Mann Ki Baat: ಮನ್​ ಕೀ ಬಾತ್​ 94ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 30, 2022 | 7:25 AM

PM Narendra Modi: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Mann Ki Baat: ಮನ್​ ಕೀ ಬಾತ್​ 94ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಬೆಳಿಗ್ಗೆ 11 ಗಂಟೆಗೆ ಮನ್ ಕೀ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮದ 94ನೇ ಕಂತು ಇದಾಗಿದೆ. ಆಲ್​ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ (Doordarshan) ಎಲ್ಲ ನೆಟ್​ವರ್ಕ್​ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಎಐಆರ್​ ನ್ಯೂಸ್ ಯೂಟ್ಯೂಬ್ ಚಾನೆಲ್​ನಲ್ಲಿಯೂ ನೇರ ಪ್ರಸಾರಗೊಳ್ಳಲಿದೆ. ಎಐಆರ್ ನ್ಯೂಸ್ (AIR News), ಡಿಡಿ ನ್ಯೂಸ್ (DD News) ಮತ್ತು ವೆಬ್​ಸೈಟ್​ಗಳಲ್ಲಿಯೂ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (PMO) ಮತ್ತು ಮಾಹಿತಿ ಪ್ರಸಾರ ಸಚಿವಾಲಯ ತಿಳಿಸಿದೆ.

ಕಾರ್ಯಕ್ರಮವು ಹಿಂದಿಯಲ್ಲಿ ಪ್ರಸಾರವಾಗಲಿದೆ. ಹಿಂದಿ ಭಾಷಣದ ನೇರ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ. ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮನ್​ ಕೀ ಬಾತ್​ನ 93ನೇ ಆವೃತ್ತಿಯಲ್ಲಿ ಮಾತನಾಡಿದ್ದ ಪ್ರಧಾನಿ, ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಮಾತನಾಡಿದ್ದರು. ಭಗತ್ ಸಿಂಗ್-ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ, ಸರ್ಜಿಕಲ್ ಸ್ಟ್ರೈಕ್, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಹಬ್ಬ ಹರಿದಿನಗಳಲ್ಲಿ ಜನರು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ರಹಿತ ಚೀಲಗಳನ್ನೇ ಬಳಸುವಂತೆ ಕರೆ ನೀಡಿದ್ದರು.

ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಸಂಸ್ಥೆಯು ಸ್ವಚ್ಛತೆ ಮತ್ತು ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದ ಪ್ರಧಾನಿ, ಸಂಸ್ಥೆಯ ಕೆಲಸಕಾರ್ಯವನ್ನು ಶ್ಲಾಘಿಸಿದ್ದರು.

ಸಾರ್ವಜನಿಕರೂ ಮಾಹಿತಿ ಕಳುಹಿಸಬಹುದು

ಪ್ರಧಾನಿಯವರ ಮನ್​ ಕೀ ಬಾತ್​ ಕಾರ್ಯಕ್ರಮಕ್ಕೆ ಸಾರ್ವಜನಿಕರೂ ವಿಷಯಗಳನ್ನು ಕಳುಹಿಸಬಹುದಾಗಿದೆ. ಅನೇಕ ಬಾರಿ ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಕನ್ನಡಿಗರ ಸಾಧನೆ ಬಗ್ಗೆಯೂ ಉಲ್ಲೇಖಿಸಿದ್ದಾರೆ. MyGov, NaMo ಆ್ಯಪ್​ಗೆ ಸಂದೇಶ ಕಳುಹಿಸಬಹುದು. 1800-11-7800 ಟೋಲ್ ಫ್ರೀ ನಂಬರ್​ಗೆ ಕರೆ ಮಾಡಿ ಸಂದೇಶವನ್ನು ರೆಕಾರ್ಡ್ ಸಹ ಮಾಡಬಹುದು. ಪ್ಯಾಕ್ಸ್ ಕಳುಹಿಸುವುದಾದರೆ, +91-11-23019545, 23016857 ಸಂಖ್ಯೆಗಳಿಗೆ ಕಳಿಸಬಹುದು ಎಂದು ಪಿಎಂ ತಿಳಿಸಿದೆ.

Published On - 7:24 am, Sun, 30 October 22