ಕೊಲ್ಕತ್ತಾದಲ್ಲಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಎರಡನೇ ಕ್ಯಾಂಪಸ್ ಉದ್ಘಾಟಿಸಿದ ಮೋದಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ಸಮ್ಮುಖದಲ್ಲಿ ಕೊಲ್ಕತ್ತಾದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ಸಮ್ಮುಖದಲ್ಲಿ ಕೊಲ್ಕತ್ತಾದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ತನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಹೇಳಿದ ಬ್ಯಾನರ್ಜಿ, ತನ್ನ ಕಾಲೇಜು ದಿನಗಳನ್ನು ಸುತ್ತಮುತ್ತಲಲ್ಲೇ ಕಳೆದಿರುವ ಕಾರಣ ಸಂಸ್ಥೆಯು ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು. ಸಿಎನ್‌ಸಿಐ ಕ್ಯಾಂಪಸ್‌ನ ಉದ್ಘಾಟನಾ ಕಾರ್ಯಕ್ರಮವು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.ಈ ಸಂಸ್ಥೆಯು ಪೂರ್ವ ಭಾರತದಲ್ಲಿ ಮತ್ತು ಈಶಾನ್ಯದಲ್ಲಿ ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮೋದಿ ನಿನ್ನೆ ಟ್ವೀಟ್ ಮಾಡಿದ್ದರು. ಪ್ರಧಾನಿಯವರ ಕಚೇರಿಯ (PMO) ಹೇಳಿಕೆಯ ಪ್ರಕಾರ, CNCIಯ ಎರಡನೇ ಕ್ಯಾಂಪಸ್ ಅನ್ನು ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಮತ್ತು ನವೀಕರಿಸುವ ದೃಷ್ಟಿಯೊಂದಿಗೆ ನಿರ್ಮಿಸಲಾಗಿದೆ.
Prime Minister Narendra Modi inaugurates the Second Campus of Chittaranjan National Cancer Institute in Kolkata via video conferencing pic.twitter.com/2Aum41HLcv
— ANI (@ANI) January 7, 2022
ಈ ವೇಳೆ ಮಾತನಾಡಿದ ಮೋದಿ ಭಾರತ ಇಂದು 150 ಕೋಟಿ ಲಸಿಕೆ ನೀಡುವ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಸಂಪೂರ್ಣ ಅರ್ಹ ಜನಸಂಖ್ಯೆಯಲ್ಲಿ ಶೇ 90 ಕ್ಕಿಂತ ಹೆಚ್ಚು ನಾಗರಿಕರು ಕೊರೊನಾವೈರಸ್ ಕಾಯಿಲೆಯ ವಿರುದ್ಧ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. “ಕೇವಲ ಐದು ದಿನಗಳಲ್ಲಿ, 15-17 ವರ್ಷದೊಳಗಿನ 1.5 ಕೋಟಿ ಮಕ್ಕಳಿಗೆ ಲಸಿಕೆ ನೀಡಲಾಗಿದೆ” ಎಂದು ಅವರು ಹೇಳಿದರು.
ಆಸ್ಪತ್ರೆಯ ವೈಶಿಷ್ಟ್ಯವೇನು? ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಸುಮಾರು ₹ 530 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಸುಮಾರು ₹ 400 ಕೋಟಿ ಮೊತ್ತವನ್ನು ಕೇಂದ್ರವು ಒದಗಿಸಿದೆ. ಉಳಿದ ಮೊತ್ತವನ್ನು ಪಶ್ಚಿಮ ಬಂಗಾಳ ಸರ್ಕಾರವು 75:25 ಅನುಪಾತದಲ್ಲಿ ನೀಡಿದೆ. ಈ ಆಸ್ಪತ್ರೆಯು ಕ್ಯಾನ್ಸರ್ ರೋಗನಿರ್ಣಯ, ಹಂತ, ಚಿಕಿತ್ಸೆ ಮತ್ತು ಆರೈಕೆಗಾಗಿ 400 ಹಾಸಿಗೆಗಳ ಸಮಗ್ರ ಕ್ಯಾನ್ಸರ್ ಕೇಂದ್ರವಾಗಿದೆ. ನ್ಯೂಕ್ಲಿಯರ್ ಮೆಡಿಸಿನ್ (ಪಿಇಟಿ), 3.0 ಟೆಸ್ಲಾ ಎಂಆರ್‌ಐ, ಎಂಡೋಸ್ಕೋಪಿ ಸೂಟ್ ಮತ್ತು ರೇಡಿಯೊನ್ಯೂಕ್ಲೈಡ್ ಥೆರಪಿ ಯೂನಿಟ್‌ನಂತಹ ಆಧುನಿಕ ಸೌಲಭ್ಯಗಳು ಸಿಎನ್‌ಸಿಐನ ಹೊಸ ಕ್ಯಾಂಪಸ್‌ನಲ್ಲಿವೆ.
ಇತ್ತೀಚೆಗೆ ಅಂದರೆ ಜನವರಿ 4 ರಂದು ಮೋದಿ ಅವರು ಮಣಿಪುರ ಮತ್ತು ತ್ರಿಪುರಾದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಚುನಾವಣಾ ಕಣದಲ್ಲಿರುವ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಅವರು ಐದು ರಾಷ್ಟ್ರೀಯ ಹೆದ್ದಾರಿಗಳು ಮತ್ತು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಸೇರಿದಂತೆ 22 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದರು. ನಂತರ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಮಹಾರಾಜ ಬಿರ್ ಬಿಕ್ರಮ್ (MBB) ವಿಮಾನ ನಿಲ್ದಾಣದಲ್ಲಿ ಸಮಗ್ರ ಟರ್ಮಿನಲ್ ಅನ್ನು ಉದ್ಘಾಟಿಸಿದ್ದರು.
ಇದನ್ನೂ ಓದಿ: PM Modi’s Security Breach ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ
ಇದನ್ನೂ ಓದಿ: Positivism vs Negativism: ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾತ್ವಿಕತೆ ಮನೆ ಮಾಡಬೇಕು ಅಂತಾದರೆ ಈ 30 ಸಲಹೆ ಪಾಲಿಸಿ!