ಮತ್ತೆ ಹೆಣ್ಣು ಮಗು ಆದೀತೆಂದು ಒಂದು ದಿನ ಮುಂಚೆ ತುಂಬು ಗರ್ಭಿಣಿ ಆತ್ಮಹತ್ಯೆ, ಆದರೆ ಅದು ಗಂಡು ಮಗು!
ವೈದ್ಯರು ಗರ್ಭಿಣಿ ರಮ್ಯಾಗೆ ಜನವರಿ 6 ರಂದು ಡೆಲಿವರಿ ಡೇಟ್ ನೀಡಿದ್ದರು. ರಮ್ಯಾಗೆ ಈ ಹಿಂದೆ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮಗು ಹೆಣ್ಣಾಗಿತ್ತು. ಈಗ ಮತ್ತೆ ಹೆಣ್ಣು ಮಗುವೇ ಹುಟ್ಟೀತು ಎಂಬ ಭೀತಿಯಿಂದ ಅತ್ತೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇದೇ ವಿಷಯವಾಗಿ ಅತ್ತೆ ಮನೆಯವರ ಕಾಟದಿಂದಾಗಿ ತಮ್ಮ ಮಗಳು ರಮ್ಯಾ ಪ್ರಾಣ ನೀಗಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈಗಾಗಲೇ ಒಂದು ಹೆಣ್ಣಾಗಿದೆ; ಈಗ ಮತ್ತೆ ಹೆಣ್ಣು ಮಗು ಆದೀತೆಂದು ಆತಂಕಕ್ಕೆ ಈಡಾದ ತುಂಬು ಗರ್ಭಿಣಿಯೊಬ್ಬರು ಡೆಲಿವರಿ ಡೇಟ್ಗೆ ಒಂದು ದಿನ ಮುಂಚೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೌರ್ಭಾಗ್ಯವೆಂದರೆ ಆಕೆ ಹೆಣ್ಣಾಗಬಹುದು ಅಂದುಕೊಂಡಿದ್ದರು. ಆದರೆ ಅದು ಗಂಡು ಮಗು! ಪೋಸ್ಟ್ ಮಾರ್ಟಮ್ ಮಾಡಿದಾಗ ಆಕೆ ಗರ್ಭ ಧರಿಸಿದ್ದು (Pregnant woman) ಗಂಡು ಮಗುವಿಗೆ (Baby Boy) ಎಂಬ ವಿಷಾದದ ಸಂಗತಿ ಬಯಲಾಗಿದೆ. ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ (NTR Nagar Mancherial Adilabad District Andhra Pradesh) ಈ ಘಟನೆ ನಡೆದಿದೆ. ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ 25 ವರ್ಷದ ರಮ್ಯಾ ಎಂಬಾಕೆಯೇ ಈ ದುಸ್ಸಾಹಸಕ್ಕೆ ಕೈಹಾಕಿದ ಮಹಿಳೆ.
ವೈದ್ಯರು ಗರ್ಭಿಣಿ ರಮ್ಯಾಗೆ ಜನವರಿ 6 ರಂದು ಡೆಲಿವರಿ ಡೇಟ್ ನೀಡಿದ್ದರು. ರಮ್ಯಾಗೆ ಈ ಹಿಂದೆ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮಗು ಹೆಣ್ಣಾಗಿತ್ತು. ಈಗ ಮತ್ತೆ ಹೆಣ್ಣು ಮಗುವೇ ಹುಟ್ಟೀತು ಎಂಬ ಭೀತಿಯಿಂದ ಅತ್ತೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇದೇ ವಿಷಯವಾಗಿ ಅತ್ತೆ ಮನೆಯವರ ಕಾಟದಿಂದಾಗಿ ತಮ್ಮ ಮಗಳು ರಮ್ಯಾ ಪ್ರಾಣ ನೀಗಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಒಂದು ಕಡೆ ಮಗಳನ್ನು ಕಳೆದುಕೊಂಡ ರಮ್ಯಾ ಪೋಷಕರು, ತದನಂತರ ತಮ್ಮ ಮಗಳಿಗೆ ಗಂಡು ಸಂತಾನವೇ ಪ್ರಾಪ್ತಿಯಾಗಿತ್ತು ಎಂಬುದನ್ನು ತಿಳಿದು ಖೇದಗೊಂಡಿದ್ದಾರೆ. ಮೂಲತಃ ದಂಡೆಪಲ್ಲಿ ಮಂಡಲದ ನರಸಾಪುರ ಗ್ರಾಮದ ರಮ್ಯಾಗೆ ನಾಲ್ಕು ವರ್ಷಗಳ ಹಿಂದೆ ಎನ್ಟಿಆರ್ ನಗರದ ಎ ಆನಂದ್ ಎಂಬಾತನ ಜೊತೆ ವಿವಾಹವಾಗಿತ್ತು.
ಇದನ್ನು ಓದಿ: Cyber Crime: ಮರುಳಾಗುವಂತೆ ಮಾತಾಡಿ ಫ್ಲಿಫ್ ಕಾರ್ಟ್ ಹೆಸರಿನಲ್ಲಿ 32 ಲಕ್ಷ ಪಂಗನಾಮ, ಹಣ ಕಳೆದುಕೊಂಡು ಕಂಗಾಲಾದ ಉದ್ಯಮಿ
Published On - 1:17 pm, Fri, 7 January 22