ಕೇರಳದಲ್ಲಿ ನಾಳೆ ಖಾಸಗಿ ಬಸ್‌ ಮುಷ್ಕರ

ಕೇರಳ ಸಾರಿಗೆ ಇಲಾಖೆಯು ನವೆಂಬರ್ 1 ರಿಂದ ಭಾರೀ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡಲು ಸೀಟ್ ಬೆಲ್ಟ್ ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಿದೆ. ಬಸ್‌ಗಳ ಮುಂಭಾಗದಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ಕಡ್ಡಾಯವಾಗಿದೆ. ಸ್ಟೇಜ್ ಕ್ಯಾರಿಯರ್‌ಗಳು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಭಾರೀ ವಾಹನಗಳಿಗೆ ಆದೇಶ ಅನ್ವಯಿಸುತ್ತದೆ.

ಕೇರಳದಲ್ಲಿ ನಾಳೆ ಖಾಸಗಿ ಬಸ್‌ ಮುಷ್ಕರ
ಬಸ್ ಮುಷ್ಕರ
Follow us
|

Updated on: Oct 30, 2023 | 8:29 PM

ತಿರುವನಂತಪುರಂ ಅಕ್ಟೋಬರ್ 30: ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಅಕ್ಟೋಬರ್ 31 ರಂದು ಮುಷ್ಕರ (Bus Strike) ನಡೆಸಲು ಖಾಸಗಿ ಬಸ್ ಮಾಲೀಕರು (Private Bus) ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಟಿಕೆಟ್ ದರವನ್ನು ಹೆಚ್ಚಿಸುವುದು(students’ fare hike) ಮತ್ತು ಕಣ್ಗಾವಲು ಕ್ಯಾಮೆರಾಗಳು ಮತ್ತು ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಬೇಡಿಕೆಯ ಆದೇಶವನ್ನು ಹಿಂಪಡೆಯುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಬಸ್ ಮಾಲೀಕರು ಮುಂದಿಟ್ಟಿದ್ದಾರೆ.

ಕೇರಳ ಸಾರಿಗೆ ಇಲಾಖೆಯು ನವೆಂಬರ್ 1 ರಿಂದ ಭಾರೀ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡಲು ಸೀಟ್ ಬೆಲ್ಟ್ ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಿದೆ. ಬಸ್‌ಗಳ ಮುಂಭಾಗದಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ಕಡ್ಡಾಯವಾಗಿದೆ. ಸ್ಟೇಜ್ ಕ್ಯಾರಿಯರ್‌ಗಳು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಭಾರೀ ವಾಹನಗಳಿಗೆ ಆದೇಶ ಅನ್ವಯಿಸುತ್ತದೆ. ಈ ಗಡುವು ವಿಸ್ತರಣೆಗೆ ಖಾಸಗಿ ಬಸ್ ಮಾಲೀಕರು ಕೋರಿದ್ದಾರೆ.

ಕಣ್ಣೂರು ಬಸ್ ನಿರ್ವಾಹಕರ ಸಂಘದ ಸಮನ್ವಯ ಸಮಿತಿ ಭಾನುವಾರ ನಡೆದ ಸಭೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. ನ.21ರಿಂದ ಆರಂಭವಾಗಲಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಕಣ್ಣೂರು ಘಟಕವೂ ಭಾಗವಹಿಸಲಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ಈ ಹಿಂದೆಯೂ ಸಹ ಸಚಿವರು ವಿದ್ಯಾರ್ಥಿಗಳ ಪ್ರಯಾಣ ದರ ಏರಿಕೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ. ಮಾರ್ಚ್ 24, 2021 ರಿಂದ ಬಸ್ ಮಾಲೀಕರು ವಿದ್ಯಾರ್ಥಿಗಳ ಟಿಕೆಟ್ ದರವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಕನಿಷ್ಠ ರಿಯಾಯಿತಿ ದರವನ್ನು ರೂ 6 ಕ್ಕೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ದರವನ್ನು ಕೊನೆಯದಾಗಿ 2012ರಲ್ಲಿ ರೂ 2ಕ್ಕೆ ನಿಗದಿಪಡಿಸಲಾಗಿತ್ತು.

ನ್ಯಾಯಮೂರ್ತಿ ರಾಮಚಂದ್ರನ್ ಆಯೋಗವು ಮೇ 2022 ರಲ್ಲಿ ಸಾಮಾನ್ಯ ಏರಿಕೆಯೊಂದಿಗೆ ವಿದ್ಯಾರ್ಥಿಗಳ ಪ್ರಯಾಣ ದರವನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿದ್ದರೂ, ವಿದ್ಯಾರ್ಥಿಗಳ ದರಗಳ ಶಿಫಾರಸನ್ನು ಅಧ್ಯಯನ ಮಾಡಲು ಯೋಜನಾ ಮಂಡಳಿಯ ಸದಸ್ಯ ಕೆ ರವಿ ರಾಮನ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.

ಶಿಫಾರಸನ್ನು ಅಧ್ಯಯನ ಮಾಡುತ್ತಿರುವ ಸಮಿತಿಯು ಇನ್ನೂ ತನ್ನ ವರದಿಯನ್ನು ಸಲ್ಲಿಸಬೇಕಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ನವೆಂಬರ್ 1 ರಿಂದ ಫಿಟ್‌ನೆಸ್ ಪ್ರಮಾಣಪತ್ರ ಪಡೆಯಲು ಸೀಟ್ ಬೆಲ್ಟ್ ಮತ್ತು ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಿ ಸಚಿವರು ಅಕ್ಟೋಬರ್ 28 ರಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳ ಸಿಎಂ ಹಮಾಸ್ ಅನ್ನು ಸಮುದಾಯದೊಂದಿಗೆ ಸಮೀಕರಿಸಲು ಬಯಸಿದ್ದಾರೆ: ರಾಜೀವ್ ಚಂದ್ರಶೇಖರ್

ಕೆಎಸ್‌ಪಿಬಿಒಎಫ್ ಸದಸ್ಯರು ಸೀಟ್ ಬೆಲ್ಟ್ ಮತ್ತು ಕ್ಯಾಮೆರಾಗಳ ವಿರುದ್ಧ ಅಲ್ಲ ಎಂದು ಹೇಳಿದರು. “ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸುವ ಮೊದಲು, ಸರ್ಕಾರವು ಪ್ರಾಯೋಗಿಕ ಅಂಶಗಳನ್ನು ಪರಿಗಣಿಸಬೇಕು. ಚಾಲಕನ ಜೊತೆಗೆ ಮುಂದಿನ ಸಾಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಕುಳಿತುಕೊಳ್ಳುತ್ತಾರೆ. ಅವರು ಸೀಟ್ ಬೆಲ್ಟ್ ಧರಿಸಬೇಕೆಂದು ಒತ್ತಾಯಿಸಲು ಯಾವಾಗಲೂ ಸಾಧ್ಯವಾಗದಿರಬಹುದು. ಅವರು ನಿರಾಕರಿಸಿದರೆ, ನಾವು ಮೋಟಾರು ವಾಹನ ಇಲಾಖೆಗೆ ದಂಡ ಪಾವತಿಸುವುದು ಕಾರ್ಯಸಾಧ್ಯವಲ್ಲ ಎಂದು ಗೋಪಿನಾಥನ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ