ಕೋಮು ಗಲಭೆ ಸೃಷ್ಟಿಸಲು ಹಿಂದೂ ಮಹಾ ಸಭಾದ ಕಾರ್ಯಕರ್ತರಿಂದ ಗೋಹತ್ಯೆ: ಯುಪಿ ಪೊಲೀಸ್

|

Updated on: Apr 09, 2023 | 8:40 AM

ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಆಗ್ರಾದಲ್ಲಿ ಕೋಮುಗಲಭೆಯನ್ನು ಪ್ರಚೋದಿಸಲು ಭಾರತ ಹಿಂದೂ ಮಹಾಸಭಾದ ಕೆಲವು ಸದಸ್ಯರು ಗೋಹತ್ಯೆ ಮಾಡಿದ್ದಾರೆ ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ಬಹಿರಂಗಪಡಿಸಿದ್ದಾರೆ.

ಕೋಮು ಗಲಭೆ ಸೃಷ್ಟಿಸಲು ಹಿಂದೂ ಮಹಾ ಸಭಾದ ಕಾರ್ಯಕರ್ತರಿಂದ ಗೋಹತ್ಯೆ: ಯುಪಿ ಪೊಲೀಸ್
ಆರೋಪಿಗಳು
Follow us on

ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಆಗ್ರಾದಲ್ಲಿ ಕೋಮುಗಲಭೆಯನ್ನು ಪ್ರಚೋದಿಸಲು ಭಾರತ ಹಿಂದೂ ಮಹಾಸಭಾದ ಕೆಲವು ಸದಸ್ಯರು ಗೋಹತ್ಯೆ ಮಾಡಿದ್ದಾರೆ ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ಬಹಿರಂಗಪಡಿಸಿದ್ದಾರೆ. ರಾಮನವಮಿಯಂದು ಗೋಹತ್ಯೆ ಆರೋಪದ ಮೇಲೆ ನಾಲ್ವರು ಯುವಕರನ್ನು ಆಗ್ರಾ ಪೊಲೀಸರು ಬಂಧಿಸಿದ್ದರು. ಆಗ್ರಾದ ಎತ್ಮದುದ್ದೌಲಾ ಪ್ರದೇಶದ ಗೌತಮ್ ನಗರದಲ್ಲಿ ರಾಮನವಮಿ ಆಚರಣೆ ವೇಳೆ ದಾಳಿ ನಡೆಸಿ ಯುವಕರನ್ನು ಬಂಧಿಸಲಾಗಿದೆ. ಭಾರತ್ ಹಿಂದೂ ಮಹಾಸಭಾದ ಹಲವಾರು ಪದಾಧಿಕಾರಿಗಳ ಹೆಸರುಗಳು ಗೋಹತ್ಯೆ ಸಂಚಿನಲ್ಲಿ ಕಾಣಿಸಿಕೊಂಡಿವೆ ಎಂದು ಪ್ರಾದೇಶಿಕ ಪೊಲೀಸರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ರಾಮನವಮಿಯಂದು ತಾವೇ ಗೋ ಹತ್ಯೆ ಮಾಡಿ ಕೋಮು ಗಲಭೆ ಸೃಷ್ಟಿಸಲು ಹಿಂದೂ ಮಹಾಸಭಾದ ಕಾರ್ಯಕರ್ತರು ಪ್ರಯತ್ನಿಸಿದ್ದರು ಎನ್ನುವ ಸ್ಫೋಟಕ ಹೇಳಿಕೆಯನ್ನು ಉತ್ತರ ಪ್ರದೇಶ ಪೊಲೀಸರು ನೀಡಿದ್ದಾರೆ. ರಾಮನವಮಿಯಂದು ಆಗ್ರಾದ ವಾತಾವರಣವನ್ನು ಹಾಳು ಮಾಡಲು ಸಂಚು ರೂಪಿಸಲಾಗಿತ್ತು.

ಮತ್ತಷ್ಟು ಓದಿ: ರಾಮನವಮಿ ವೇಳೆ ಕೋಮು ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಗೌತಮ್ ನಗರದ ಬಳಿ ಮಾರ್ಚ್​ 30 ರಂದು ಗೋಹತ್ಯೆಗೆ ಸಂಚು ರೂಪಿಸಿದ್ದರು. ಇದೀಗ ಪೊಲೀಸರು ಈ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆರಕ್ಕೂ ಅಧಿಕ ಮಂದಿ ತಲೆ ಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ಜಿತೇಂದ್ರ ಕುಶ್ವಾಹ ಅವರು ಗೋ ಹತ್ಯೆ ಪ್ರಕರಣವನ್ನು ದಾಖಲಿಸಿದ್ದರು. ಲೋಹಮಂಡಿ ನಿವಾಸಿಗಳಾದ ರಿಜ್ವಾನ್, ನಕೀಂ, ಬಿಜ್ಜು ಮೊದಲಾದವರ ಹೆಸರುಗಳನ್ನು ಹೇಳಲಾಗಿತ್ತು. ಈ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು ಇಲ್ಲಿ ಹೆಸರಿಸಲಾಗಿರುವ ಆರೋಪಿಗಳಿಗೂ ಹಾಗೂ ಗೋ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ