ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ: 2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ. ಪ್ರಧಾನಿ ಕಚೇರಿಗೆ […]

ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?
ಪ್ರಧಾನಿ ನರೇಂದ್ರ ಮೋದಿ
ಸಾಧು ಶ್ರೀನಾಥ್​ Edited By:

Updated on: Oct 15, 2020 | 4:30 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ:
2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ.

ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಸಲ್ಲಿಸಿರುವ ಆಸ್ತಿಪಾಸ್ತಿ ಘೋಷಣಾ ಪತ್ರದಲ್ಲಿ ಕಳೆದ 15 ತಿಂಗಳಲ್ಲಿ 36.53 ಲಕ್ಷ ರೂಪಾಯಿಯೊಂದಿಗೆ ಚರಾಸ್ತಿ ಮೊತ್ತ ಅಧಿಕಗೊಂಡಿದೆ. ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಪ್ರಧಾನಿ ಮೋದಿ ಬಳಿ ಒಟ್ಟು 2.5 ಕೋಟಿ ರೂ. ಆಸ್ತಿಯಿದೆ. ಪ್ರಧಾನಿ ಮೋದಿಯ ನಿವ್ವಳ ಆಸ್ತಿ ಜೂನ್ 30ಕ್ಕೆ ಅನುಗುಣವಾಗಿ 2.85 ಕೋಟಿ ರೂ ಆಗಿದೆ. ಅಂದ್ರೆ 36 ಲಕ್ಷ ರೂ ನಷ್ಟು ಹೆಚ್ಚಾಗಿದೆ.

ಪ್ರಧಾನಿ ಮೋದಿ ಕೈಯಲ್ಲಿರುವ ನಗದು 31,450 ರೂ.
ಬ್ಯಾಂಕ್​ ಬ್ಯಾಲೆನ್ಸ್​ 3,38,173 ರೂ.
ಬ್ಯಾಂಕ್​ ಫಿಕ್ಸೆಡ್​ ಡೆಪಾಸಿಟ್ಸ್​ 1,60,28,939 ರೂ.
NSC ಯೋಜನೆಯಲ್ಲಿ ಹೂಡಿಕೆ 8,43,124 ರೂ.
ಜೀವ ವಿಮೆ 1,50,957 ರೂ.
ಮೂಲಸೌಕರ್ಯ ಬಾಂಡ್ 20,000 ರೂ.
ಚರಾಸ್ತಿ 1.75 ಕೋಟಿ ರೂ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us