1991ರ ಐತಿಹಾಸಿಕ ‘ಏಕತಾ ಯಾತ್ರೆ’ ನೆನಪಿಸಿಕೊಂಡ ಪ್ರಧಾನಿ ಮೋದಿ
ಇತ್ತೀಚೆಗೆ ತಮಿಳು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1991ರ ಏಕತಾ ಯಾತ್ರೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಿಸಲಾಗಿದ್ದ ಐತಿಹಾಸಿಕ ಘಟನೆಯ ಕುರಿತು ಮೋದಿ ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಮರ್ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಕುಟುಂಬ ಸದಸ್ಯರು ಶ್ರೀನಗರದಲ್ಲಿ ತ್ರಿವರ್ಣ ಧ್ವಜಾರೋಹಣವನ್ನು ಹಸ್ತಾಂತರಿಸಿದ್ದು ಈ ಏಕತಾ ಯಾತ್ರೆಯ ಅತ್ಯಂತ ಸ್ಮರಣೀಯ ಕ್ಷಣವೆಂದು ಹೇಳಿದ್ದಾರೆ.
ತಮಿಳುನಾಡಿನೊಂದಿಗೆ ನಮಗೆ ಆಳವಾದ ಸಂಬಂಧವಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡು ಜೊತೆಗಿನ ಬಲವಾದ ಸಂಬಂಧವನ್ನು ಮೆಲುಕು ಹಾಕಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಿಸಲಾಗಿದ್ದ ಐತಿಹಾಸಿಕ ‘ಏಕತಾ ಯಾತ್ರೆ’ ಕುರಿತು ಪ್ರಸ್ತಾಪಿಸಿದ್ದಾರೆ. ಅಮರ್ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಕುಟುಂಬ ಸದಸ್ಯರು ಶ್ರೀನಗರದಲ್ಲಿ ತ್ರಿವರ್ಣ ಧ್ವಜಾರೋಹಣವನ್ನು ಹಸ್ತಾಂತರಿಸಿದ್ದು ಈ ಏಕತಾ ಯಾತ್ರೆಯ ಅತ್ಯಂತ ಸ್ಮರಣೀಯ ಕ್ಷಣವೆಂದು ಹೇಳಿದ್ದಾರೆ.
ಈ ವೇಳೆ ಪರಮವೀರ ಚಕ್ರ ವಿಜೇತ ಕಾನ್ಸ್‌ಟೇಬಲ್ ಅಬ್ದುಲ್ ಹಮೀದ್ ಅವರ ಮಕ್ಕಳಾದ ಜುಬೈದ್ ಅಹ್ಮದ್ ಮತ್ತು ಅಲಿ ಹಸನ್ ಕೂಡ ಇದ್ದರು. ಇದೇ ವೇಳೆ ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಮತ್ತು ಆ ಸಮಯದಲ್ಲಿ ಬಿಜೆಪಿಯ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ ಜೋಶಿ ಅವರು ಉಪಸ್ಥಿತರಿದ್ದು, ಮೋದಿ ಈ ಯಾತ್ರೆಯ ಸಂಘಟಕರಾಗಿದ್ದರು. ಅಂದಿನ ಕೆಲ ಚಿತ್ರಗಳನ್ನು ಮೋದಿ ಆರ್ಕೈವ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
In a recent interview with Thanthi TV, Prime Minister @narendramodi mentioned his strong bond with Tamil Nadu.
He recalled his involvement in a historic event that began in Tamil Nadu’s Kanyakumari – the Ekta Yatra.
At the beginning of the Ekta Yatra, BJP President Dr Murli… pic.twitter.com/oFudRn1mNP
— Modi Archive (@modiarchive) April 2, 2024
ಡಿಸೆಂಬರ್ 13, 1991 ರಂದು ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರು 1992 ಜನವರಿ 26 ರಂದು ಶ್ರೀನಗರದಲ್ಲಿ ಏಕತಾ ಯಾತ್ರೆಯ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದ ಘಟನೆಯನ್ನು ಉಲ್ಲೇಖಿಸಲಾಗಿದೆ.
ಆ ಕ್ಷಣ ನನ್ನನ್ನು ಈಗಲೂ ಭಾವುಕಗೊಳಿಸುತ್ತದೆ: ಪ್ರಧಾನಿ ಮೋದಿ
ತಮಿಳುನಾಡು ಜೊತೆಗೆ 50 ವರ್ಷಗಳಿಗೂ ಹೆಚ್ಚು ಕಾಲ ಒಡನಾಟವಿದೆ. ಆದರೆ ನಿಮ್ಮ ನೆಚ್ಚಿನ ಕ್ಷಣ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿ ಪ್ರಧಾನಿ ಮೋದಿ, ನನಗೆ ಇಲ್ಲಿ ಹಲವು ಅನುಭವಗಳಾಗಿವೆ. ಆದರೆ ಒಂದು ಘಟನೆ ನನಗೆ ಬಹಳ ಹತ್ತಿರವಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ಚಿಕ್ಕ ವಯಸ್ಸಿನಲ್ಲಿ ಹುತಾತ್ಮರಾದ ವ್ಯಕ್ತಿಯ ಕುಟುಂಬದ ವೃದ್ಧ ತಾಯಿ ನನ್ನನ್ನು ಭೇಟಿಯಾಗಲು ಬಂದರು, ಅವರು ನನ್ನನ್ನು ಆಶೀರ್ವದಿಸಿದರು. ಆ ಕ್ಷಣ ನನ್ನನ್ನು ಈಗಲೂ ಭಾವುಕರನ್ನಾಗಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದ ರುದ್ರಪುರದಲ್ಲಿ ಪಿಎಂ ರೋಡ್ ಶೋ; 3ನೇ ಅವಧಿಯಲ್ಲಿ ಭ್ರಷ್ಟರ ವಿರುದ್ಧ ತೀವ್ರ ಕ್ರಮ: ಮೋದಿ
ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಒಮ್ಮೆ ತಮ್ಮ ಬೆಂಗಾವಲು ಪಡೆ ಹೋಗುತ್ತಿದ್ದಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅವರನ್ನು ತಡೆದರು. ಅವರು ಬಂದು ನನ್ನ ಕೈಗೆ 11 ರೂ. ನೀಡಿದರು. ತಮಿಳು ಭಾಷೆ ಅರ್ಥವಾಗದ ಕಾರಣ ತಮ್ಮ ಸಹೋದ್ಯೋಗಿಗೆ ಕರೆ ಮಾಡಿ ಆ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂದು ಕೇಳಿದರು. ಆ ವ್ಯಕ್ತಿ ಬೆಂಗಾವಲು ಪಡೆಯನ್ನು ಧಾರ್ಮಿಕ ಯಾತ್ರೆ ಎಂದು ತಿಳಿದು ಪ್ರಧಾನಿಗೆ ಹಣ ನೀಡಿ ದೇವಸ್ಥಾನದಲ್ಲಿ ನೀಡುವಂತೆ ಹೇಳಿದ್ದರು ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Tue, 2 April 24