋಜನೆಯಡಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಅತ್ಯಂತ ಮಹತ್ವ ನೀಡಲಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಚ್ಛತಾ ಕಾರ್ಯಕ್ಕಿಳಿದಿದ್ದರು.
ಇದನ್ನೂ ಓದಿ:
Published On - 10:20 pm, Thu, 30 September 21