ಪೂರ್ತಿ ಸಂಬಳ ನನಗೇ ಕೊಡು ಎಂದು ಪತ್ನಿಯನ್ನು ಥಳಿಸುವ ಪತಿ; ವಿದೇಶಕ್ಕೆ ಹೋದರೂ ಸರಿಯಾಗದ ವರ್ತನೆ, ಪೊಲೀಸರಿಗೆ ದೂರು

Gujarat: ಈ ದಂಪತಿ 2018ರ ಆಗಸ್ಟ್​​ನಲ್ಲಿ ಮದುವೆಯಾಗಿದ್ದಾರೆ. ಮಹಿಳೆ ಚಾರ್ಟರ್ಡ್​ ಅಕೌಂಟೆಂಟ್​. ಮದವೆಯಾದ ಕೆಲವೇ ದಿನದಲ್ಲಿ ಪತಿ ಆಕೆಯ ಬಳಿ ನಿನ್ನ ಪೂರ್ತಿ ಸಂಬಳವನ್ನೂ ನನಗೇ ಕೊಡಬೇಕು ಎಂದು ಹೇಳಿದ್ದ.

ಪೂರ್ತಿ ಸಂಬಳ ನನಗೇ ಕೊಡು ಎಂದು ಪತ್ನಿಯನ್ನು ಥಳಿಸುವ ಪತಿ; ವಿದೇಶಕ್ಕೆ ಹೋದರೂ ಸರಿಯಾಗದ ವರ್ತನೆ, ಪೊಲೀಸರಿಗೆ ದೂರು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Oct 01, 2021 | 12:17 PM

ಉದ್ಯೋಗದಲ್ಲಿರುವ ಪತ್ನಿ  ಸಂಬಳವನ್ನು ತನ್ನ ಕೈಗೆ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿ ಆಕೆಗೆ ಮನಬಂದಂತೆ ಥಳಿಸಿರುವ ಘಟನೆ ಗುಜರಾತ್ (Gujarat)​​ನ ಅಹ್ಮದಾಬಾದ್​ನ ನಾನಾ ಚಿಲೋಡಾ ಎಂಬಲ್ಲಿ ನಡೆದಿದೆ. ಪತಿಯಿಂದ ಹಿಂಸೆಗೆ ಒಳಗಾಗಿರುವ 27ವರ್ಷದ ಮಹಿಳೆ ಇದೀಗ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.  ನನ್ನ ಸಂಪೂರ್ಣ ಸಂಬಳವನ್ನೂ ಪತಿ ಕಸಿದುಕೊಳ್ಳುತ್ತಾರೆ. ನಾನು ಅದಕ್ಕೆ ಪ್ರತಿರೋಧ ಒಡ್ಡಿದರೆ ಮನಬಂದಂತೆ ಥಳಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.  ಎಫ್​ಐಆರ್​ ಕೂಡ ದಾಖಲಾಗಿದೆ. 

ಈ ದಂಪತಿ 2018ರ ಆಗಸ್ಟ್​​ನಲ್ಲಿ ಮದುವೆಯಾಗಿದ್ದಾರೆ. ಮಹಿಳೆ ಚಾರ್ಟರ್ಡ್​ ಅಕೌಂಟೆಂಟ್​. ಮದವೆಯಾದ ಕೆಲವೇ ದಿನದಲ್ಲಿ ಪತಿ ಆಕೆಯ ಬಳಿ ನಿನ್ನ ಪೂರ್ತಿ ಸಂಬಳವನ್ನೂ ನನಗೇ ಕೊಡಬೇಕು ಎಂದು ಹೇಳಿದ್ದ. ಆತ ಸ್ವತಃ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪತ್ನಿಯ ಸಂಬಳವೂ ತನಗೇ ಬೇಕು ಎಂಬುದು ಆಗ್ರಹವಾಗಿತ್ತು.  ಆದರೆ ಮಹಿಳೆ ಅರ್ಧ ಸಂಬಳ ತಾನಿಟ್ಟುಕೊಂಡು ಇನ್ನರ್ಧವನ್ನು ಆತನಿಗೆ ಕೊಟ್ಟಿದ್ದರು. ಅಷ್ಟಕ್ಕೇ ತೀವ್ರವಾಗಿ ಕೋಪಗೊಂಡಿದ್ದ ಆತ ಮನಬಂದಂತೆ ಹೊಡೆದಿದ್ದ. ನಾನು ನಿನ್ನನ್ನು ಮದುವೆಯಾಗಿದ್ದೇ ಸಂಬಳಕ್ಕಾಗಿ ಎಂದು ಪತ್ನಿಗೆ ನೇರವಾಗಿಯೇ ಹೇಳಿದ್ದ ಅವನು, ಸ್ಯಾಲರಿ ಕೊಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದ. ಈ ಎಲ್ಲ ವಿವರಗಳನ್ನೂ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ದಂಪತಿ 2019ರಲ್ಲಿ ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾಕ್ಕೆ ಉದ್ಯೋಗಕ್ಕಾಗಿ ತೆರಳಿದ್ದರು. ಅಲ್ಲಿ ಹೋದರೆ ಈ ಜಗಳ, ಹೊಡೆದಾಟ ತಪ್ಪಬಹುದು ಎಂಬ ಆಸೆಯಿತ್ತು. ಆದರೆ ಅಲ್ಲಿಯೂ ಇದೇ ಪರಿಸ್ಥಿತಿಯೇ ಮುಂದುವರಿದಿತ್ತು. ಪತಿ ಹೊಡೆಯುವುದು, ಹಿಂಸಿಸುವುದು ತಪ್ಪಲಿಲ್ಲ. ನಂತರ 2020ರ ಸೆಪ್ಟೆಂಬರ್​​ನಲ್ಲಿ ಮತ್ತೆ ವಾಪಸ್​ ಬಂದೆವು ಎಂದೂ ಮಹಿಳೆ ಹೇಳಿದ್ದಾರೆ.   ಇನ್ನು ಕಳೆದ ವಾರ ನನ್ನ ತಂದೆ-ತಾಯಿ ನನ್ನ ಮನೆಗೆ ಬಂದಿದ್ದರು. ಆಗ ಕೂಡ ನನ್ನ ಪತಿ ಸರಿಯಾಗಿ ವರ್ತಿಸಲಿಲ್ಲ. ಅವರ ಬಳಿ ನಮ್ಮ ಮನೆಗೆ ಬರಬೇಡಿ ಎಂದು ಹೇಳಿದ. ಇದಾದ ಬಳಿಕ ನನಗೂ ತುಂಬ ನೋವಾಯಿತು. ನಾನೂ ಮನೆಬಿಟ್ಟು ಹೋಗಿ ಅಪ್ಪ-ಅಮ್ಮನ ಜತೆ ವಾಸಿಸಲು ಶುರುಮಾಡಿದ್ದೇನೆ ಎಂದೂ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಪ್ರದರ್ಶನಕ್ಕೆ ಅವಕಾಶ; ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ‘ಕಾಗೆ ಮೊಟ್ಟೆ’ ಬಿಡುಗಡೆ

ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!

Published On - 12:14 pm, Fri, 1 October 21

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!