Charanjit Singh Channi ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಇಂದು ಸಂಜೆ ಭೇಟಿ ಮಾಡಲಿದ್ದಾರೆ ಚರಣ್​​ಜಿತ್ ಸಿಂಗ್ ಚನ್ನಿ

ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರಿಂದರ್ ಸಿಂಗ್ ಕಹಿ ನಿರ್ಗಮನದ ನಂತರ ಅಧಿಕಾರ ವಹಿಸಿಕೊಂಡ ಚನ್ನಿ ಭತ್ತದ ಸಂಗ್ರಹಣೆಯನ್ನು 10 ದಿನಗಳವರೆಗೆ ಮುಂದೂಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮೋದಿಯವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.

Charanjit Singh Channi ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಇಂದು ಸಂಜೆ ಭೇಟಿ ಮಾಡಲಿದ್ದಾರೆ ಚರಣ್​​ಜಿತ್ ಸಿಂಗ್ ಚನ್ನಿ
ಚರಣ್​​ಜಿತ್ ಸಿಂಗ್ ಚನ್ನಿ
Edited By:

Updated on: Oct 01, 2021 | 12:55 PM

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi)  ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಅವರು ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಕೆಲವು ಕೇಂದ್ರ ನಾಯಕರನ್ನು ಭೇಟಿ ಮಾಡಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರಿಂದರ್ ಸಿಂಗ್ ಕಹಿ ನಿರ್ಗಮನದ ನಂತರ ಅಧಿಕಾರ ವಹಿಸಿಕೊಂಡ ಚನ್ನಿ ಭತ್ತದ ಸಂಗ್ರಹಣೆಯನ್ನು 10 ದಿನಗಳವರೆಗೆ ಮುಂದೂಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮೋದಿಯವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಆರಂಭದಲ್ಲಿ, ಭತ್ತ ಸಂಗ್ರಹಣೆಯನ್ನು ಶುಕ್ರವಾರದಿಂದ ಆರಂಭಿಸಲು ನಿರ್ಧರಿಸಲಾಗಿತ್ತು. ಪ್ರಧಾನಿ ಜತೆಗೆ ಚನ್ನಿ ಭೇಟಿಯನ್ನು ಸಂಜೆ 4 ಗಂಟೆಗೆ ನಿಗದಿಪಡಿಸಲಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಚನ್ನಿ ಮೋದಿಗೆ ಪತ್ರ ಬರೆದು ಭೇಟಿಗಾಗಿ ಸಮಯ ಕೇಳಿದರು. ಈ ಮೊದಲು, ಚನ್ನಿ ತನ್ನ ಹೊಸ ಕ್ಯಾಬಿನೆಟ್‌ಗೆ ಹೆಸರುಗಳನ್ನು ಅಂತಿಮಗೊಳಿಸಲು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದರು.

ನವಜೋತ್ ಸಿಂಗ್ ಸಿಧು ಅವರ ಅಧ್ಯಕ್ಷ ಸ್ಥಾನಕ್ಕೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ನ ಪಂಜಾಬ್ ಘಟಕವನ್ನು ಆವರಿಸಿರುವ ಒಂದು ದೊಡ್ಡ ಪ್ರಕ್ಷುಬ್ಧತೆಯ ನಡುವೆ ಚನ್ನಿ ದೆಹಲಿಗೆ ಭೇಟಿನೀಡಲಿದ್ದಾರೆ. ಇತ್ತೀಚಿನ ಕ್ಯಾಬಿನೆಟ್‌ನಲ್ಲಿ ಕೆಲವು ಸಚಿವರ ಬಗ್ಗೆ ಅತೃಪ್ತಿ ಹೊಂದಿದ್ದ ಸಿಧು ಜೊತೆ ಚನ್ನಿ ಗುರುವಾರ ಸಭೆ ನಡೆಸಿದರು.

ಕೆಲವು ತಿಂಗಳುಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿನ ಬಿಕ್ಕಟ್ಟನ್ನು ನಿಭಾಯಿಸುವ ಕುರಿತು ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಕೇಂದ್ರ ನಾಯಕತ್ವದ ಮೇಲೆ, ಮುಖ್ಯವಾಗಿ ರಾಹುಲ್ ಗಾಂಧಿಯವರ ಮೇಲೆ ಹರಿಹಾಯ್ದಿದ್ದಾರೆ.

ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಮತ್ತು ಕಾಂಗ್ರೆಸ್ ತೊರೆಯುವ ಘೋಷಣೆ ಮಾಡಿದ್ದು, ಅಲ್ಲಿ ಅವರು ಸಾಕಷ್ಟು ಅವಮಾನಕ್ಕೊಳಗಾಗಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷದ ಸಂಕಷ್ಟವನ್ನು ಹೆಚ್ಚಿಸಿದೆ. ಪಂಜಾಬ್ ಕಾಂಗ್ರೆಸ್ ಅಧಿಕಾರದಲ್ಲಿರುವ ಉಳಿದ ಮೂರು ರಾಜ್ಯಗಳಲ್ಲಿ ಒಂದಾಗಿದೆ, ಉಳಿದ ಎರಡು ರಾಜ್ಯಗಳು ರಾಜಸ್ಥಾನ ಮತ್ತು ಛತ್ತೀಸ್‌ಗಢ-ಈ ಎರಡೂ ರಾಜ್ಯಗಳು ಅಧಿಕಾರ ಹಂಚಿಕೆ ಸಮಸ್ಯೆಗಳನ್ನು ಎದುರಿಸುತ್ತಿವೆ.

ಇದನ್ನೂ ಓದಿ: ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆಯುವುದು ಖಚಿತ; ಹೊಸ ಪಕ್ಷ ಕಟ್ಟುತ್ತಾರಾ ಕ್ಯಾಪ್ಟನ್?