ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಫೆ.8ರವರೆಗೆ ಇಡಿ ಕಸ್ಟಡಿಗೆ

| Updated By: ರಶ್ಮಿ ಕಲ್ಲಕಟ್ಟ

Updated on: Feb 04, 2022 | 7:14 PM

ಜನವರಿ 18 ರಂದು ಮೊಹಾಲಿ, ಲುಧಿಯಾನ, ಫತೇಘರ್ ಸಾಹಿಬ್, ರೂಪನಗರ್ ಮತ್ತು ಪಠಾಣ್‌ಕೋಟ್‌ನಲ್ಲಿ ಸಿಂಗ್ ಅವರ ವ್ಯಾಪಾರ ಪಾಲುದಾರರು ಮತ್ತು ಆರು ಗಣಿಗಾರರ ಆವರಣಗಳಲ್ಲಿ ಇಡಿ ದಾಳಿ ನಡೆಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಫೆ.8ರವರೆಗೆ ಇಡಿ ಕಸ್ಟಡಿಗೆ
ಭೂಪಿಂದರ್ ಸಿಂಗ್
Follow us on

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಅವರ ಸೋದರಳಿಯ, ಭೂಪಿಂದರ್ ಸಿಂಗ್ ಅಲಿಯಾಸ್ ಹನಿ (Bhupinder Singh alias Honey) ಅವರನ್ನು ಜಲಂಧರ್ ನ್ಯಾಯಾಲಯವು ಫೆಬ್ರವರಿ 8 ರವರೆಗೆ ಜಾರಿ ನಿರ್ದೇಶನಾಲಯದ (Enforcement Directorate) ಕಸ್ಟಡಿಗೆ ಶುಕ್ರವಾರ ಕಳುಹಿಸಿದೆ. ಗಡಿ ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಗುರುವಾರ ತಡರಾತ್ರಿ ಸಿಂಗ್ ಅವರನ್ನು ಬಂಧಿಸಿದ್ದಾರೆ. ಪಂಜಾಬ್ ಸಿಎಂ ಸೋದರಳಿಯನನ್ನು ಜಲಂಧರ್‌ನಲ್ಲಿರುವ ಏಜೆನ್ಸಿಯ ಕಚೇರಿಯಲ್ಲಿ ಹಲವಾರು ಗಂಟೆಗಳ ವಿಚಾರಣೆಯ ನಂತರ ಮನಿ ಲಾಂಡರಿಂಗ್ ಆಕ್ಟ್ (PMLA) ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಫೆಬ್ರವರಿ 20 ರಂದು ಪಂಜಾಬ್ ಹೊಸ ಸರ್ಕಾರಕ್ಕಾಗಿ ಮತ ಚಲಾಯಿಸಲು ಸಜ್ಜಾಗಿದೆ. ಬಿಜೆಪಿ ಸರ್ಕಾರವು ಚುನಾವಣೆಗೆ ಒಳಪಟ್ಟಿರುವ ರಾಜ್ಯದಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.  ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತೀವ್ರ ಜಗಳದ ನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮರಿಂದರ್ ಸಿಂಗ್ ಅವರು ಸ್ಥಾನ ಮತ್ತು ಪಕ್ಷವನ್ನು ತೊರೆದ ನಂತರ ಚನ್ನಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮುಂಬರುವ ಚುನಾವಣೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.

ಜನವರಿ 18 ರಂದು ಮೊಹಾಲಿ, ಲುಧಿಯಾನ, ಫತೇಘರ್ ಸಾಹಿಬ್, ರೂಪನಗರ್ ಮತ್ತು ಪಠಾಣ್‌ಕೋಟ್‌ನಲ್ಲಿ ಸಿಂಗ್ ಅವರ ವ್ಯಾಪಾರ ಪಾಲುದಾರರು ಮತ್ತು ಆರು ಗಣಿಗಾರರ ಆವರಣಗಳಲ್ಲಿ ಇಡಿ ದಾಳಿ ನಡೆಸಿತ್ತು.
ಜನವರಿ 19 ರವರೆಗೆ ನಡೆದ ದಾಳಿಯಲ್ಲಿ ಸಿಂಗ್ ಮತ್ತು ಅವರ ಪಾಲುದಾರರಿಂದ ₹ 10 ಕೋಟಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

“ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಜನರನ್ನು ಬೆದರಿಸಲು ಮತ್ತು ವಿರೋಧ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ಕೇಂದ್ರವು ಏಜೆನ್ಸಿಗಳನ್ನು ಬಳಸುತ್ತಿದೆ. ಚುನಾವಣೆ ಸಮಯದಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ಹೇಳಿದ್ದಾರೆ.

111 ದಿನಗಳಲ್ಲಿ ಅದ್ಭುತಗಳು ಸಂಭವಿಸಿದೆ: ಅರವಿಂದ್ ಕೇಜ್ರಿವಾಲ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಕೆಲವೇ ಗಂಟೆಗಳ ನಂತರ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಪಂಜಾಬ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚನ್ನಿ 111 ದಿನಗಳಲ್ಲಿ ಅದ್ಭುತಗಳನ್ನು ಮಾಡಲು ಯಶಸ್ವಿಯಾದರು. ಜನರು ಇಂತಹ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು 4 ರಿಂದ 5 ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಇದು ದುರದೃಷ್ಟಕರ. ಜನರು ನೋಡುತ್ತಿದ್ದಾರೆ ಮತ್ತು ಪಂಜಾಬ್ ಪ್ರಾಮಾಣಿಕ ಸರ್ಕಾರಕ್ಕೆ ಅರ್ಹವಾಗಿದೆ” ಎಂದು ಕೇಜ್ರಿವಾಲ್ ಗೋವಾದ ಡೊನಾ ಪೌಲಾದಲ್ಲಿ ಹೇಳಿದರು.

ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಸೋದರಳಿಯನ ಅರೆಸ್ಟ್ ಮಾಡಿದ ಇ.ಡಿ.; ಇಂದು ಸಿಬಿಐ ಕೋರ್ಟ್​ನಲ್ಲಿ ವಿಚಾರಣೆ

Published On - 7:11 pm, Fri, 4 February 22