PM Special Scheme: ಪಿಎಂ ಸ್ಪೆಷಲ್ ಯೋಜನೆ; ವೃದ್ಧರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಚಿಂತನೆ

| Updated By: ಸುಷ್ಮಾ ಚಕ್ರೆ

Updated on: Jul 06, 2022 | 8:33 AM

12ನೇ ತರಗತಿಯವರೆಗೆ ಓದಿದ ಯಾರಾದರೂ ಈ ಯೋಜನೆಯಡಿ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕನಿಷ್ಠ 10,000 ಜನರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.

PM Special Scheme: ಪಿಎಂ ಸ್ಪೆಷಲ್ ಯೋಜನೆ; ವೃದ್ಧರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಚಿಂತನೆ
ಸಾಂದರ್ಭಿಕ ಚಿತ್ರ
Image Credit source: Hindustan Times
Follow us on

ನವದೆಹಲಿ: ವೃದ್ಧರಿಗೆ ಮನೆ ಬಾಗಿಲಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರವು ‘ಪಿಎಂ ಸ್ಪೆಷಲ್’ (PM Special Scheme) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಯೋಜನೆಯ ಭಾಗವಾಗಿ ಮುಂದಿನ ಮೂರು ವರ್ಷಗಳಲ್ಲಿ 1,00,000 ವೃದ್ಧರಿಗೆ ಆರೈಕೆ ನೀಡುವವರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ (Union Government) ಯೋಚಿಸುತ್ತಿದೆ. ಜೆರಿಯಾಟ್ರಿಕ್ ಕೇರ್ (Geriatric Care) ಎನ್ನುವುದು ವೈದ್ಯಕೀಯ ಕ್ಷೇತ್ರವಾಗಿದ್ದು, ವಯಸ್ಸಾದವರ ಆರೋಗ್ಯ ರಕ್ಷಣೆಯನ್ನೇ ಇದು ಗುರಿಯಾಗಿಸಿಕೊಂಡಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವಾಲಯವು ಒಂದು ವಾರದೊಳಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ಈ ಸೌಲಭ್ಯವನ್ನು ನೀಡುವ ಆನ್‌ಲೈನ್ ಪೋರ್ಟಲ್ ಅನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯಾರಾದರೂ ತಮ್ಮ ಮನೆಯಲ್ಲಿ ವೃದ್ಧರ ಆರೈಕೆದಾರರನ್ನು ನೇಮಿಸಿಕೊಳ್ಳಲು ಬಯಸಿದರೆ, ಅವರಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಒಂದುವೇಳೆ ವೃದ್ಧರನ್ನು ನೋಡಿಕೊಳ್ಳುವವರು ಸಿಕ್ಕಿದರೂ ಅವರು ಸರಿಯಾಗಿ ತರಬೇತಿ ಪಡೆದಿರುವುದಿಲ್ಲ, ಕೆಲವೊಮ್ಮೆ ಸಾಕಷ್ಟು ಶುಲ್ಕ ವಿಧಿಸುತ್ತಾರೆ. ಆದರೆ, ನಾವು ಆರೋಗ್ಯ ಸಚಿವಾಲಯದಿಂದಲೇ ಅತ್ಯಂತ ವ್ಯವಸ್ಥಿತವಾದ ತರಬೇತಿಯನ್ನು ನೀಡುವ ಮೂಲಕ ವೃತ್ತಿಪರರನ್ನು ಸಿದ್ಧಪಡಿಸಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಸಚಿವಾಲಯದ ಕಾರ್ಯದರ್ಶಿ ಆರ್​. ಸುಬ್ರಮಣ್ಯಂ ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi: ಆಧಾರ್​ ಕಾರ್ಡ್​ನಿಂದ 2 ವರ್ಷದ ಬಳಿಕ ಹೆತ್ತವರನ್ನು ಸೇರಿದ ಯುವತಿಯ ಕತೆ ಹಂಚಿಕೊಂಡ ಮೋದಿ; ವಿಡಿಯೋ ಇಲ್ಲಿದೆ

12ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದ ಯಾರಾದರೂ ಈ ಯೋಜನೆಯಡಿ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕನಿಷ್ಠ 10,000 ಜನರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಜನರ ಡೇಟಾಬೇಸ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ವಯಸ್ಸಾದ ಆರೈಕೆದಾರರನ್ನು ಬಯಸುವ ಯಾರಾದರೂ ಇದಕ್ಕೆ ಲಾಗಿನ್ ಮಾಡಬಹುದು. ಈ ಯೋಜನೆಯು ಭಾರತದಲ್ಲಿ ವೃದ್ಧಾಪ್ಯ ಆರೈಕೆ ಸೇವೆಯ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯು ಸುಮಾರು 1 ಲಕ್ಷ (1,00,000) ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.