ಕೆಲವೊಮ್ಮೆ ಅದೃಷ್ಟ ನಮಗೆ ಕೈ ಕೊಟ್ಟು ಬಿಡುತ್ತದೆ. ನಾವು ಏನೋ ಅಂದುಕೊಂಡಿದ್ದು ಇನ್ನೇನೋ ಆಗಿರುತ್ತದೆ. ಪಂಜಾಬ್‌ನ (Punjab) ವ್ಯಕ್ತಿಯೊಬ್ಬ ಭಾರೀ ಬೇಡಿಕೆಯಿರುವ ಕಪ್ಪು ಕುದುರೆಯನ್ನು ಖರೀದಿಸಿದ್ದ. ಆತನಿಗೆ ಕಪ್ಪು ಕುದುರೆಯನ್ನು ಮಾರಾಟ ಮಾಡಿದ ವ್ಯಾಪಾರಿ ಬರೋಬ್ಬರಿ 22.65 ಲಕ್ಷ ರೂ. ಹಣವನ್ನು ವಂಚಿಸಿದ್ದಾರೆ. ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಬಟ್ಟೆ ವ್ಯಾಪಾರಿ ರಮೇಶ್ ಸಿಂಗ್ ಕಪ್ಪು ಮಾರ್ವಾರಿ ಕುದುರೆಯನ್ನು (Marwari Horse) ಖರೀದಿಸಿ, ಮನೆಗೆ ಬಂದ ಬಳಿಕ ತಮ್ಮ ಕುದುರೆಯನ್ನು ತೊಳೆದಾಗ ಆಘಾತಕ್ಕೊಳಗಾಗಿದ್ದಾರೆ. ಆ ಕುದುರೆಯ ಮೈ ತೊಳೆದಾಗ ಕಪ್ಪು ಬಣ್ಣದ ಕೆಳಗೆ ಕಂದು ಬಣ್ಣವಿರುವುದು ಬಯಲಾಗಿದೆ. ಕಂದು ಬಣ್ಣದ ಕುದುರೆಗೆ ಕಪ್ಪು ಬಣ್ಣ ಬಳಿದು ಆ ವ್ಯಾಪಾರಿ ಯಾಮಾರಿಸಿದ್ದಾನೆ.
ಸ್ಟಡ್ ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಲು ರಮೇಶ್ ಸಿಂಗ್ ನಿರ್ಧರಿಸಿದ ನಂತರ ಈ ವಂಚನೆ ಬಯಲಾಯಿತು. ಗಡಸುತನಕ್ಕೆ ಹೆಸರುವಾಸಿಯಾಗಿರುವ ಮಾರ್ವಾರ್ ಪ್ರದೇಶದ ಅಪರೂಪದ ತಳಿಯಾದ ಮಾರ್ವಾರಿ ಕುದುರೆಗೆ ಸುಮಾರು 23 ಲಕ್ಷ ರೂ. ಹೂಡಿಕೆ ಮಾಡುವುದಾಗಿ ರಮೇಶ್ ಸಿಂಗ್ ಅವರನ್ನು ನಂಬಿಸಲಾಯಿತು. ಕುದುರೆಯನ್ನು ಖರೀದಿಸಿದರೆ 5 ಲಕ್ಷ ರೂ. ಲಾಭವಾಗಬಹುದು ಎಂಬ ನಂಬಿಕೆಯೂ ಅವರಲ್ಲಿತ್ತು. ಟೈಮ್ಸ್ ನೌ ಪ್ರಕಾರ, ವಂಚಕರಿಗೆ ರಮೇಶ್ ಸಿಂಗ್ 7.6 ಲಕ್ಷ ರೂ. ಹಣ ಪಾವತಿಸಿದ್ದಾರೆ. ಉಳಿದ ಮೊತ್ತಕ್ಕೆ ಎರಡು ಚೆಕ್‌ಗಳನ್ನು ನೀಡಿದ್ದಾರೆ.
ಕುದುರೆಯನ್ನು ಖರೀದಿಸಿದ ಬಳಿಕ ಆತ ಒಮ್ಮೆ ಕುದುರೆಗೆ ಸ್ನಾನ ಮಾಡಿಸಲು ಕೊಟ್ಟನು. ಆಗ ಪಂಜಾಬ್ ವ್ಯಾಪಾರಿ ರಮೇಶ್ ಸಿಂಗ್ ಆ ಕುದುರೆಯ ನಿಜವಾದ ಬಣ್ಣವನ್ನು ಕಂಡು ಆಘಾತಕ್ಕೊಳಗಾದನು. ತಿಳಿ ಕಂದು ಬಣ್ಣದ ಕುದುರೆ ಮಾರ್ವಾರಿ ಕುದುರೆಯಲ್ಲ; ಅದು ದೇಸಿ ಸ್ಟಾಲಿಯನ್ ಕುದುರೆ ಎಂಬುದು ಆಗ ಬಯಲಾಯಿತು.
ಈ ಕುರಿತು ರಮೇಶ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೂವರು ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಮೂವರು ಇದೇ ರೀತಿ ಇತರರನ್ನು ಕೂಡ ವಂಚಿಸಿ, ಹಣ ಪಡೆದು ಯಾಮಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral News: ಕೈದಿಯ ಹೆಂಡತಿ ಗರ್ಭಿಣಿಯಾಗಲೆಂದು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ 15 ದಿನಗಳ ಪೆರೋಲ್!
Viral News: ಪ್ರೀತಿಯ ನಾಯಿಯ ನೆನಪಿನಲ್ಲಿ ಅಮೃತಶಿಲೆಯಿಂದ ದೇವಸ್ಥಾನ ಕಟ್ಟಿದ ವೃದ್ಧ!
Published On - 7:20 pm, Mon, 25 April 22