ಕಿರಿಟ್ ಸೋಮಯ್ಯ ಮೇಲೆ ಹಲ್ಲೆ: ಮುಂಬೈನ ಮಾಜಿ ಮೇಯರ್ ವಿಶ್ವಾಸ್ ಮಹದೇಶ್ವರ್ ಸೇರಿ ಮೂವರ ಬಂಧನ

ಕಿರಿಟ್ ಸೋಮಯ್ಯ ಮೇಲೆ ಹಲ್ಲೆ: ಮುಂಬೈನ ಮಾಜಿ ಮೇಯರ್ ವಿಶ್ವಾಸ್ ಮಹದೇಶ್ವರ್ ಸೇರಿ ಮೂವರ ಬಂಧನ
ಕಿರಿಟ್ ಸೋಮಯ್ಯ

ಅಧಿಕಾರದ ದುರುಪಯೋಗ ಮತ್ತು ಆಕ್ರಮಣವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಿಜೆಪಿ ನಿಯೋಗಕ್ಕೆ ನಿತ್ಯಾನಂದ ರಾಯ್ ಭರವಸೆ ನೀಡಿದರು ಎಂದು ಕಿರಿಟ್ ಸೋಮಯ್ಯ ಟ್ವೀಟ್ ಮಾಡಿದ್ದಾರೆ.

TV9kannada Web Team

| Edited By: Rashmi Kallakatta

Apr 25, 2022 | 8:17 PM

ಮುಂಬೈ: ಭಾರತೀಯ ಜನತಾ ಪಕ್ಷದ (BJP) ನಾಯಕ ಕಿರಿಟ್ ಸೋಮಯ್ಯ (Kirit Somaiya) ಅವರ ಮೇಲೆ ಶನಿವಾರ ಖಾರ್ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಮತ್ತು ಮಾಜಿ ನಗರ ಮೇಯರ್ ವಿಶ್ವನಾಥ್ ಮಹದೇಶ್ವರ್ (Vishwanath Mahadeshwar) ಸೇರಿದಂತೆ ನಾಲ್ವರು ಆರೋಪಿಗಳನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರು ಅಮರಾವತಿಯ ಬಂಧಿತ ಶಾಸಕ ದಂಪತಿ, ಸಂಸದೆ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರನ್ನು ಭೇಟಿಯಾಗಲು ಹೋಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸೋಮಯ್ಯ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯ ಸಚಿವ (ಗೃಹ), ನಿತ್ಯಾನಂದ ರಾಯ್ ಮತ್ತು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸೇರಿದಂತೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾದ ದಿನವೇ ಈ ಬಂಧನಗಳು ನಡೆದಿವೆ. “ಅಧಿಕಾರದ ದುರುಪಯೋಗ ಮತ್ತು ಆಕ್ರಮಣವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಿಜೆಪಿ ನಿಯೋಗಕ್ಕೆ ನಿತ್ಯಾನಂದ ರಾಯ್ ಭರವಸೆ ನೀಡಿದರು” ಎಂದು ಮುಂಬೈ ಈಶಾನ್ಯ ಸಂಸದ ಸೋಮಯ್ಯ ಅವರು ಸಭೆಯ ನಂತರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೋಮಯ್ಯ ಅವರು ‘100 ಶಿವಸೇನಾ ಗುಂಡಾಗಳು’ ತಮ್ಮ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಭಾನುವಾರ, ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಟೇಲ್ ಅವರು ನಿಜವಾಗಿಯೂ ಬಿಜೆಪಿ ನಾಯಕರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವುದನ್ನು ದೃಢಪಡಿಸಿದರು. ಈ ವಿಷಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಸೋಮಯ್ಯನ ಮೇಲಿನ ದಾಳಿ ಮತ್ತು ಹಿಂದಿನ ರಾತ್ರಿ ಮತ್ತೊಬ್ಬ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಮೇಲೆ ನಡೆದ ಆಪಾದಿತ ದಾಳಿ ಹಾಗೆಯೇ ರಾಣಾರನ್ನು ಒಳಗೊಂಡಿರುವ ಹನುಮಾನ್ ಚಾಲೀಸಾ ವಿವಾದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಮತ್ತೊಂದು ಜಟಾಪಟಿ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮುಂಬೈನಲ್ಲಿ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ನರೇಂದ್ರ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada