AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕರ ಖರೀದಿಗೆ ರಾಮಲಲ್ಲಾ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ ಸರ್ಕಾರ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನಾ ಗೌರವಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 50 ಗ್ರಾಂ ಇರುವ ಬೆಳ್ಳಿ ನಾಣ್ಯವನ್ನು ಸಾರ್ವಜನಿಕ ಮಾರಾಟಕ್ಕೆ ಪರಿಚಯಿಸಿದೆ.

ಸಾರ್ವಜನಿಕರ ಖರೀದಿಗೆ ರಾಮಲಲ್ಲಾ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ ಸರ್ಕಾರ
ರಾಮಲಲ್ಲಾ ಬೆಳ್ಳಿ ನಾಣ್ಯ
TV9 Web
| Edited By: |

Updated on: Apr 13, 2024 | 9:35 PM

Share

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 22ರಂದು ಅಯೋಧ್ಯೆ (Ayodhya) ಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನಾ ಗೌರವಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 50 ಗ್ರಾಂ ಇರುವ ಬೆಳ್ಳಿ ನಾಣ್ಯವನ್ನು ಸಾರ್ವಜನಿಕ ಮಾರಾಟಕ್ಕೆ ಪರಿಚಯಿಸಿದೆ. ಈ ಬೆಳ್ಳಿ ನಾಣ್ಯಗಳ ಮಾರಾಟವು ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, 5,860 ರೂ. ಬೆಲೆ ಹೊಂದಿದೆ.  ಇತ್ತೀಚೆಗೆ ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ನಾಣ್ಯಗಳನ್ನು ಅನಾವರಣಗೊಳಿಸಿದ್ದರು. ರಾಮಲಲ್ಲಾ ಮತ್ತು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯನ್ನು ನ್ಯಾಣದಲ್ಲಿ ಕಾಣಬಹುದಾಗಿದೆ.

ರಾಮಲಲ್ಲಾರ ನಾಣ್ಯದ ಜೊತೆಗೆ, ಬುದ್ಧನ ಜ್ಞಾನೋದಯವನ್ನು ಪ್ರತಿನಿಧಿಸುವ ದ್ವಿ-ಲೋಹದ ಹೊದಿಕೆಯ ಸ್ಮಾರಕ ನಾಣ್ಯವನ್ನು ಸಹ ಸೀತಾರಾಮನ್​ ಅವರು ಅನಾವರಣಗೊಳಿಸಿದ್ದರು. ಬುದ್ಧ ಮತ್ತು ಸ್ತೂಪದ ಆಕ್ಸಿಡೀಕೃತ ಚಿತ್ರಗಳನ್ನು ಮತ್ತು ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಘೇಂಡಾಮೃಗವನ್ನು ಒಳಗೊಂಡ ನಾಣ್ಯವನ್ನು ಸಹ ಬಿಡುಗಡೆ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಗಳಲ್ಲಿ ನೇತೃತ್ವ ವಹಿಸಿದ್ದರು. ಇದು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಭೂದೃಶ್ಯದಲ್ಲಿ ಐತಿಹಾಸಿಕ ಕ್ಷಣವಾಗಿದ್ದು, ದೇವಾಲಯದ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಟಿವಿ9 ಸಂದರ್ಶನ: ಅಪೂರ್ಣವಾದ ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಏಕೆ, ಶಾಸ್ತ್ರ ಏನು ಹೇಳುತ್ತದೆ?- ರವಿಶಂಕರ್ ಗುರೂಜಿ ಉತ್ತರ ಹೀಗಿದೆ

ಕೋಟ್ಯಾನು ಕೋಟಿ ಭಕ್ತರ ಪಾಲಿನ ರಾಮಲಲ್ಲಾ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿ ಸುಮಾರು ದಿನಗಳು ಕಳೆದಿವೆ. ಉಧ್ಘಾಟನೆಯಾದ ಮರುದಿನವೇ ಭಕ್ತಕೋಟಿ ರಾಮನ ದರ್ಶನಕ್ಕೆ ದಾಂಗುಡಿ ಇಟ್ಟಿದ್ದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ. ಸರಿಸುಮಾರು 6 ಲಕ್ಷ ಜನ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Web contact
Web contact

TV9 Kannada

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ