ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ

ಎಲ್ಲರಿಗೂ 2024 ರ ಶುಭಾಶಯಗಳು, ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ
ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ

Updated on: Jan 01, 2024 | 10:51 AM

ದೆಹಲಿ, ಜ.1: 2023 ಕಳೆದ ಹೊಸ ವರ್ಷ 2024ಕ್ಕೆ ಕಾಲಿಟ್ಟಿದ್ದೇವೆ. ದೇಶದ್ಯಾಂತ ಹೊಸ ವರ್ಷಚಾರಣೆ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ  ಮೋದಿ (Narendra Modi) ಮತ್ತು ರಾಷ್ಟ್ರ ದ್ರೌಪದಿ ಮುರ್ಮು ( Droupadi Murmu) ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಸಿದ್ದಾರೆ. 2024 ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಹಾರೈಸಿದರು.

ಎಲ್ಲರಿಗೂ 2024 ರ ಶುಭಾಶಯಗಳು, ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಜನರು ವಿವಿಧ ಆಚರಣೆಗಳೊಂದಿಗೆ ಈ ವರ್ಷವನ್ನು ಸ್ವಾಗತಿಸಿದ್ದಾರೆ, ಇನ್ನು ವಿಶೇಷ ಎಂದರೆ ಕೆಲವರು ದೇವಾಲಯಗಳಲ್ಲಿ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ದೇಶದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನ ರೀತಿಯಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ದೆಹಲಿಯ ಝಂಡೆವಾಲನ್ ದೇವಾಲಯದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ನೆನ್ನೆಯಿಂದಲೇ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಅದ್ಧೂರಿಯಾಗಿ ಅಚರಣೆ ಮಾಡಿದ್ದಾರೆ.

ಇದನ್ನೂ ಓದಿ:ಹೊಸ ವರ್ಷ ಸಂಭ್ರಮ; ಮೊದಲ ದಿನವೇ ದೇವಸ್ಥಾನಗಳಲ್ಲಿ ಭಕ್ತರ ದಂಡು 

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ದೇಶದ ಜನರಿಗೆ ಎಕ್ಸ್​​​ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದರು. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, 2024 ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲು ನವೀಕೃತ ಬದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಟ್ವೀಟ್​​​ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ