18 ತಿಂಗಳಲ್ಲಿ 11 ಕೊಲೆ: ಹತ್ಯೆ ಮಾಡಿ ಕಾಲು ಮುಟ್ಟಿ ಕ್ಷಮೆ ಕೇಳುತ್ತಿದ್ದ ಸೀರಿಯಲ್ ಕಿಲ್ಲರ್ ಅರೆಸ್ಟ್​

ಸರಣಿ ಕೊಲೆಗಳ ಹಿಂದೆ ಏನೋ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ, ಕೆಲವರಿಗೆ ಕೊಲೆ ಮಾಡುವುದೇ ಕಾಯಕ, ಇನ್ನೂ ಕೆಲವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಇಂಥಾ ಕೆಟ್ಟ ಪ್ರವೃತ್ತಿಗೆ ಇಳಿಯುತ್ತಾರೆ. ಅದೇ ರೀತಿಯ ಸೀರಿಯಲ್ ಕಿಲ್ಲರ್ ಒಬ್ಬನ ವಿಚಾರವನ್ನು ನಾವು ಹಂಚಿಕೊಳ್ಳಲಿದ್ದೇವೆ. ಆತ ಕೊಲೆಗಳನ್ನು ಮಾಡಿ ಬಳಿಕ ಶವದ ಪಾದ ಮುಟ್ಟಿ ಕ್ಷಮೆ ಕೇಳುತ್ತಿದ್ದನಂತೆ.

18 ತಿಂಗಳಲ್ಲಿ 11 ಕೊಲೆ: ಹತ್ಯೆ ಮಾಡಿ ಕಾಲು ಮುಟ್ಟಿ ಕ್ಷಮೆ ಕೇಳುತ್ತಿದ್ದ ಸೀರಿಯಲ್ ಕಿಲ್ಲರ್ ಅರೆಸ್ಟ್​
ಬಂಧನ
Follow us
ನಯನಾ ರಾಜೀವ್
|

Updated on: Dec 25, 2024 | 8:14 AM

ಅಂತೂ ಪಂಜಾಬ್ ಪೊಲೀಸರು 18 ತಿಂಗಳುಗಳಲ್ಲಿ 11 ಪುರುಷರನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಒಬ್ಬ ಸಲಿಂಗಿ, ಈ 11 ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ಸಂಬಂಧ ಹೊಂದಿದ್ದ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ. ಇದುವರೆಗೆ ಆತ 11 ಕೊಲೆ ಮಾಡಿದ್ದರೂ ಆತನಿಗೆ ಕೆಲವು ಕೊಲೆಗಳ ಬಗ್ಗೆ ಅಷ್ಟಾಗಿ ನೆನಪೇ ಇಲ್ಲವಂತೆ.

ಕೊಲೆ ಮಾಡಿ ಬಳಿಕ ಶವದ ಪಾದ ಮುಟ್ಟಿ ಕ್ಷಮೆ ಕೇಳುತ್ತಿದ್ದ, ಆತ ರಸ್ತೆಯಲ್ಲಿ ಕಾಣುವ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದ. ಅವರೊಂದಿಗೆ ದೈಹಿಕ ಸಂಪರ್ಕ ಸಾಧಿಸಿ ತನ್ನ ರಹಸ್ಯ ಬಯಲಾಗದಂತೆ ಅವರನ್ನು ದರೋಡೆ ಮಾಡಿ ಕೊಂದು ಹಾಕುತ್ತಿದ್ದ. ಆರೋಪಿ ರಾಮ್ ಸರೂಪ್ ಅಲಿಯಾಸ್ ಸೋಧಿ ಕಿರಾತ್‌ಪುರ ಸಾಹಿಬ್ ಬಳಿಯ ಮೌಡಾ ಟೋಲ್ ಪ್ಲಾಜಾ ಬಳಿ ಹಿಡಿಯಲಾಗಿದೆ.

ರೋಪರ್ ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಘಟನೆಗಳು ಪೊಲೀಸರ ನಿದ್ದೆಗೆಡಿಸಿದ್ದವು. ಆತ 10ಕ್ಕೂ ಹೆಚ್ಚು ಜನರನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮೃತ ಹರ್‌ಪ್ರೀತ್ ಅಲಿಯಾಸ್ ಸನ್ನಿ ಮೊದಲು ತನ್ನೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿ ಸೋಧಿ ಹೇಳಿದ್ದಾನೆ. ನಂತರ ಹಣ ನೀಡಲು ನಿರಾಕರಿಸಿದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದು ಹರ್‌ಪ್ರೀತ್‌ನನ್ನು ಕೊಂದಿದ್ದಾನೆ.

ಆತ ಮಾದಕ ವ್ಯಸನಿಯಾಗಿದ್ದು, ಕುಡಿದ ಮತ್ತಿನಲ್ಲೇ ಎಲ್ಲಾ ಅಪರಾಧಗಳನ್ನು ಎಸಗುತ್ತಿದ್ದ. ಎರಡು ವರ್ಷಗಳ ಹಿಂದೆ ಆತನ ಕುಟುಂಬಸ್ಥರು ಆತನನ್ನು ಮನೆಯಿಂದ ಹೊರಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್.. ಚೇಸ್ ಮಾಡಿಕೊಂಡು ಬಂದು ವ್ಯಕ್ತಿಯ ಕೈ ಕತ್ತರಿಸಿ ಪರಾರಿ..!

ಆರೋಪಿ ತಾನು ಹಲವು ಅಪರಾಧಗಳನ್ನು ಮಾಡಿದ್ದು, ಅವುಗಳಲ್ಲಿ ಹಲವು ತನಗೆ ನೆನಪಿಲ್ಲ. ಕೊಲೆ ಮಾಡಿದ ನಂತರ ಪಶ್ಚಾತ್ತಾಪಪಟ್ಟು ಮೃತದೇಹದ ಪಾದ ಮುಟ್ಟಿ ಕ್ಷಮೆ ಯಾಚಿಸುತ್ತಿದ್ದೆ. ಪಾನಮತ್ತನಾಗಿ ಎಲ್ಲ ಕೃತ್ಯಗಳನ್ನು ಎಸಗಿರುವುದಾಗಿ ಆರೋಪಿ ಹೇಳಿದ್ದಾನೆ.

ಆತ ಮೊದಲು ಕಾರಿನಲ್ಲಿ ಲಿಫ್ಟ್​ ಕೊಡುವಂತೆ ಹೇಳಿ ಅವರನ್ನು ದರೋಡೆ ಮಾಡುತ್ತಿದ್ದ ಅದನ್ನು ವಿರೋಧಿಸಿದರೆ ಅವರನ್ನು ಅಲ್ಲೇ ಕೊಲೆ ಮಾಡುತ್ತಿದ್ದ. ಆತ ಕೊಲೆ ಮಾಡಲು ಇಟ್ಟಿಗೆಯಂತಹ ವಸ್ತುವನ್ನು ಬಳಸುತ್ತಿದ್ದ ಇಲ್ಲವಾದರೆ ಕತ್ತು ಹಿಸುಕಿ ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಸ್ವಾಮಿ ಆತ್ಮಹತ್ಯೆ

ಆರೋಪಿಯನ್ನು ಹೋಶಿಯಾರ್‌ಪುರ ಜಿಲ್ಲೆಯ ಚೌರಾ ಗ್ರಾಮದ ರಾಮ್ ಸರೂಪ್ ಅಲಿಯಾಸ್ ಸೋಧಿ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆತ ಸರಣಿ ಹಂತಕ ಎಂಬುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ