ರಾಮಲಲ್ಲಾ ಪ್ರತಿಷ್ಠಾ ವರ್ಷಾಚರಣೆ ಜನವರಿ 11 ರಂದೇ ಏಕೆ? ಪ್ರತಿ ವರ್ಷವೂ ಇದೇ ದಿನ ಬರಲಿದೆಯೇ? ಇಲ್ಲಿದೆ ಉತ್ತರ

|

Updated on: Jan 11, 2025 | 10:47 AM

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿದ್ದು 2024ರ ಜನವರಿ 22ರಂದು. ಆದರೆ, ಪ್ರತಿಷ್ಠಾ ವರ್ಷಾಚರಣೆಯನ್ನು 2025ರ ಜನವರಿ 11ರಂದು ಆಚರಿಸಲಾಗುತ್ತಿದೆ. ಇದಕ್ಕೆ ಕಾರಣವೇನು? ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜನವರಿ 11 ಅನ್ನೇ ವರ್ಷಾಚರಣೆಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಪ್ರತಿ ವರ್ಷವೂ ಜನವರಿ 11ರಂದೇ ವರ್ಷಾಚರಣೆ ನಡೆಯಲಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ.

ರಾಮಲಲ್ಲಾ ಪ್ರತಿಷ್ಠಾ ವರ್ಷಾಚರಣೆ ಜನವರಿ 11 ರಂದೇ ಏಕೆ? ಪ್ರತಿ ವರ್ಷವೂ ಇದೇ ದಿನ ಬರಲಿದೆಯೇ? ಇಲ್ಲಿದೆ ಉತ್ತರ
ರಾಮಲಲ್ಲಾ ಪ್ರತಿಷ್ಠಾ ವರ್ಷಾಚರಣೆ
Follow us on

ಅಯೋಧ್ಯೆ, ಜನವರಿ 11: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರ ಲಕ್ಷಾಂತರ ಹಿಂದೂಗಳ ನಂಬಿಕೆ, ಭಕ್ತಿ ಮತ್ತು ಪರಿಶ್ರಮದ ಸಂಕೇತವಾಗಿದ್ದು, ಅಲ್ಲಿ 2024 ರ ಜನವರಿ 22 ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ನೆರವೇರಿತ್ತು. ಅಚ್ಚರಿಯ ವಿಚಾರವೆಂದರೆ, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವವನ್ನು ಜನವರಿ 11 ರಂದು ಆಚರಿಸಲಾಗುತ್ತದೆ! ಇದಕ್ಕೆ ಕಾರಣ ಹಿಂದೂ ಸಂಪ್ರದಾಯ. ಪ್ರತಿಷ್ಠಾ ಮಹೋತ್ಸವ ನಡೆದ ದಿನ ಹಿಂದೂ ಪಂಚಾಂಗದ ಪ್ರಕಾರ ಜನವರಿ 11 ರಂದು ಬರುತ್ತದೆ. ಹೀಗಾಗಿ ಜನವರಿ 11ರಂದು ಪ್ರತಿಷ್ಠಾ ವರ್ಷಾಚರಣೆ ನಡೆಯುತ್ತಿದೆ.

ಈ ಆಚರಣೆಯು ಹಿಂದೂ ಸಂಸ್ಕೃತಿ ಮತ್ತು ಜ್ಯೋತಿಷ್ಯ ಶಾಸ್ತ್ರದೊಂದಿಗೆ ದೇವಾಲಯದ ಆಚರಣೆಯನ್ನು ಪ್ರತಿಬಿಂಬಿಸುತ್ತದೆ.

ಪುಷ್ಯ ಶುಕ್ಲ ದ್ವಾದಶಿಯಂದು ನೆರವೇರಿದ್ದ ಪ್ರಾಣ ಪ್ರತಿಷ್ಠೆ

ಕಳೆದ ವರ್ಷ ಪುಷ್ಯ (ಪೌಷ) ಶುಕ್ಲ ದ್ವಾದಶಿಯಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿತ್ತು. ಆ ಶುಭ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಲು ರಾಮಜನ್ಮಭೂಮಿ ಟ್ರಸ್ಟ್ ಕರೆ ನೀಡಿತ್ತು. ಈ ವರ್ಷ (2025) ಜನವರಿ 11 ರಂದು ಪುಷ್ಯ ಶುಕ್ಲ ದ್ವಾದಶಿ ಇದೆ. ಹೀಗಾಗಿ ಪ್ರಾಣಪ್ರತಿಷ್ಠೆಯ ವರ್ಷಾಚರಣೆಯನ್ನು ಇಂದೇ ನಡೆಸಲಾಗುತ್ತಿದೆ.

ಪ್ರತಿ ವರ್ಷವೂ ಜನವರಿ 11ರಂದೇ ನಡೆಯಲಿದೆಯಾ ಉತ್ಸವ?

ಪ್ರತಿಷ್ಠಾ ಮಹೊತ್ಸವದ ವರ್ಷಾಚರಣೆ ಹಿಂದೂ ಕ್ಯಾಲೆಂಡರ್‌ ಪ್ರಕಾರ ನಡೆಯುವುದರಿಂದ ಪ್ರತಿ ವರ್ಷವೂ ಜನವರಿ 11ರಂದೇ ನಡೆಯಲಾರದು. ಇದು ಪ್ರತಿ ವರ್ಷವೂ ಬದಲಾಗಬಹುದು.

ಹಿಂದೂ ಸಂಪ್ರದಾಯದ ಪ್ರಕಾರ, ಹಬ್ಬಗಳನ್ನು ಪಾಶ್ಚಾತ್ಯ ಕ್ಯಾಲೆಂಡರ್​​ ದಿನಾಂಕಗಳಿಗೆ ಬದಲಾಗಿ ಪಂಚಾಗಗಳಲ್ಲಿ ಉಲ್ಲೇಖವಾಗಿರುವ ದಿನಗಳ ಆಧಾರದ ಮೇಲೆ ಆಚರಿಸಲಾಗುತ್ತದೆ. ಹೀಗಾಗಿ ಪ್ರಾಣಪ್ರತಿಷ್ಠೆಯ ವರ್ಷಾಚರಣೆ ಕೂಡ ಇದರಂತೆಯೇ ನಡೆಯುತ್ತಿದೆ.

ಇದನ್ನೂ ಓದಿ: ಪ್ರತಿಷ್ಠಾ ದ್ವಾದಶಿ: ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ಉತ್ಸವ, ಏನೇನಿರಲಿವೆ ನೋಡಿ

ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಉತ್ಸವ

ಅಯೋಧ್ಯೆಯಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ವಿವಿಧ ಆಚರಣೆಗಳು, ಪ್ರಾರ್ಥನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಭಕ್ತರು ಮತ್ತು ಸಂತರು ಭಗವಾನ್ ರಾಮನನ್ನು ಗೌರವಿಸಲು, ಪೂಜಿಸಲು ಈ ಉತ್ಸವ ಅನುವು ಮಾಡಿಕೊಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 am, Sat, 11 January 25