ನನ್ನನ್ನು ದುರ್ಬಲಗೊಳಿಸಲು ಸೆರೆಮನೆಗೆ ಸಾಧ್ಯವಿಲ್ಲ; ತಿಹಾರ್ ಜೈಲಿನಿಂದ ಹೊರಬಂದ ಅರವಿಂದ್ ಕೇಜ್ರಿವಾಲ್

ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ. ನಾನು ಕಷ್ಟಗಳನ್ನು ಎದುರಿಸಿದೆ ಆದರೆ ದೇವರು ಯಾವಾಗಲೂ ನನ್ನೊಂದಿಗೆ ಇದ್ದಾನೆ. ನನ್ನ ಸ್ಥೈರ್ಯವನ್ನು ಮುರಿಯಲು ಅವರು ನನ್ನನ್ನು ಜೈಲಿಗೆ ಹಾಕಿದರು, ಆದರೆ ನನ್ನ ನೈತಿಕತೆ ಎಂದಿಗಿಂತಲೂ ಹೆಚ್ಚಾಗಿದೆ,ಜೈಲುಗಳು ನನ್ನನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ

ನನ್ನನ್ನು ದುರ್ಬಲಗೊಳಿಸಲು ಸೆರೆಮನೆಗೆ ಸಾಧ್ಯವಿಲ್ಲ; ತಿಹಾರ್ ಜೈಲಿನಿಂದ ಹೊರಬಂದ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Follow us
|

Updated on: Sep 13, 2024 | 8:21 PM

ದೆಹಲಿ ಸೆಪ್ಟೆಂಬರ್ 13: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸುಮಾರು ಆರು ತಿಂಗಳ ಕಾಲ ಜೈಲಿನಲ್ಲಿದ್ದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ (Tihar Jail) ಬಂಧಮುಕ್ತರಾಗಿದ್ದಾರೆ. ಜೈಲಿನಿಂದ ಹೊರ ಬಂದನಂತರ ಮಾತನಾಡಿದ ಕೇಜ್ರಿವಾಲ್, “ಮೊದಲನೆಯದಾಗಿ, ನಾನು ಯಾರ ಆಶೀರ್ವಾದದಿಂದ ಇಲ್ಲಿ ನಿಂತಿದ್ದೇನೆಯೋ ಆ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಭಾರಿ ಮಳೆಯಲ್ಲಿ ಇಲ್ಲಿಗೆ ಆಗಮಿಸಿದ ಲಕ್ಷಾಂತರ ಕೋಟಿ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಗಂಟೆಗಳ ಕಾಲ ತನಗಾಗಿ ಕಾಯುತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ್ದಾರೆ. ದೆಹಲಿ ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದ ನಂತರ ಕೇಜ್ರಿವಾಲ್ ಜೈಲಿನಿಂದ ಇಂದು (ಶುಕ್ರವಾರ) ಹೊರಬಂದಿದ್ದಾರೆ.

ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ. ನಾನು ಕಷ್ಟಗಳನ್ನು ಎದುರಿಸಿದೆ ಆದರೆ ದೇವರು ಯಾವಾಗಲೂ ನನ್ನೊಂದಿಗೆ ಇದ್ದಾನೆ. ನನ್ನ ಸ್ಥೈರ್ಯವನ್ನು ಮುರಿಯಲು ಅವರು ನನ್ನನ್ನು ಜೈಲಿಗೆ ಹಾಕಿದರು, ಆದರೆ ನನ್ನ ನೈತಿಕತೆ ಎಂದಿಗಿಂತಲೂ ಹೆಚ್ಚಾಗಿದೆ,ಜೈಲುಗಳು ನನ್ನನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ

“ಅವರು ನನ್ನನ್ನು ಜೈಲಿಗೆ ಹಾಕಿದರು, ನನ್ನನ್ನು ಕಂಬಿಗಳ ಹಿಂದೆ ಹಾಕುವುದಿಂದ ನನ್ನ ನೈತಿಕತೆ ಮುರಿಯುತ್ತದೆ ಎಂದು ಅವರು ಭಾವಿಸಿದ್ದರು. ಇಂದು, ನಾನು ಜೈಲಿನಿಂದ ಹೊರಬಂದಿದ್ದೇನೆ. ನನ್ನ ನೈತಿಕತೆಯು 100 ಪಟ್ಟು ಹೆಚ್ಚಾಗಿದೆ. ನನ್ನ ಶಕ್ತಿ 100 ಪಟ್ಟು ಹೆಚ್ಚಿದೆ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ ಕೇಜ್ರಿವಾಲ್.

ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ದೇಶವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಸಂಚಾಲಕರಾದ ಕೇಜ್ರಿವಾಲ್ ನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಜೂನ್ 26 ರಂದು ಬಂಧಿಸಿತ್ತು. ತನ್ನ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣ: ಪ್ರತಿಭಟನಾ ನಿರತ ವೈದ್ಯರಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

ಜುಲೈ 12 ರಂದು, ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಷರತ್ತುಗಳು

ಕೇಜ್ರಿವಾಲ್‌ಗೆ ಜಾಮೀನು ನೀಡುವಾಗ, ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಸುಪ್ರೀಂಕೋರ್ಟ್ ಅವರಿಗೆ ನಿರ್ದೇಶನ ನೀಡಿತು, ಇಡಿ ಪ್ರಕರಣದಲ್ಲಿ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳು ಇಲ್ಲಿಯೂ ಅನ್ವಯಿಸುತ್ತವೆ ಎಂದು ಹೇಳಿದರು. ಲೆಫ್ಟಿನೆಂಟ್ ಗವರ್ನರ್ ಅನುಮತಿಯನ್ನು ಪಡೆಯಲು ಕೇಜ್ರಿವಾಲ್ ಅವರು ತಮ್ಮ ಕಚೇರಿ ಅಥವಾ ದೆಹಲಿ ಸೆಕ್ರೆಟರಿಯೇಟ್‌ಗೆ ಭೇಟಿ ನೀಡುವಂತಿಲ್ಲ . ಯಾವುದೇ ಅಧಿಕೃತ ಫೈಲ್‌ಗೆ ಸಹಿ ಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ