AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಾ ದ್ವಾದಶಿ: ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ಉತ್ಸವ, ಏನೇನಿರಲಿವೆ ನೋಡಿ

Pratishtha Dwadashi 2025: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವವನ್ನು 'ಪ್ರತಿಷ್ಠಾ ದ್ವಾದಶಿ' ಎಂದು ಆಚರಿಸಲಾಗುತ್ತಿದೆ. ಮೂರು ದಿನಗಳ ಉತ್ಸವದಲ್ಲಿ ರಾಮಲಲ್ಲಾ ಮಹಾಭಿಷೇಕ, ಅಲಂಕಾರ, ಅರ್ಪಣೆ, ಆರತಿ, ರಾಮಚರಿತಮಾನಸ ಪಾರಾಯಣ, ರಾಮಾಯಣ ಪ್ರವಚನ ಮುಂತಾದ ಕಾರ್ಯಕ್ರಮಗಳಿವೆ. ವಿಶೇಷ ದರ್ಶನ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ.

ಪ್ರತಿಷ್ಠಾ ದ್ವಾದಶಿ: ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ಉತ್ಸವ, ಏನೇನಿರಲಿವೆ ನೋಡಿ
ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ
ಗಣಪತಿ ಶರ್ಮಾ
|

Updated on:Jan 11, 2025 | 10:17 AM

Share

ಅಯೋಧ್ಯೆ, ಜನವರಿ 11: ಕಳೆದ ವರ್ಷ (2024, ಜನವರಿ 22) ಪುಷ್ಯ (ಪೌಷ) ಶುಕ್ಲ ದ್ವಾದಶಿಯಂದು ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯಾದ ಶುಭ ದಿನವಾದ್ದರಿಂದ ಆ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಲು ರಾಮಜನ್ಮಭೂಮಿ ಟ್ರಸ್ಟ್ ಕರೆ ನೀಡಿದೆ. ಅಲ್ಲದೆ, ಅಯೋಧ್ಯೆಯಲ್ಲಿ ಮೂರು ದಿನಗಳ ಕಾಲ ಉತ್ಸವ ಹಮ್ಮಿಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರವು ಪ್ರತಿವರ್ಷ ಈ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಲು ನಿರ್ಧರಿಸಿದೆ.

ರಾಮಲಾಲ್ಲಾ ವಿಗ್ರಹ ಪ್ರತಿಷ್ಠಾಪನೆಯ ವಾರ್ಷಿಕೋತ್ಸವಕ್ಕೆ ಅಯೋಧ್ಯೆ ಸಂಪೂರ್ಣ ಸಿದ್ಧಗೊಂಡಿದೆ. ಮೂರು ದಿನಗಳ ಪ್ರತಿಷ್ಠಾ ದ್ವಾದಶಿ ಆಚರಣೆಯ ಸಂಭ್ರಮ ಇಂದಿನಿಂದ ಆರಂಭವಾಗುತ್ತಿದೆ.

ಉತ್ತರ ಪ್ರದೇಶದ ಸಿಎಂ ಯೋಗಿಯಿಂದ ರಾಮಲಲ್ಲಾಗೆ ಅಭಿಷೇಕ

ಸಿಎಂ ಯೋಗಿ ಆದಿತ್ಯನಾಥ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಐದು ಗಂಟೆಗಳ ಕಾಲ ಅಯೋಧ್ಯೆಯಲ್ಲಿ ತಂಗಲಿರುವ ಯೋಗಿ ಅವರು ರಾಮಲಾಲ್ಲಾ ಮೂರ್ತಿಗೆ ಅಭಿಷೇಕ ಮಾಡಲಿದ್ದಾರೆ ಮತ್ತು ಮಹಾ ಆರತಿ ಮಾಡಲಿದ್ದಾರೆ. ಇದಾದ ನಂತರ ಮಧ್ಯಾಹ್ನ 2 ಗಂಟೆಗೆ ತಿಲದಲ್ಲಿ ಮೊದಲ ಬಾರಿಗೆ ಭಕ್ತರು ಮತ್ತು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರತಿಷ್ಠಾ ದ್ವಾದಶಿ ಉತ್ಸವದಲ್ಲಿ ಏನೇನಿರಲಿದೆ?

ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ರಾಮಲಲ್ಲಾ ಸನ್ನಿಧಿಯ ಪ್ರಥಮ ವಾರ್ಷಿಕ ಉತ್ಸವವಾದ ‘ಪ್ರತಿಷ್ಠಾ ದ್ವಾದಶಿ’ಯಂದು ಇಂದಿನಿಂದ ಜನವರಿ 13 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೊದಲ ದಿನವಾದ ಜನವರಿ 11 ರಂದು ರಾಮಲಲ್ಲಾ ಮಹಾಭಿಷೇಕ, ಅಲಂಕಾರ, ಅರ್ಪಣೆ ಹಾಗೂ ಆರತಿ ನಡೆಯಲಿದೆ. ಇದಾದ ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಖ್ಯಕಾರ್ಯಕ್ರಮ ನಡೆಯಲಿದೆ. ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ.

ರಾಮಚರಿತಮಾನಸ ಪಾರಾಯಣ, ರಾಮಾಯಣ ಪ್ರವಚನ

ಅಂಗದ ತಿಲದಲ್ಲಿ ಮೂರು ದಿನವೂ ರಾಮಚರಿತಮಾನಸ ಪಾರಾಯಣ, ರಾಮಾಯಣ ಪ್ರವಚನ, ಶ್ರೀರಾಮ ಜನನ ಕಥಾ ಮತ್ತು ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿದೆ. ರಾಮಲಲ್ಲಾ ಸಂದರ್ಶಕರಿಗೆ ಮಹಾಪ್ರಸಾದವನ್ನು ಸಹ ವಿತರಿಸಲಾಗುವುದು.

ವಿಶೇಷ ದರ್ಶನ ಪಾಸ್ ರದ್ದು

ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಎಲ್ಲಾ ಮೂರು ದಿನಗಳ ಕಾಲ ರಾಮಲಲ್ಲಾ ಆರತಿ ಪಾಸ್‌ಗಳು ಮತ್ತು ವಿಶೇಷ ದರ್ಶನ ಪಾಸ್‌ಗಳನ್ನು ರದ್ದುಗೊಳಿಸಲಾಗುತ್ತದೆ. ಆರತಿ ಸಮಯದಲ್ಲಿಯೂ ಭಕ್ತರಿಗೆ ದರ್ಶನ ಸಿಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ದರ್ಶನದ ಅವಧಿ ಸುಮಾರು ಒಂದೂವರೆ ಗಂಟೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾ ವರ್ಷಾಚರಣೆ ಜವರಿ 11 ರಂದೇ ಏಕೆ? ಪ್ರತಿ ವರ್ಷವೂ ಇದೇ ದಿನ ಬರಲಿದೆಯೇ? ಇಲ್ಲಿದೆ ಉತ್ತರ

ರಾಮಲಲ್ಲಾ ಮತ್ತು ಬಾಲ ರಾಮನ ಉತ್ಸವ ಮೂರ್ತಿಗೆ ದೆಹಲಿಯಲ್ಲಿ ವಿಶೇಷ ಬಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಈ ಬಟ್ಟೆಗಳ ನೇಯ್ಗೆ ಮತ್ತು ಕಸೂತಿಯನ್ನು ಚಿನ್ನ ಮತ್ತು ಬೆಳ್ಳಿಯ ತಂತಿಯಿಂದ ಮಾಡಲಾಗಿದೆ. ಇದಲ್ಲದೆ, ವಿವಿಧ ಸ್ಥಳಗಳಲ್ಲಿ ಬೆಳ್ಳಿಯ ಮುದ್ರೆಗಳನ್ನು ಸಹ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Sat, 11 January 25

Follow Us
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ