Rudraksh Varanasi: ಶಿವಲಿಂಗದ ಆಕಾರದಲ್ಲಿ ವಾರಾಣಸಿಯಲ್ಲಿ ಎದ್ದು ನಿಂತಿದೆ ರುದ್ರಾಕ್ಷ ಸೆಂಟರ್; ಈ ಭವ್ಯ ಕಟ್ಟಡದ ವಿಶೇಷತೆಯೇನು ಗೊತ್ತಾ?
Rudraksh Centre Varanasi: 186 ಕೋಟಿ ರೂ., ವೆಚ್ಚದಲ್ಲಿ 2.87 ಹೆಕ್ಟೇರ್ ಪ್ರದೇಶದಲ್ಲಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಅನ್ನು ನಿರ್ಮಿಸಲಾಗಿದೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿ, 1,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದಾರೆ. ವಾರಾಣಸಿಯನ್ನು (Varanasi) ದೇಶದ ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರುದ್ರಾಕ್ಷ (Rudraksh) ಎಂಬ ಅಂತಾರಾಷ್ಟ್ರೀಯ ಕೋಆಪರೇಷನ್ ಮತ್ತು ಕನ್ವೆನ್ಷನ್ ಸೆಂಟರ್ ಅನ್ನು ಉದ್ಘಾಟಿಸಲಾಗಿದೆ. ಇದರ ವೈಮಾನಿಕ ದೃಶ್ಯವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶಿವಲಿಂಗದ ವಿನ್ಯಾಸದಲ್ಲಿರುವ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಬೇರೆಲ್ಲ ಕಟ್ಟಡಗಳಿಗಿಂತಲೂ ವಿಶೇಷವಾಗಿ ನಿರ್ಮಾಣವಾಗಿದೆ. 186 ಕೋಟಿ ರೂ., ವೆಚ್ಚದಲ್ಲಿ 2.87 ಹೆಕ್ಟೇರ್ ಪ್ರದೇಶದಲ್ಲಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಅನ್ನು ನಿರ್ಮಿಸಲಾಗಿದೆ. ಇದು ಎರಡು ಅಂತಸ್ತನ್ನು ಹೊಂದಿದೆ. ರುದ್ರಾಕ್ಷ ಕನ್ವೆನ್ಷನ್ ಸೆಂಟರ್ನನ್ನು ಒಂದೇ ಬಾರಿ 1,200 ಜನರು ಕುಳಿತುಕೊಳ್ಳಲು ಅವಕಾಶವಿದೆ. ರುದ್ರಾಕ್ಷ ಸೆಂಟರ್ನ ಸುತ್ತಲೂ 108 ರುದ್ರಾಕ್ಷಿ ಮಣಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಆಧ್ಯಾತ್ಮಿಕವಾಗಿಯೂ 108 ಸಂಖ್ಯೆ ಬಹಳ ಮುಖ್ಯವಾದುದಾಗಿದೆ.
I am delighted to be inaugurating a convention centre Rudraksh in Varanasi. Constructed with Japanese assistance, this state-of-the-art centre will make Varanasi an attractive destination for conferences thus drawing more tourists and businesspersons to the city. pic.twitter.com/ExoBLO6sp3
— Narendra Modi (@narendramodi) July 14, 2021
ಭಾರತ ಮತ್ತು ಜಪಾನ್ ನಡುವಿನ ಸ್ನೇಹದ ಸಂಕೇತವಾಗಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಇಂದು ಲೋಕಾರ್ಪಣೆಗೊಂಡಿದೆ. ಜಪಾನ್ ನೆರವಿನಿಂದ ಈ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಅನ್ನು ಉದ್ಘಾಟನೆ ಮಾಡಲಾಗಿದೆ. ಇದರಲ್ಲಿ ಸುಮಾರು 120 ಕಾರುಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆಯಿದೆ. ಸಮ್ಮೇಳನಗಳು, ಸಂಗೀತ ಕಚೇರಿ, ಎಕ್ಸಿಬಿಷನ್ಗಳನ್ನು ನಡೆಸಲು ಈ ರುದ್ರಾಕ್ಷದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳಿವೆ. ಇದಕ್ಕೆ ಭದ್ರತಾ ವ್ಯವಸ್ಥೆಯೂ ಕಟ್ಟುನಿಟ್ಟಾಗಿದೆ. ಈ ರುದ್ರಾಕ್ಷ ಸೆಂಟರ್ ಮೂಲಕ ನಮ್ಮ ದೇಶದ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲು ನಿರ್ಧರಿಸಲಾಗಿದೆ.
Aerial view of International Cooperation and Convention Centre, Rudraksh inaugurated by PM Modi.#PMinKashi pic.twitter.com/ZcCdqr7vao
— BJP (@BJP4India) July 15, 2021
ಈ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಜಪಾನ್ ದೇಶದ ಸಹಕಾರದೊಂದಿಗೆ ನಿರ್ಮಾಣವಾಗಿದೆ. ಈ ಕಟ್ಟಡದ ಮೂಲಕ ಭಾರತ ಮತ್ತು ಜಪಾನ್ ದೇಶಗಳೆರಡರ ಸಂಸ್ಕೃತಿ, ಪರಂಪರೆಯನ್ನು ಅನಾವರಣ ಮಾಡಲು ಉದ್ದೇಶಿಸಲಾಗಿದೆ. ಇಡೀ ಕಟ್ಟಡಕ್ಕೆ ಲೈಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಏರಿಯಲ್ ವ್ಯೂ ಮೂಲಕ ಈ ರುದ್ರಾಕ್ಷ ಹೇಗೆ ಕಾಣುತ್ತದೆ ಎಂಬುದರ ವಿಡಿಯೋ ಕೂಡ ಲಭ್ಯವಿದೆ.
(Prime Minister Narendra Modi Shares Aerial View Of Shiv Linga Styled Rudraksh Centre In Varanasi)