Pune Helicopter Crash: ಹವಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಪತನ
ಹವಮಾನ ವೈಪರೀತ್ಯದಿಂದಾಗಿ ನಾಲ್ವರು ಪ್ರಯಾಣಿಕರಿದ ಹೆಲಿಕಾಪ್ಟರ್ ಪತನಗೊಂಡಿದೆ.
ಪುಣೆ, ಆ.24: ಪ್ರತಿಕೂಲ ಹವಾಮಾನದಿಂದ ಮುಂಬೈನಿಂದ ಹೈದರಾವಾದ್ಗೆ ನಾಲ್ವರು ಪ್ರಯಾಣಿಕರಿದ್ದ ಹೊತ್ತ ಖಾಸಗಿ ಹಲಿಕಾಪ್ಟರ್ ಮಹಾರಾಷ್ಟ್ರದ ಪುಣೆಯಲ್ಲಿ ಇಂದು (ಆ.24) ಪತನಗೊಂಡಿದೆ.
ಪುಣೆ ಜಿಲ್ಲೆಯ ಪೌಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಪೈಲಟ್ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಹೆಲಿಕಾಪ್ಟರ್ AW-139 ಖಾಸಗಿ ವಿಮಾನ ಕಂಪನಿಗೆ ಸೇರಿತ್ತು. ಇನ್ನು ವರದಿಗಳ ಪ್ರಕಾರ, ಪುಣೆಯಲ್ಲಿ ಭಾರೀ ಮಳೆಯಿಂದಾಗಿ ಹೆಲಿಕಾಪ್ಟರ್ ತಾಂತ್ರಿಕ ಅಡಚಣೆ ಕಂಡುಬಂದಿದೆ ಇದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಯಾವುದೇ ಜೀವ ಅಪಾಯ ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
Maharashtra | A private helicopter crashed near Paud village in Pune district. The helicopter belongs to a private aviation company. It was going from Mumbai to Hyderabad. Among the 4 people who were in the Helicopter, the captain sustained injuries and is hospitalised. The rest… https://t.co/Z2MkvvXi91 pic.twitter.com/kF5qg7HOV2
— ANI (@ANI) August 24, 2024
ಆನಂದ್ ಎಂಬುವವರು ಈ ಹೆಲಿಕಾಪ್ಟರ್‌ನ ಕ್ಯಾಪ್ಟನ್ ಆಗಿದ್ದರು. ಅವರು ಕೂಡ ಈ ಘಟನೆಯಿಂದ ಗಾಯಗೊಂಡಿದ್ದಾರೆ. ಈಗಾಗಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಹೆಲಿಕಾಪ್ಟರ್ನಲ್ಲಿ ಕ್ಯಾಪ್ಟನ್ ಆನಂದ್ ಸೇರಿದಂತೆ ದಿರ್ ಭಾಟಿಯಾ, ಅಮರದೀಪ್ ಸಿಂಗ್, ಎಸ್ ಪಿ ರಾಮ್ ಇದ್ದರು ಎಂದು ಹೇಳಲಾಗಿದೆ.
Published On - 3:41 pm, Sat, 24 August 24