ಪಂಜಾಬ್: ಸುಖಪಾಲ್ ಸಿಂಗ್ ಖೈರಾ ಬಂಧನ ರಾಜಕೀಯ ಸೇಡು ಎಂದ ಕಾಂಗ್ರೆಸ್
ಖೈರಾ ಬಂಧನವನ್ನು ವಿರೋಧಿಸಿದ ಪಂಜಾಬ್ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್‌ಗೆ ಖೈರಾ ಬಂಧನವು ಸಂಪೂರ್ಣವಾಗಿ ರಾಜಕೀಯ ದ್ವೇಷದ ಪರಿಣಾಮವಾಗಿದೆ ಎಂದು ಹೇಳಿದರು. ಪ್ರತೀಕಾರದ ಮನೋಭಾವದಿಂದ ಪಂಜಾಬ್ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯಪಾಲರೊಂದಿಗಿನ ಸಂಭಾಷಣೆಯ ಕುರಿತು ರಾಜಾ ವಾರಿಂಗ್ ಟ್ವೀಟ್ ಕೂಡ ಹಂಚಿಕೊಂಡಿದ್ದಾರೆ.
ದೆಹಲಿ ಸೆಪ್ಟೆಂಬರ್ 29: 2015ರ ಡ್ರಗ್ಸ್ ಪ್ರಕರಣಕ್ಕೆ (2015 drugs case) ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ (Sukhpal Singh Khaira) ಅವರ ಬಂಧನವನ್ನು ‘ರಾಜಕೀಯ ಸೇಡು’ ಎಂದು ಟೀಕಿಸಿರುವ ಪಕ್ಷದ ಪಂಜಾಬ್ (Punjab) ಘಟಕದ ಮುಖ್ಯಸ್ಥ ಅಮರಿಂದರ್ ರಾಜಾ ವಾರಿಂಗ್ (Amarinder Raja Warring), ನಾವು ಕೊನೆಯವರೆಗೂ ಹೋರಾಡುತ್ತೇವೆ ಎಂದು ಶುಕ್ರವಾರ ಹೇಳಿದ್ದಾರೆ. ಎಎಪಿ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ನಾವು ಇಂದು ಪಂಜಾಬ್ ಕಾಂಗ್ರೆಸ್‌ನ ಹಿರಿಯ ನಾಯಕತ್ವದೊಂದಿಗೆ ನಮ್ಮ ಶಾಸಕ ಸುಖಪಾಲ್ ಖೈರಾ ಅವರನ್ನು ಫಜಿಲ್ಕಾದಲ್ಲಿ ಭೇಟಿಯಾಗಲು ಹೋಗಿದ್ದೆವು.ಪೊಲೀಸರು ನಮ್ಮನ್ನು ಭೇಟಿಯಾಗದಂತೆ ತಡೆದರು. ಎಎಪಿ ಪಕ್ಷದ ಈ ಸೇಡಿನ ವಿರುದ್ಧ ಕಾನೂನಾತ್ಮಕವಾಗಿ ಮತ್ತು ಬೀದಿಗಿಳಿದು ಹೋರಾಡುತ್ತೇವೆ. ಅಂತಹ ಒತ್ತಡದ ತಂತ್ರಗಳಿಗೆ ನಾವು ಹೆದರುವುದಿಲ್ಲ,ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಮಾಧ್ಯಮಗಳಿಗೆ ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಕಂಡು ಬಂದ ಸ್ಥಳೀಯ ಆಡಳಿತ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಕಳೆದ ದಿನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಜಲಾಲಾಬಾದ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಅವರನ್ನು ಭೇಟಿ ಮಾಡಲು ರಾಜ್ಯಾಧ್ಯಕ್ಷ ರಾಜಾ ವಾರಿಂಗ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಠಾಣೆ ಎದುರು ಆಗಮಿಸಿದರು. ರಾಜ್ ವಾರಿಂಗ್ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಕೂಡ ಉಪಸ್ಥಿತರಿದ್ದರು. ಈ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡ ಪೊಲೀಸರು ಠಾಣೆಯ ಗೇಟ್ ಬಂದ್ ಮಾಡಿದ್ದರು. ಪೊಲೀಸ್ ಠಾಣೆಯ ಗೇಟ್ ತೆರೆಯುವಂತೆ ರಾಜಾ ವಾರಿಂಗ್ ಪೊಲೀಸರಿಗೆ ಮನವಿ ಮಾಡುತ್ತಲೇ ಇದ್ದರು, ಆದರೆ ಪೊಲೀಸ್ ಅಧಿಕಾರಿಗಳು ಗೇಟ್ ತೆರೆಯಲು ನಿರಾಕರಿಸಿದ್ದಾರೆ. ವಾರಿಂಗ್ ಕಾರ್ಯಕರ್ತರೊಂದಿಗೆ ಗೇಟ್ ಮುಂದೆ ಬಹಳ ಹೊತ್ತು ನಿಂತಿದ್ದರು. ಆದರೆ ಗೇಟ್ ತೆರೆಯದ ಕಾರಣ ಅವರು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲು ಫಾಜಿಲ್ಕಾಗೆ ತೆರಳಿದರು.
Called upon Honourable Governor Banwarilal Purohit along with a delegation of senior @INCPunjab leadership including CLP @Partap_Sbajwa ji & apprised him about the vindictive action of the @AAPPunjab govt against our MLA @SukhpalKhaira ji & requested his immediate intervention. pic.twitter.com/PC18neGlla
— Amarinder Singh Raja Warring (@RajaBrar_INC) September 28, 2023
ಜಲಾಲಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಜಲಾಲಾಬಾದ್ ಪೊಲೀಸ್ ಠಾಣೆಯಲ್ಲಿ 2015 ರ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ, ಅದಕ್ಕಾಗಿಯೇ ಅವರನ್ನು ಈ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್ ನಮ್ಮನ್ನು ನೋಡಿದ ತಕ್ಷಣ ಪೊಲೀಸರು ಪೊಲೀಸ್ ಠಾಣೆಯ ಗೇಟ್ ಅನ್ನು ಮುಚ್ಚಿದ್ದಾರೆ. ವಾರಿಂಗ್‌ನ ಪುನರಾವರ್ತಿತ ಮನವಿಯ ಹೊರತಾಗಿಯೂ, ಪೊಲೀಸ್ ಅಧಿಕಾರಿಗಳು ಗೇಟ್‌ನ ಬೀಗವನ್ನು ತೆರೆಯಲಿಲ್ಲ, ಆದರೆ ಖೈರಾ ಅವರನ್ನು ಫಜಿಲ್ಕಾದ ಸಿಐಎ ಸಿಬ್ಬಂದಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಅವರ ನಿಯೋಗದಲ್ಲಿ ಒಬ್ಬರನ್ನು ಒಳಗೆ ಕುಳಿತುಕೊಳ್ಳಲು ಹೇಳಿದ್ದರೂ, ಎಸ್‌ಎಸ್‌ಪಿಗಾಗಿ ಕಾಯಲು ಕೇಳಲಾಯಿತು. ನಂತರ ಎಸ್‌ಎಸ್‌ಪಿ ಬಂದಾಗ, ಅವರು ಕಾಂಗ್ರೆಸ್ ನಾಯಕ ಖೈರಾ ಅವರನ್ನು ಭೇಟಿಯಾಗುವಂತೆ ಮನವಿ ಮಾಡಿದರು. ಆದರೆ ಎಸ್‌ಎಸ್‌ಪಿ ಕೂಡ ಅವರನ್ನು ಭೇಟಿಯಾಗಲು ನಿರಾಕರಿಸಿದ್ದು, ಅವರ ಒತ್ತಾಯದ ಮೇರೆಗೆ ಅವರ ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ಮನವಿ
ಇದಕ್ಕೂ ಮುನ್ನ, ಖೈರಾ ಬಂಧನವನ್ನು ವಿರೋಧಿಸಿದ ಪಂಜಾಬ್ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್‌ಗೆ ಖೈರಾ ಬಂಧನವು ಸಂಪೂರ್ಣವಾಗಿ ರಾಜಕೀಯ ದ್ವೇಷದ ಪರಿಣಾಮವಾಗಿದೆ ಎಂದು ಹೇಳಿದರು. ಪ್ರತೀಕಾರದ ಮನೋಭಾವದಿಂದ ಪಂಜಾಬ್ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯಪಾಲರೊಂದಿಗಿನ ಸಂಭಾಷಣೆಯ ಕುರಿತು ರಾಜಾ ವಾರಿಂಗ್ ಟ್ವೀಟ್ ಕೂಡ ಹಂಚಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರೊಂದಿಗೆ ರಾಜ್ಯಪಾಲರಿಗೆ ಸಂಪೂರ್ಣ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದೇನೆ ಎಂದು ಅವರು ಬರೆದಿದ್ದಾರೆ. ಅದೇ ಸಮಯದಲ್ಲಿ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆಯೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಪಂಜಾಬ್ನ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ
ಏನಿದು ಪ್ರಕರಣ?
ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೇರ್ ಅವರನ್ನು ಇಡಿ 2015ರಿಂದ ವಿಚಾರಣೆ ನಡೆಸುತ್ತಿದೆ. ಭುಲಾತ್‌ನಲ್ಲಿರುವ ಖೈರಾ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. 2015ರ ಮಾರ್ಚ್ 9ರಂದು ಫಜಿಲ್ಕಾದಲ್ಲಿ 24 ಚಿನ್ನದ ಬಿಸ್ಕತ್ತುಗಳು, 2 ಕೆಜಿ ಹೆರಾಯಿನ್, 1 ಕಂಟ್ರಿ ಪಿಸ್ತೂಲ್ ಮತ್ತು 2 ಪಾಕಿಸ್ತಾನಿ ಸಿಮ್ ಕಾರ್ಡ್‌ಗಳು ಸೇರಿದಂತೆ 9 ಕಳ್ಳಸಾಗಣೆದಾರರನ್ನು ಬಂಧಿಸಿದ ನಂತರ ಸುಖಪಾಲ್ ಸಿಂಗ್ ಖೈರಾ ಹೆಸರು ಬೆಳಕಿಗೆ ಬಂದಿದೆ.
ಕೇಜ್ರಿವಾಲ್ ನೇತೃತ್ವದ ಎಎಪಿ ಏನಂತಿದೆ?
2015 ರ ಡ್ರಗ್ಸ್ ಪ್ರಕರಣದಲ್ಲಿ ಖೈರಾ ಅವರ ಬಂಧನವು ಎಎಪಿ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ಹುಟ್ಟುಹಾಕಿದೆ. ಈ ಎರಡೂ ಪಕ್ಷಗಳು ಈ ವರ್ಷದ ರಾಜ್ಯ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡಲು ಆಶಿಸುತ್ತಿರುವ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ. ಕಾಂಗ್ರೆಸ್‌ನ ಪಂಜಾಬ್ ಮುಖ್ಯಸ್ಥ ಅಮರಿಂದರ್ ರಾಜಾ ವಾರಿಂಗ್, ಎಎಪಿ ಅಡಿಯಲ್ಲಿ ಗಡಿ ರಾಜ್ಯದಲ್ಲಿ ಜಂಗಲ್ ರಾಜ್ ಮಾಡುತ್ತಿದೆ ಎಂದು ಹೇಳಿದ್ದಾರೆ. ಖೈರಾ ವಿರುದ್ಧದ “ಸುಳ್ಳು ಪ್ರಕರಣ” ಕುರಿತು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಗೆ ತಿಳಿಸಲಾಗಿದೆ. “ನಾವು ಮೌನವಾಗಿರಲು ಸಾಧ್ಯವಿಲ್ಲ, ನಾವು ಕೊನೆಯವರೆಗೂ ಹೋರಾಡುತ್ತೇವೆ ಎಂದು ಅವರು ಹೇಳಿದ್ದಾರೆ
ಏತನ್ಮಧ್ಯೆ, ಎಎಪಿಯು “ರಾಜಕೀಯ ಸೇಡಿನ” ಆರೋಪವನ್ನು ತಳ್ಳಿಹಾಕಿದೆ.ಸುಖಪಾಲ್ ಖೈರಾ ಅವರ ಬಂಧನವು ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಪಂಜಾಬ್ ಸರ್ಕಾರದ “ಶೂನ್ಯ ಸಹಿಷ್ಣುತೆಯ ನೀತಿ” ಯ ಭಾಗವಾಗಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ