ಪುಣೆಯ ವರಂಧ​ ಘಾಟ್​ನಲ್ಲಿ 50 ಅಡಿ ಆಳದ ಕಮರಿಗೆ ಬಿದ್ದ ಮಿನಿ ಬಸ್​, ಚಾಲಕ ಸಾವು, ನಾಲ್ವರಿಗೆ ಗಂಭೀರ ಗಾಯ

|

Updated on: Oct 08, 2023 | 10:36 AM

ಪುಣೆ ನಗರದ ಸಮೀಪದ ವರಂಧ ಘಾಟ್‌ನಲ್ಲಿ ಶನಿವಾರ ಮಧ್ಯರಾತ್ರಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಭೋರ್-ಮಹದ್ ಮಾರ್ಗದ ಘಾಟ್‌ನ ತಿರುವಿನಲ್ಲಿ ಖಾಸಗಿ ಮಿನಿ ಬಸ್ 50 ಅಡಿ ಆಳದ ಕಮರಿಗೆ ಬಿದ್ದಿದೆ. ಇದರಿಂದ ರಾತ್ರಿ ಮಲಗಿದ್ದ ಪ್ರಯಾಣಿಕರು ಒಮ್ಮೆಲೆ ತತ್ತರಿಸಿದರು. ಕೆಳಗೆ ನೀರಾ ದೇವಧರ್ ಅಣೆಕಟ್ಟು ಇತ್ತು. ಬಸ್ ಅಣೆಕಟ್ಟೆಗೆ ಬೀಳುವ ಮುನ್ನವೇ ಮರ, ಪೊದೆಗಳಲ್ಲಿ ಸಿಲುಕಿಕೊಂಡಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಪುಣೆಯ ವರಂಧ​ ಘಾಟ್​ನಲ್ಲಿ 50 ಅಡಿ ಆಳದ ಕಮರಿಗೆ ಬಿದ್ದ ಮಿನಿ ಬಸ್​, ಚಾಲಕ ಸಾವು, ನಾಲ್ವರಿಗೆ ಗಂಭೀರ ಗಾಯ
ಬಸ್ ಅಪಘಾತ
Follow us on

ಪುಣೆ ನಗರದ ಸಮೀಪದ ವರಂಧ ಘಾಟ್‌ನಲ್ಲಿ ಶನಿವಾರ ಮಧ್ಯರಾತ್ರಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಭೋರ್-ಮಹದ್ ಮಾರ್ಗದ ಘಾಟ್‌ನ ತಿರುವಿನಲ್ಲಿ ಖಾಸಗಿ ಮಿನಿ ಬಸ್ 50 ಅಡಿ ಆಳದ ಕಮರಿಗೆ ಬಿದ್ದಿದೆ. ಇದರಿಂದ ರಾತ್ರಿ ಮಲಗಿದ್ದ ಪ್ರಯಾಣಿಕರು ಒಮ್ಮೆಲೆ ತತ್ತರಿಸಿದರು. ಕೆಳಗೆ ನೀರಾ ದೇವಧರ್ ಅಣೆಕಟ್ಟು ಇತ್ತು. ಬಸ್ ಅಣೆಕಟ್ಟೆಗೆ ಬೀಳುವ ಮುನ್ನವೇ ಮರ, ಪೊದೆಗಳಲ್ಲಿ ಸಿಲುಕಿಕೊಂಡಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?
17 ಆಸನಗಳ ಖಾಸಗಿ ಬಸ್ (MH 08 AP1530) ಪುಣೆಯ ಸ್ವರ್ಗೇಟ್‌ನಿಂದ ಭೋರ್ ಮೂಲಕ ಕೊಂಕಣಕ್ಕೆ ಹೋಗುತ್ತಿತ್ತು. ಶನಿವಾರ ರಾತ್ರಿ ಎರಡು ಗಂಟೆಗೆ ಬಸ್ ವರಂಧ್ ಘಾಟ್​ನಲ್ಲಿತ್ತು. ಆ ವೇಳೆ ತಿರುವಿನಲ್ಲಿ ಬಸ್ ಚಾಲಕ ಅಜಿಂಕ್ಯ ಕೋಲ್ಟೆ ನಿಯಂತ್ರಣ ತಪ್ಪಿ ಬಿದ್ದಿದೆ. ಬಳಿಕ ನೀರಾ ದಿಯೋಘರ್ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ 50 ಅಡಿ ಆಳದ ಕಮರಿಗೆ ಬಸ್ ಬಿದ್ದಿದೆ.

ಬಸ್ ಮರಕ್ಕೆ ಸಿಲುಕಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಬಸ್ ಅಣೆಕಟ್ಟೆಯ ನೀರಿಗೆ ಹೋಗಿದ್ದರೆ ಅನಾಹುತವಾಗುತ್ತಿತ್ತು. ಬಸ್ಸಿನಲ್ಲಿದ್ದ 10 ಮಂದಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಸ್ಥಳೀಯರಿಂದ ರಕ್ಷಣಾ ಕಾರ್ಯ
ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ನಾಗರಿಕರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕಾರಿನಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಭೋರ್‌ನ ಉಪಜಿಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಬಸ್​ ಪೊದೆಗಳಲ್ಲಿ ಸಿಲುಕಿಕೊಂಡಿತ್ತು, ನೀರಾ ದಿಯೋಘಢ ಅಣೆಕಟ್ಟು ಆ ಸ್ಥಳದಿಂದ ಕೇವಲ 5 ಅಡಿ ದೂರದಲ್ಲಿತ್ತು. ಬಸ್ ಸಿಕ್ಕಿಹಾಕಿಕೊಳ್ಳದೇ ಇದ್ದಿದ್ದರೆ ಭಾರಿ ಅವಘಡ ಸಂಭವಿಸುತ್ತಿತ್ತು. ಬಸ್ ಸಿಕ್ಕಿಹಾಕಿಕೊಂಡ ನಂತರ ಸ್ಥಳೀಯ ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಎಲ್ಲರನ್ನೂ ಹೊರಕ್ಕೆ ತರಲು ಯತ್ನಿಸಿದರು. ಈ ಘಟನೆಯಲ್ಲಿ ಚಾಲಕ ಅಜಿಂಕ್ಯ ಸಂಜಯ್ ಕೋಲ್ಟೆ ಮೃತಪಟ್ಟಿದ್ದಾರೆ. ಭೋರ್ ಉಪಜಿಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಅಲ್ಲದೆ ರಾಜೇಂದ್ರ ಲಾಲಾ ಮಿಸಾಲ್, ರಮೇಶ್ ತುಕಾರಾಂ ಮಹಾದಿಕ್, ಸುಭಾಷ್ ಕದಮ್ ರಾಹೆ , ಕರಿಷ್ಮಾ ಉತ್ತಮ್ ಕಾಂಬ್ಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ