ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ ಸ್ಮರಣಿಕೆಗಳ ಹರಾಜು; ಎನ್​​ಸಿಸಿ ಕಾರ್ಡ್, ರಾಮಮಂದಿರದ ಮಾದರಿಗೆ ಬಹುಬೇಡಿಕೆ

ಈ ವರ್ಗದಲ್ಲಿರುವ ಇತರ ವಸ್ತುಗಳು ಅಯೋಧ್ಯೆಯಲ್ಲಿ ಮುಂಬರುವ ರಾಮಮಂದಿರದ ವಿವಿಧ ಮಾದರಿಗಳನ್ನು ಒಳಗೊಂಡಿವೆ. ಈ ಮಾದರಿಗಳಲ್ಲಿ ಒಂದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿಗೆ ನೀಡಿದ್ದರು.

ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ ಸ್ಮರಣಿಕೆಗಳ ಹರಾಜು; ಎನ್​​ಸಿಸಿ ಕಾರ್ಡ್, ರಾಮಮಂದಿರದ ಮಾದರಿಗೆ ಬಹುಬೇಡಿಕೆ
ಹರಾಜಿನಲ್ಲಿ ಬಹು ಬೇಡಿಕೆಯ ವಸ್ತುಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 18, 2022 | 3:25 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಎನ್​​​​​ಸಿಸಿ ಅಲ್ಯುಮಿನಿ ಅಸೋಸಿಯೇಷನ್ ಕಾರ್ಡ್, ಅಯೋಧ್ಯೆಯಲ್ಲಿನ  ರಾಮಮಂದಿರದ (Ram temple) ಬಹು ಮಾದರಿಗಳು ಮತ್ತು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನ ಮ್ಯಾಸ್ಕಾಟ್‌ನ ಪ್ರತಿಮೆಗಳು ಪ್ರಧಾನಿಗೆ ಉಡುಗೊರೆಯಾಗಿ ಸಿಕ್ಕಿದ ಸ್ಮರಣಿಕೆಗಳ ಆನ್‌ಲೈನ್ ಹರಾಜಿನಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಾದರಿ ಪ್ರತಿಮೆ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ರೀಡಾ ಸ್ಮರಣಿಕೆಗಳು ಸೇರಿದಂತೆ 1,200 ಕ್ಕೂ ಹೆಚ್ಚು ವಸ್ತುಗಳ ಆನ್‌ಲೈನ್ ಹರಾಜಿನಲ್ಲಿದೆ. ಹರಾಜು ಶನಿವಾರ ಪ್ರಾರಂಭವಾಗಿದ್ದು ಅಕ್ಟೋಬರ್ 2 ರವರೆಗೆ ನಡೆಯಲಿದೆ. ಹರಾಜನ್ನು pmmementos.gov.in ವೆಬ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ. ಇದರಲ್ಲಿ ಹೆಚ್ಚು ಬೇಡಿಕೆಯ ವಸ್ತು ಶೀರ್ಷಿಕೆಯಡಿಯಲ್ಲಿ ಐಟಂಗಳನ್ನು ಪಟ್ಟಿ ಮಾಡುವ ಒಂದು ವಿಭಾಗವನ್ನು ಹೊಂದಿದೆ. ಈ ಬೇಡಿಕೆಯ ವಸ್ತುಗಳಲ್ಲಿ ಮೋದಿಯವರ ಫೋಟೊ ಇರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC)  ಅಲ್ಯುಮಿನಿ ಅಸೋಸಿಯೇಷನ್  ಕಾರ್ಡ್ ಹೆಚ್ಚಿನ ಬೇಡಿಕೆ ಹೊಂದಿದ್ದು ಇದಕ್ಕೆ ಭಾನುವಾರ ಬೆಳಿಗ್ಗೆ 11 ಗಂಟೆಯವರೆಗೆ 20 ಕ್ಕೂ ಹೆಚ್ಚು ಬಿಡ್‌ಗಳು ಬಂದಿವೆ.  ಪ್ರಧಾನಿ ಮೋದಿಯವರ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಹರಾಜು ಪ್ರಾರಂಭವಾಗಿತ್ತು.

ಈ ವರ್ಗದಲ್ಲಿರುವ ಇತರ ವಸ್ತುಗಳು ಅಯೋಧ್ಯೆಯಲ್ಲಿ ಮುಂಬರುವ ರಾಮಮಂದಿರದ ವಿವಿಧ ಮಾದರಿಗಳನ್ನು ಒಳಗೊಂಡಿವೆ. ಈ ಮಾದರಿಗಳಲ್ಲಿ ಒಂದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿಗೆ ನೀಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರದ ಸಣ್ಣ ಮಾದರಿಯನ್ನು ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ. ಇದು ರಾಮನ ಜನ್ಮಭೂಮಿಯಾದ ರಾಮ ಜನ್ಮಭೂಮಿಯ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯವಾಗಿದೆ.

6 ಕೆಜಿ ತೂಕದ ಈ  ಮಾದರಿಗಳು 45 cm x 41 cm x 36 cm ನಷ್ಟಿವೆ. ಈ ಉಡುಗೊರೆ ವಸ್ತುವಿನ ಮೂಲ ಬೆಲೆ ₹ 10,800. ಇತರ ರಾಮಮಂದಿರ ಮಾದರಿಗಳು 46 cm x 30 cm x 35 cm ನಷ್ಟಿದ್ದು 2.5 ಕೆಜಿ ತೂಕ ಇದೆ. ಹರಾಜು ವೆಬ್‌ಸೈಟ್‌ನ ಪ್ರಕಾರ ಒಂದು ಮಾದರಿ 3.2 ಕೆಜಿ ತೂಕ ಮತ್ತೊಂದು ಮತ್ತು 1.75 ಕೆಜಿ ತೂಕವನ್ನು ಹೊಂದಿದೆ. ಲೋಹದ ‘ಶಂಖ’ (ಶಂಖ), ಗಣೇಶನ ಪ್ರತಿಮೆಗಳು, ತ್ರಿಶೂಲ ಮತ್ತು ತಿರುಪತಿ ಬಾಲಾಜಿ ಮಹಾರಾಜರ ಮರದ ವಿಗ್ರಹದ ಪ್ರತಿಕೃತಿ ಸೇರಿದಂತೆ ಅನೇಕ ಇತರ ಧಾರ್ಮಿಕ ವಸ್ತುಗಳು ಸಹ ಹರಾಜಿನಲ್ಲಿ ಹೆಚ್ಚು ಬೇಡಿಕೆಯ ವಿಭಾಗದಲ್ಲಿವೆ.

ತಿರುಪತಿ ಬಾಲಾಜಿ ವಿಷ್ಣುವಿನ ಅವತಾರ. ಭಗವಾನ್ ಬಾಲಾಜಿ ಅವರ ಹಣೆಯ ಮೇಲೆ ‘ತಿಲಕ’, ಎಡ ಭುಜದ ಮೇಲೆ ‘ಶಂಖ’ (ಶಂಖ), ಬಲ ಭುಜದ ಮೇಲೆ ‘ಚಕ್ರ’ , ಭೂದೇವಿ ಮತ್ತು ಶ್ರೀದೇವಿಯನ್ನು ಹೃದಯದಲ್ಲಿ ತೋರಿಸಲಾಗಿದೆ. ಇದರ ಬಲಗೈ ಅಭಯ ಮುದ್ರೆಯಲ್ಲಿದ್ದು, ಎಡ ಕೈ ಸೊಂಟದ ಮೇಲೆ ಇದೆ ಎಂದು ಹರಾಜು ವೆಬ್‌ಸೈಟ್‌ನಲ್ಲಿ ವಿವರಣೆ ನೀಡಲಾಗಿದೆ. ಇದನ್ನು ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು. ಲೋಹದ ಈ ‘ಶಂಖ’ ಸೊಗಸಾಗಿದ್ದು ಕೆಂಪು ವೆಲ್ವೆಟ್ ಬಾಕ್ಸ್‌ನೊಳಗೆ ಇರಿಸಲಾಗಿದೆ ಎಂದು ವಿವರಣೆಯಲ್ಲಿದೆ.

Published On - 3:17 pm, Sun, 18 September 22