Police officers Transferred: ಜಮ್ಮು ಮತ್ತು ಕಾಶ್ಮೀರದ 74 ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಕೇಂದ್ರ ಮಹತ್ವದ ಆದೇಶ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2023 | 11:50 AM

ಜಮ್ಮು - ಕಾಶ್ಮೀರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ 20 ಐಪಿಎಸ್ ಅಧಿಕಾರಿಗಳು ಸೇರಿದಂತೆ 74 ಪೊಲೀಸ್ ಅಧಿಕಾರಿಗಳನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Police officers Transferred: ಜಮ್ಮು ಮತ್ತು ಕಾಶ್ಮೀರದ 74 ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಕೇಂದ್ರ ಮಹತ್ವದ ಆದೇಶ
ಸಾಂದರ್ಭಿಕ ಚಿತ್ರ
Follow us on

ಜಮ್ಮು – ಕಾಶ್ಮೀರ: ಜಮ್ಮು – ಕಾಶ್ಮೀರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ 20 ಐಪಿಎಸ್ ಅಧಿಕಾರಿಗಳು ಸೇರಿದಂತೆ 74 ಪೊಲೀಸ್ ಅಧಿಕಾರಿಗಳನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮವು ಏಳು ಜಿಲ್ಲೆಗಳ ಹೊಸ ಪೊಲೀಸ್ ಮುಖ್ಯಸ್ಥರನ್ನು ಮತ್ತು ಮೂರು ಶ್ರೇಣಿಗಳ ಡಿಐಜಿಗಳನ್ನು ನೇಮಿಸಲು ಕಾರಣವಾಯಿತು. 1997ರ ಬ್ಯಾಚ್‌ನ ಹಿರಿಯ IPS ಅಧಿಕಾರಿ ಗರೀಬ್ ದಾಸ್ ಅವರು ಉಧಮ್‌ಪುರದಲ್ಲಿರುವ ಶೇರಿ ಕಾಶ್ಮೀರ ಪೊಲೀಸ್ ಅಕಾಡೆಮಿ (SKPA) ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ದಕ್ಷಿಣ ಕಾಶ್ಮೀರ ವ್ಯಾಪ್ತಿಯ ಐಪಿಎಸ್ ಅಧಿಕಾರಿ ರಯೀಸ್ ಮೊಹಮ್ಮದ್ ಭಟ್ ಅವರನ್ನು ನೂತನ ಡಿಐಜಿಯಾಗಿ ನೇಮಕ ಮಾಡಲಾಗಿದ್ದು, ಮತ್ತೊಬ್ಬ ಐಪಿಎಸ್ ವಿವೇಕ್ ಗುಪ್ತಾ ಅವರನ್ನು ಉತ್ತರ ಕಾಶ್ಮೀರ ವ್ಯಾಪ್ತಿಯ ಡಿಐಜಿಯಾಗಿ ಮತ್ತು ಶಕ್ತಿ ಪಾಠಕ್ ಅವರನ್ನು ಜಮ್ಮು-ಸಾಂಬಾ-ಕಥುವಾ ವ್ಯಾಪ್ತಿಯ ಹೊಸ ಡಿಐಜಿಯಾಗಿ ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

IPS ಅಧಿಕಾರಿಗಳಾದ ಡಾ ಅಜೀತ್ ಸಿಂಗ್, ಅಬ್ದುಲ್ ಖಯೂಮ್ ಮತ್ತು ಹಸೀಬ್-ಉರ್-ರೆಹಮಾನ್ ಅವರನ್ನು ಎಸ್‌ಐಎಯ ಡಿಐಜಿಗಳಾಗಿ ನೇಮಿಸುವ ಮೂಲಕ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಅನ್ನು ಬಲಪಡಿಸಲಾಗಿದೆ. ಐಪಿಎಸ್ ಅಧಿಕಾರಿ ಶ್ರೀಧರ್ ಪಾಟೀಲ್ ಅವರನ್ನು ಜಮ್ಮುವಿನ ಸಂಚಾರ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ 59 ಎಸ್‌ಪಿಗಳಲ್ಲಿ ನಾಗ್‌ಪುರೆ ಅಮೋದ್ ಅಶೋಕ್ (ಐಪಿಎಸ್) ಅವರನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಬಾರಾಮುಲ್ಲಾ ಆಗಿ ನಿಯೋಜಿಸಲಾಗಿದೆ, ಲಕ್ಷಯ್ ಶರ್ಮಾ (ಐಪಿಎಸ್) ಮತ್ತು ಸಾಹಿಲ್ ಸಾರಂಗಲ್ (ಐಪಿಎಸ್) ಅವರನ್ನು ಬಂಡಿಪೋರಾ ಮತ್ತು ಕುಲ್ಗಾಂ ಜಿಲ್ಲೆಗಳ ಎಸ್‌ಪಿಗಳಾಗಿ ನಿಯೋಜಿಸಲಾಗಿದೆ.

ಇದನ್ನು ಓದಿ:Amit Shah ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆ, ಭದ್ರತೆಗೆ ವಿಷಯಗಳ ಬಗ್ಗೆ ಸಭೆ ನಡೆಸಿದ ಅಮಿತ್​​​ ಶಾ

ಅದೇ ರೀತಿ, ದೀಪ್ ಸಿಂಗ್ ಜಮ್ವಾಲ್ ಅವರನ್ನು ಕಥುವಾ ಜಿಲ್ಲೆಯ ಎಸ್ಪಿಯಾಗಿ, ಬೆನಮ್ ತೋಷ್ ಅವರನ್ನು ಸಾಂಬಾ ಜಿಲ್ಲೆಯ ಎಸ್‌ಎಸ್‌ಪಿಯಾಗಿ ನೇಮಿಸಲಾಗಿದೆ, ಆದರೆ ಖಲೀಲ್ ಅಹ್ಮದ್ ಪೋಸ್ವಾಲ್ ಮತ್ತು ಅಲ್-ತಾಹಿರ್ ಗೀಲಾನಿ ಕಿಶ್ತ್ವಾರ್ ಮತ್ತು ಬದ್ಗಾಮ್ ಜಿಲ್ಲೆಗಳ ಹೊಸ ಎಸ್‌ಪಿಗಳಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶದಂತೆ ವಿವಿಧ ಜಿಲ್ಲೆಗಳಲ್ಲಿ ಹತ್ತು ಹೊಸ ಹೆಚ್ಚುವರಿ ಎಸ್ಪಿಗಳನ್ನು ನಿಯೋಜಿಸಲಾಗಿದೆ.

ಶುಕ್ರವಾರ ಸಂಜೆ ಗೃಹ ಇಲಾಖೆ ಹೊರಡಿಸಿದ ಎರಡು ಪ್ರತ್ಯೇಕ ಆದೇಶಗಳ ಪ್ರಕಾರ, 15 ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್‌ಗಳು (ಡಿಐಜಿಗಳು) ಮತ್ತು 59 ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಪುನರ್ ರಚನೆಯಿಂದ ಪ್ರಭಾವಿತರಾಗಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Sat, 7 January 23