Abhijit Mukherjee ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲಿದ್ದಾರೆ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 05, 2021 | 2:59 PM

West Bengal:ಕಳೆದ ತಿಂಗಳು ಕೊಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಅಭಿಜಿತ್ ಮುಖರ್ಜಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ವರದಿಗಳು ಬಂದಿವೆ.

Abhijit Mukherjee ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲಿದ್ದಾರೆ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ
ಅಭಿಜಿತ್ ಮುಖರ್ಜಿ
Follow us on

ಕೊಲ್ಕತ್ತಾ: ದಿವಂಗತ ರಾಷ್ಟ್ರಪತಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ತೃಣಮೂಲ ಕಾಂಗ್ರೆಸ್ ಗೆ (ಟಿಎಂಸಿ) ಸೇರುವುದು ಬಹುತೇಕ ಖಚಿತವಾಗಿದೆ. ಟಿಎಂಸಿ ನಾಯಕತ್ವ ಮತ್ತು ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಜಂಗೀಪುರ ಸಂಸದ ಅಭಿಜಿತ್ ನಡುವೆ ಹಲವು ವಾರಗಳಿಂದ ಮಾತುಕತೆ ನಡೆಯುತ್ತಿದೆ. ಅಭಿಜಿತ್ ಮುಖರ್ಜಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಔಟ್ ಲುಕ್ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವನ್ನು ಬೆಂಬಲಿಸಿ ಮುಖರ್ಜಿ ನಿಯಮಿತವಾಗಿ ಟ್ವೀಟ್ ಮಾಡುತ್ತಿದ್ದರು.

ಜೂನ್ 25 ರಂದು ಮುಖರ್ಜಿ ಅವರು ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾನರ್ಜಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು ” ಐಎಎಸ್ ಅಧಿಕಾರಿ ದೇಬಂಜನ್ ದೇಬ್ ಹೆಸರಿನಲ್ಲಿ ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್‌ ಪ್ರಕರಣದಲ್ಲಿ ದೀದಿಯನ್ನು ದೂಷಿಸುವವರು ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮೊದಲಾದ ಹಗರಣಗಳಿಗಾಗಿ ಮೋದಿ ಜಿ ಅವರನ್ನು ದೂಷಿಸಬೇಕು. ಆದ್ದರಿಂದ ಪಶ್ಚಿಮ ಬಂಗಾಳ ಸರ್ಕಾರವನ್ನು ವೈಯಕ್ತಿಕ ಕೃತ್ಯಕ್ಕೆ ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದರು.


ಕಳೆದ ತಿಂಗಳು ಕೊಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಮುಖರ್ಜಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ವರದಿಗಳು ಬಂದಿವೆ.


ಈ ಬೆಳವಣಿಗೆಯು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗೆ ಮತ್ತಷ್ಟು ತೊಂದರೆ ಉಂಟುಮಾಡಬಹುದು. ಇದು ಪಕ್ಷದ ಹಿರಿಯ ನಾಯಕತ್ವ, ಘಟಕ ಮತ್ತು ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ವ್ಯಾಪಕವಾದ ಬಿರುಕನ್ನು ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ಭ್ರಷ್ಟಾಚಾರ ಆರೋಪ: ನಾನು ಅಂಥವನಲ್ಲ ಎಂದ ಜಗದೀಪ್ ಧನಕರ್  

(Pranab Mukherjee’s Son former Congress Jangipur MP Abhijit Mukherjee set to join the Trinamool Congress)

Published On - 1:43 pm, Mon, 5 July 21