AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸಂಪುಟ ವಿಸ್ತರಣೆ ಬಳಿಕ ಸಂಪುಟ ಸಮಿತಿ ಪುನರ್ ರಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ; ಸ್ಮೃತಿ ಇರಾನಿ, ಸೋನೊವಾಲ್​ಗೆ ಸ್ಥಾನ

Cabinet committee: ಪ್ರಧಾನಿ ಮೋದಿ ನೇತೃತ್ವದ ನಿರ್ಣಾಯಕ ಸಿಸಿಪಿಎದಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಗಿರಿರಾಜ್ ಸಿಂಗ್, ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮತ್ತು ಸರ್ಬಾನಂದ ಸೋನೊವಾಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಳಿಕ  ಸಂಪುಟ ಸಮಿತಿ ಪುನರ್ ರಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ; ಸ್ಮೃತಿ  ಇರಾನಿ, ಸೋನೊವಾಲ್​ಗೆ  ಸ್ಥಾನ
ನರೇಂದ್ರ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 13, 2021 | 3:54 PM

Share

ದೆಹಲಿ: ಕೇಂದ್ರ ಸಚಿವ ಸಂಪುಟವನ್ನು ವಿಸ್ತರಿಸಿದ ಕೆಲ ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕ್ಯಾಬಿನೆಟ್ ಸಮಿತಿಗಳನ್ನು ಪುನರ್ ರಚಿಸಿದ್ದಾರೆ. ಆರ್ಥಿಕ ವ್ಯವಹಾರಗಳ ಪ್ರಬಲ ಕ್ಯಾಬಿನೆಟ್ ಸಮಿತಿಯನ್ನು (CCEA) ಕಿರಿದಾಗಿಸಿದ್ದು ಮತ್ತು ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ (CCPA) ಹೊಸಬರನ್ನು ತರಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಸಿಸಿಇಎಯಲ್ಲಿ ನಿರ್ಣಾಯಕ ಸಚಿವಾಲಯಗಳನ್ನು ಪ್ರತಿನಿಧಿಸಲಾಗುವುದಿಲ್ಲ. ಆದರೆ ಸಿಸಿಪಿಎ ಮೈತ್ರಿ ಪಾಲುದಾರರು, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸಚಿವರನ್ನು ಒಳಗೊಂಡಿಲ್ಲ.

ಪ್ರಧಾನಿ ಮೋದಿ ನೇತೃತ್ವದ ನಿರ್ಣಾಯಕ ಸಿಸಿಪಿಎದಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಗಿರಿರಾಜ್ ಸಿಂಗ್, ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮತ್ತು ಸರ್ಬಾನಂದ ಸೋನೊವಾಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಮಾಂಡವಿಯಾ ಅವರನ್ನು ಕ್ಯಾಬಿನೆಟ್ ಹುದ್ದೆಗೆ ಏರಿಸಲಾಯಿತು ಮತ್ತು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಉಸ್ತುವಾರಿ ನೀಡಲಾಗಿದೆ. ಕಳೆದ ವಾರ ನಡೆದ ಪುನರ್ ರಚನೆಯಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಜವಾಬ್ದಾರಿ ನೀಡಲಾಗಿದೆ.

ಹಿಂದಿನ ಸಿಸಿಇಎ ಎಸ್‌ಎಡಿಯ ಹರ್ಸಿಮ್ರತ್ ಕೌರ್ ಸೇರಿದಂತೆ 11 ಸದಸ್ಯರನ್ನು ಹೊಂದಿತ್ತು. ಆದಾಗ್ಯೂ, ಹೊಸ ಸಮಿತಿಯು ಕೇವಲ ಎಂಟು ಸದಸ್ಯರನ್ನು ಹೊಂದಿದೆ. ರಾಜನಾಥ್ ಸಿಂಗ್ (ರಕ್ಷಣೆ), ಅಮಿತ್ ಶಾ (ಗೃಹ), ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು), ನಿರ್ಮಲಾ ಸೀತಾರಾಮನ್ (ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು) ನರೇಂದ್ರ ಸಿಂಗ್ ತೋಮರ್ (ಕೃಷಿ ಮತ್ತು ರೈತ ಕಲ್ಯಾಣ), ಎಸ್ ಜೈಶಂಕರ್ (ವಿದೇಶಾಂಗ ವ್ಯವಹಾರ), ಪಿಯೂಷ್ ಗೋಯಲ್ (ವಾಣಿಜ್ಯ) ಮತ್ತು ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಜವಳಿ) ಮತ್ತು ಧರ್ಮೇಂದ್ರ ಪ್ರಧಾನ್ (ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ) ಹೊಸ ಸದಸ್ಯರು.

ಸರ್ಕಾರವು ತನ್ನ ನೀತಿಗಳು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಘೋಷಿಸಿದ ಸಮಯದಲ್ಲಿ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಿಸಿಇಎಯ ಒಂದು ಭಾಗವಲ್ಲ. ಇದು ಆರ್ಥಿಕತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯಂತ ನಿರ್ಣಾಯಕ ಕ್ಯಾಬಿನೆಟ್ ಸಮಿತಿಯಾಗಿದೆ. ರೈಲ್ವೆ, ಅತಿದೊಡ್ಡ ಬಂಡವಾಳ ವಿನಿಯೋಗ ಹೊಂದಿರುವ ಸಚಿವಾಲಯ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯವನ್ನೂ ಸಮಿತಿಯಲ್ಲಿ ಸೇರಿಸಲಾಗಿಲ್ಲ.

ಸಿಸಿಪಿಎಯಲ್ಲಿ ಸ್ಮತಿ ಇರಾನಿ, ಗಿರಿರಾಜ್ ಸಿಂಗ್, ಯಾದವ್ ಮತ್ತು ಸೋನೊವಾಲ್ ಅವರನ್ನು ಹೊರತುಪಡಿಸಿ, ಮೋದಿ ಅವರು ರಾಜನಾಥ್ ಸಿಂಗ್, ಶಾ, ಗಡ್ಕರಿ, ನಿರ್ಮಲಾ  ಸೀತಾರಾಮನ್, ತೋಮರ್, ಗೋಯಲ್, ಪ್ರಹ್ಲಾದ್ ಜೋಶಿ (ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಳು) ಸೇರಿದ್ದಾರೆ. ಸಿಸಿಪಿಎ ಸದಸ್ಯರ ಸಂಖ್ಯೆ ಒಂದೇ ಆಗಿದ್ದರೂ, ಹೊಸದಾಗಿ ರಚನೆಯಾದವರಿಗೆ ಮೈತ್ರಿ ಪಾಲುದಾರರಿಂದ ಯಾವುದೇ ಪ್ರತಿನಿಧಿಗಳು ಇಲ್ಲ. ಈ ಹಿಂದೆ ಬಾದಲ್, ರಾಮ್ ವಿಲಾಸ್ ಪಾಸ್ವಾನ್ (ದಲಿತ ಸಮುದಾಯವನ್ನೂ ಪ್ರತಿನಿಧಿಸುತ್ತಿದ್ದರು) ಮತ್ತು ಅರವಿಂದ ಸಾವಂತ್ ಇದ್ದರು. ಎಸ್‌ಎಡಿ ಮತ್ತು ಸಾವಂತ್ ಅವರ ಶಿವಸೇನೆ ಎರಡೂ ಕಳೆದ ವರ್ಷ ಎನ್‌ಡಿಎಯನ್ನು ತೊರೆದಿದ್ದವು.

ಅದೇ ವೇಳೆ ರಾಜನಾಥ್, ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರು ಪ್ರತೀ ಸಮಿತಿಯ ಸದಸ್ಯರಾಗಿದ್ದು ಗೋಯಲ್ ವಸತಿಗಾಗಿ ಕ್ಯಾಬಿನೆಟ್ ಸಮಿತಿ, ಸಿಸಿಇಎ, ಸಿಸಿಪಿಎ, ಹೂಡಿಕೆ ಮತ್ತು ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿ ಮತ್ತು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿಯಲ್ಲಿದ್ದಾರೆ.

ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳಿಗೆ ಎಲ್ಲಾ ಪ್ರಮುಖ ನೇಮಕಾತಿಗಳನ್ನು ನಿರ್ಧರಿಸುವ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯ ಸಂಯೋಜನೆ ಮತ್ತು ಭದ್ರತಾ ವ್ಯವಹಾರಗಳ ಕುರಿತು ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿಯು ಒಂದೇ ಆಗಿರುತ್ತದೆ. ಮೋದಿ ಮತ್ತು ಶಾ ಇಬ್ಬರೂ ಮೊದಲ ಸದಸ್ಯರಾಗಿದ್ದಾರೆ. ಸಿಸಿಎಸ್ ನಲ್ಲಿ ಮೋದಿ, ರಾಜನಾಥ್ ಸಿಂಗ್, ಶಾ, ಸೀತಾರಾಮನ್ ಮತ್ತು ಜೈಶಂಕರ್ ಅವರು ಮುಂದುವರಿಯಲಿದ್ದಾರೆ.

ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್, ಕಿರಣ್ ರಿಜಿಜು ಮತ್ತು ಅನುರಾಗ್ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಿನ್ನೆ ರಾತ್ರಿ ಕ್ಯಾಬಿನೆಟ್ ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ.ಮುರಳೀಧರನ್ ವಿಶೇಷ ಆಹ್ವಾನಿತರು.

ಪ್ರಧಾನಿ ನೇತೃತ್ವದ ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಕ್ಯಾಬಿನೆಟ್ ಸಮಿತಿಯ ಹೊಸ ಸದಸ್ಯರು ನಾರಾಯಣ್ ರಾಣೆ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಜ್ಯೋತಿರಾದಿತ್ಯ ಎಂ. ಸಿಂಧಿಯಾ (ನಾಗರಿಕ ವಿಮಾನಯಾನ) ಮತ್ತು ಅಶ್ವಿನಿ ವೈಷ್ಣವ್ (ಸಂವಹನ ಸಚಿವ ಎಲೆಕ್ಟ್ರಾನಿಕ್ಸ್ ಮಾಹಿತಿ ಮತ್ತು ತಂತ್ರಜ್ಞಾನ ಸಚಿ ವ).

ವಸತಿ ಸಚಿವ ಸಂಪುಟ ಸಮಿತಿಯು ಶಾ, ಗಡ್ಕರಿ, ಸೀತಾರಾಮನ್, ಗೋಯಲ್ ಮತ್ತು ಹರ್ದೀಪ್ ಪುರಿ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳು) ಸದಸ್ಯರಾಗಿ ಮತ್ತು ರಾಜ್ಯ ಸಚಿವರಾಗಿ ಸ್ವತಂತ್ರ ಹೊಣೆ ಜಿತೇಂದ್ರ ಸಿಂಗ್ (ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪಿಎಂಒ) ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಪಿಎಂ ಮೋದಿ ನೇತೃತ್ವದ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಕ್ಯಾಬಿನೆಟ್ ಸಮಿತಿಯು ಹೊಸ ಸದಸ್ಯರಾದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಭೂಪೇಂದರ್ ಯಾದವ್ ರನ್ನು ಹೊಂದಿದೆ. ಈ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾದ ಗಡ್ಕರಿ, ರಾಮಚಂದ್ರ ಪ್ರಸಾದ್ ಸಿಂಗ್ (ಸ್ಟೀಲ್), ಜಿ. ಕಿಶನ್ ರೆಡ್ಡಿ (ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ) ಇದ್ದಾರೆ.

Cabinet Committees by Rashmi on Scribd

ಇದನ್ನೂ ಓದಿ:  Modi 2.0 Cabinet: ಪ್ರಧಾನಿ ಮೋದಿ ಸಂಪುಟದಲ್ಲಿ ಶೇ 42 ರಷ್ಟು ಸಚಿವರಿಗೆ ಕ್ರಿಮಿನಲ್ ಹಿನ್ನೆಲೆ, 70 ಸಚಿವರು ಕೋಟ್ಯಾಧಿಪತಿಗಳು -ಎಡಿಆರ್​ ವರದಿ

(Prime Minister Narenda Modi on Tuesday has reconstituted the Cabinet committees)

Published On - 12:39 pm, Tue, 13 July 21

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ