ಮನೆಯ ವಿದ್ಯುತ್ ಕಡಿತಗೊಳಿಸಲು ಬಂದ ಅಧಿಕಾರಿಗಳ ಮೇಲೆ ಮಹಿಳೆಯರಿಂದ ಹಲ್ಲೆ
ಮನೆಯ ವಿದ್ಯುತ್ ಸರಬರಾಜು ಕಡಿತ ಮಾಡಲು ಬಂದ ಅಧಿಕಾರಿ ಮೇಲೆ ಮಹಿಳೆಯರು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಗ್ರಾಹಕರೊಬ್ಬರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೋದ ನಂತರ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಜೂನಿಯರ್ ಇಂಜಿನಿಯರ್ ತಂಡವನ್ನು ನಿಂದಿಸಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬಾಕಿ ಬಿಲ್‌ಗಳನ್ನು ಪಾವತಿಸದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಅವರ ಮನೆಗೆ ಬಂದ ನಂತರ ಜಮೀಲಾ ಖಾತುನ್, ಅವರ ಮಗಳು ಟೀನಾ, ಅಳಿಯ ಮತ್ತು ಇತರ ಕುಟುಂಬ ಸದಸ್ಯರು ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಇ ಸಾಗರ್ ಮಾಳವಿಯಾ ಅವರು ಜನವರಿ 29 ರಂದು ವಿಜಿಲೆನ್ಸ್ ತಂಡವು ಜಮೀಲಾ ಖಾತೂನ್ ವಿರುದ್ಧ ವಿದ್ಯುತ್ ಕಳ್ಳತನದ ಆರೋಪವನ್ನು 98,207 ರೂ. ದಂಡ ವಿಧಿಸಿತ್ತು. ಆದರೆ ಮಹಿಳೆ ಕೇವಲ 40 ಸಾವಿರ ರೂ. ಹಣ ಕಟ್ಟಿದ್ದರು. ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆದೇಶವನ್ನು ಹೊರಡಿಸಲಾಯಿತು.
ಮತ್ತಷ್ಟು ಓದಿ: ಆಂಧ್ರಪ್ರದೇಶದಲ್ಲಿ ರಥೋತ್ಸವದ ವೇಳೆ ದುರಂತ, 13 ಮಕ್ಕಳಿಗೆ ವಿದ್ಯುತ್ ಸ್ಪರ್ಶ
ಅಧಿಕಾರಿಗಳ ತಂಡವು ಆದೇಶದ ಮೇರೆಗೆ ವಿದ್ಯುತ್ ಕಡಿತಗೊಳಿಸಲು ಅವರ ಮನೆಗೆ ತೆರಳಿತ್ತು. ಆಗ ಮಹಿಳೆ ಹಾಗೂ ಆಕೆಯ ಕುಟುಂಬ ಸದಸ್ಯರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ