ಪಾಲಕ್ಕಾಡ್: ದೇವರನ್ನು ಸಂತೃಪ್ತಿ ಪಡೆಸಲೆಂದು ತನ್ನ ಆರುವರ್ಷದ ಮಗನನ್ನೇ ಬಲಿಕೊಟ್ಟ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮದರಸಾವೊಂದರ ಶಿಕ್ಷಕಿಯಾಗಿರುವ ಶಯೀದಾ ಬಂಧಿತ ತಾಯಿ. ಮೂರು ಮಕ್ಕಳ ಅಮ್ಮನಾಗಿರುವ ಇವರು ಸದ್ಯ ಗರ್ಭಿಣಿ. ನಾಲ್ಕನೇ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡಿರುವ ಈಕೆ, ತನ್ನ ಮೂರನೇ ಮಗುವಿನ ಕತ್ತು ಕೊಯ್ದಿದ್ದಾರೆ.
ಮಗನನ್ನು ಕೊಂದಿದ್ದು ಅಲ್ಲಾಹುವನ್ನು ತೃಪ್ತಿಪಡಿಸಲು, ದೇವರಿಗಾಗಿ ನಾನು ಈ ತ್ಯಾಗವನ್ನು ಮಾಡಲೇಬೇಕಿತ್ತು ಎಂದು ಶಾಯೀದಾ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಪಾಲಕ್ಕಾಡ್ ಎಸ್ಪಿ ಆರ್. ವಿಶ್ವನಾಥ್ ತಿಳಿಸಿದ್ದಾರೆ. ಶಾಯಿದಾ ಪತಿ ಸುಲ್ತಾನ್ ಚಾಲಕರಾಗಿದ್ದಾರೆ. ಉಳಿದಿಬ್ಬರೂ ಗಂಡು ಮಕ್ಕಳೇ ಆಗಿದ್ದು, ಅವರು ನಿದ್ದೆ ಮಾಡುತ್ತಿದ್ದ ಹೊತ್ತಲ್ಲಿ ಶಾಯೀದಾ ಈ ಕೃತ್ಯ ಎಸಗಿದ್ದಾರೆ. ಮಗನನ್ನು ಹತ್ಯೆ ಮಾಡಿದ ಬಳಿಕ ತಾವೇ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
ಪೊಲೀಸರು ಶಾಯೀದಾ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿದ್ದು, ಪ್ರಕರಣ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಾಡಿಗೆ ಹಣದ ವಿಚಾರವಾಗಿ ನಡೆದ ಜಗಳ.. ನಿವೃತ್ತ ಉಪ ತಹಶೀಲ್ದಾರ್ ಕೊಲೆಯಲ್ಲಿ ಅಂತ್ಯ