ಕೋಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣ: ಪ್ರತಿಭಟನಾ ನಿರತ ವೈದ್ಯರಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ನಾಲ್ಕು ಪುಟಗಳ ಪತ್ರವನ್ನು ಬರೆದಿರುವ ವೈದ್ಯರು ಅದರ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಮತ್ತು ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೂ ಕಳುಹಿಸಿದ್ದಾರೆ. ಪತ್ರದಲ್ಲಿ "ನಾವು ವಿನಮ್ರವಾಗಿ ನಿಮ್ಮ ಗೌರವಾನ್ವಿತರ ಮುಂದೆ ಸಮಸ್ಯೆಗಳನ್ನು ಇಡುತ್ತೇವೆ. ಅತ್ಯಂತ ಹೇಯ ಅಪರಾಧಕ್ಕೆ ಬಲಿಯಾದ ನಮ್ಮ ಸಹೋದ್ಯೋಗಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ವೈದ್ಯರು ಕೋರಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣ: ಪ್ರತಿಭಟನಾ ನಿರತ ವೈದ್ಯರಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ
ವೈದ್ಯರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Sep 13, 2024 | 7:56 PM

ದೆಹಲಿ ಸೆಪ್ಟೆಂಬರ್ 13: ಪ್ರತಿಭಟನಾನಿರತ ವೈದ್ಯರು ಮತ್ತು ಪಶ್ಚಿಮ ಬಂಗಾಳ (West Bengal) ಸರ್ಕಾರದ ನಡುವಿನ ಮಾತುಕತೆ ಸತತ ಮೂರನೇ ದಿನವೂ ವಿಫಲವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ ನಂತರ ಕಿರಿಯ ವೈದ್ಯರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ- ಕೊಲೆಯಾದ ನಂತರ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ನಾಲ್ಕು ಪುಟಗಳ ಪತ್ರವನ್ನು ಬರೆದಿರುವ ವೈದ್ಯರು ಅದರ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಮತ್ತು ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೂ ಕಳುಹಿಸಿದ್ದಾರೆ. ಪತ್ರದಲ್ಲಿ “ನಾವು ವಿನಮ್ರವಾಗಿ ನಿಮ್ಮ ಗೌರವಾನ್ವಿತರ ಮುಂದೆ ಸಮಸ್ಯೆಗಳನ್ನು ಇಡುತ್ತೇವೆ. ಅತ್ಯಂತ ಹೇಯ ಅಪರಾಧಕ್ಕೆ ಬಲಿಯಾದ ನಮ್ಮ ಸಹೋದ್ಯೋಗಿಗೆ ನ್ಯಾಯ ಸಿಗುವಂತೆ ಮಾಡಬೇಕು. ಇದರಿಂದ ನಾವು, ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಅಡಿಯಲ್ಲಿ ಆರೋಗ್ಯ ವೃತ್ತಿಪರರು, ಸಾರ್ವಜನಿಕರಿಗಾಗಿ ನಿರಾತಂಕವಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ .”

ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ “ಸಾಂಸ್ಥಿಕ ಬೆದರಿಕೆಗಳು, ಹಿಂಸಾಚಾರ ಮತ್ತು ವಿಧ್ವಂಸಕತೆ” ಯಲ್ಲಿ ಏರಿಕೆಯಾಗಿದೆ ಎಂದು ಹೇಳಿದ ವೈದ್ಯರು, “ಈ ಪ್ರಯತ್ನದ ಸಮಯದಲ್ಲಿ ನಿಮ್ಮ ಹಸ್ತಕ್ಷೇಪವು ಬೆಳಕಿನ ದಾರಿಯನ್ನು ತೋರಿಸುತ್ತದೆ, ನಮ್ಮನ್ನು ಸುತ್ತುವರೆದಿರುವ ಕತ್ತಲೆಯಲ್ಲಿ ನಮಗೆ ಮುಂದಿನ ದಾರಿಯನ್ನು ತೋರಿಸುತ್ತದೆ.  ಆಗಸ್ಟ್ ಅಂತ್ಯದ ವೇಳೆಗೆ, ಮುರ್ಮು ಅವರು ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಿಂದ ತಾನು ದಿಗ್ಭ್ರಮೆಗೊಂಡಿದ್ದೇನೆ ಮತ್ತು ಗಾಬರಿಗೊಂಡಿದ್ದೇನೆ ಎಂದು ಹೇಳಿದ್ದರು.

“ಹೆಚ್ಚು ಖೇದಕರ ಸಂಗತಿಯೆಂದರೆ, ಇದು (ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ) ಅಂತಹ ಏಕೈಕ ಘಟನೆ ಅಲ್ಲ. ಇದು ಮಹಿಳೆಯರ ವಿರುದ್ಧದ ಅಪರಾಧಗಳ ಸರಣಿಯ ಭಾಗವಾಗಿದೆ”. “12 ವರ್ಷಗಳಲ್ಲಿ ನಿರ್ಭಯಾ, ಅಸಂಖ್ಯಾತ ಅತ್ಯಾಚಾರಗಳನ್ನು ಸಮಾಜವು ಮರೆತಿದೆ, ಈ ಸಾಮೂಹಿಕ ವಿಸ್ಮೃತಿ ಅಸಹ್ಯಕರವಾಗಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ, ಪಶ್ಚಿಮ ಬಂಗಾಳ ಸರ್ಕಾರವು ಪ್ರತಿಭಟನಾ ನಿರತ ವೈದ್ಯರನ್ನು ಮತ್ತೆ ಮಾತುಕತೆಗೆ ಆಹ್ವಾನಿಸಿತ್ತು. ಆದರೆ ಸಭೆಯ ನೇರ ಪ್ರಸಾರಕ್ಕಾಗಿ ಅವರ ಬೇಡಿಕೆಯನ್ನು ಈಡೇರಿಸದ ಕಾರಣ ಸ್ಥಳಕ್ಕೆ ತಲುಪಿದರೂ ಅವರು ಹಾಜರಾಗಲಿಲ್ಲ.

ಇದನ್ನೂ ಓದಿ: ಕೋಲ್ಕತ್ತಾ ಪ್ರಕರಣ: ಸಂಜಯ್ ರಾಯ್ ಒಪ್ಪಿಗೆ ನೀಡದ ಕಾರಣ ನಾರ್ಕೋ ಪರೀಕ್ಷೆಗಾಗಿರುವ ಸಿಬಿಐ ಕೋರಿಕೆಗೆ ಸಿಕ್ಕಿಲ್ಲ ಅನುಮತಿ 

ಎರಡು ಗಂಟೆಗಳ ಕಾಲ ವೈದ್ಯರಿಗಾಗಿ ಕಾದು ಕುಳಿತ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರ ಹಿತಾಸಕ್ತಿಯಿಂದ ರಾಜೀನಾಮೆ ನೀಡಲೂ ನಾನು ಸಿದ್ಧ ಎಂದು ಹೇಳಿದ್ದಾರೆ.  ನಿಯೋಗದಲ್ಲಿ ಅನೇಕರು ಮಾತುಕತೆಯಲ್ಲಿ ಆಸಕ್ತಿ ಹೊಂದಿದ್ದಾರೆಂದು ನನಗೆ ತಿಳಿದಿದೆ. ಆದರೆ ಮೂವರಲ್ಲಿ ಇಬ್ಬರು ಹೊರಗಿನಿಂದ ಸೂಚನೆಗಳನ್ನು ನೀಡುತ್ತಿದ್ದರು. ಅದನ್ನೆಲ್ಲ ನೋಡಿದ್ದೇವೆ. ಹಿಂದೆಯೇ ನಿಂತಿದ್ದ ಪ್ರೆಸ್‌ನವರು ಅದನ್ನು ರೆಕಾರ್ಡ್ ಮಾಡುತ್ತಿರುವುದರಿಂದ ನಾವು ಅದನ್ನು ನೋಡಿದ್ದೇವೆ .ಅವರು ‘ಮಾತುಕತೆ ಮಾಡಬೇಡಿ, ಸಭೆಗೆ ಹೋಗಬೇಡಿ,” ಸೂಚನೆಗಳನ್ನು ನೀಡುತ್ತಿದ್ದರು ಎಂದು ಸಿಎಂ ಮಮತಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Fri, 13 September 24

ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ