Sidhu Moosewala Murder Case ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿ ಅರೆಸ್ಟ್; 5 ದಿನ ಪೊಲೀಸ್ ವಶಕ್ಕೆ

| Updated By: ರಶ್ಮಿ ಕಲ್ಲಕಟ್ಟ

Updated on: May 31, 2022 | 9:49 PM

ಬಂಧಿತ ಆರೋಪಿಯನ್ನು ಮನ್‌ಪ್ರೀತ್ ಎಂದು ಗುರುತಿಸಲಾಗಿದ್ದು ಆತನನ್ನು ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ .

Sidhu Moosewala Murder Case ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿ ಅರೆಸ್ಟ್;  5 ದಿನ ಪೊಲೀಸ್ ವಶಕ್ಕೆ
ಸಿಧು ಮೂಸೆ ವಾಲಾ
Follow us on

ದೆಹಲಿ: ಪಂಜಾಬ್ ಪೊಲೀಸರು (Punjab Police) ಮಂಗಳವಾರ ಸಿಧು ಮೂಸೆವಾಲಾ (Sidhu Moose Wala)ಕೊಲೆ ಪ್ರಕರಣದಲ್ಲಿ ಮೊದಲ ಬಂಧನವನ್ನು ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮನ್‌ಪ್ರೀತ್ (Manpreet) ಎಂದು ಗುರುತಿಸಲಾಗಿದ್ದು ಆತನನ್ನು ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ .ಇಡೀ ಸಂಗೀತ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ಕೊಲೆ ನಡೆದ 24 ಗಂಟೆಯೊಳಗೆ ಆ ಬಂಧನ ನಡೆದಿದೆ. ಸೋಮವಾರ ಡೆಹ್ರಾಡೂನ್‌ನಿಂದ ವಶಕ್ಕೆ ತೆಗೆದುಕೊಂಡ ಆರು ಮಂದಿಯಲ್ಲಿ ಮನ್‌ಪ್ರೀತ್ ಕೂಡ ಸೇರಿದ್ದಾರೆ. ಮನ್‌ಪ್ರೀತ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯವರು. ಈತ ದಾಳಿಕೋರರಿಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸಿದ್ದಾನೆ. ಆದರೆ ದಾಳಿಕೋರರಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಮನ್‌ಪ್ರೀತ್‌ನಿಂದ ದಾಳಿಕೋರರ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ. ಈತನನ್ನು ಮಾನಸ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮಾನ್ಸಾ ಜಿಲ್ಲೆಯಲ್ಲಿ  ಮೂಸೆ ವಾಲಾ ಅಂತ್ಯಕ್ರಿಯೆ

ಮಾನ್ಸಾ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸೆ ವಾಲಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಮಧ್ಯಾಹ್ನ ಸ್ವಗ್ರಾಮದ ಜಮೀನಿನಲ್ಲಿ ನೆರವೇರಿಸಲಾಯಿತು. ಮೂಸೆ ವಾಲಾ ದೇಹದೊಳಗೆ  24 ಗುಂಡುಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಕೃಷಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಪಂಜಾಬ್, ರಾಜಸ್ಥಾನ ಮತ್ತು ಚಂಡೀಗಢದ ಇತರ ಸ್ಥಳಗಳ ಜನರು ಗಾಯಕನ ಅಂತಿಮ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮೂಸೆ ವಾಲಾ ಅವರ ತಂದೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಾ ವಾರಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಇದ್ದರು. ಮೂಸ್ ವಾಲಾ ಅವರ ನೆಚ್ಚಿನ 5911 ಟ್ರ್ಯಾಕ್ಟರ್‌ನಲ್ಲಿ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ತರಲಾಗಿತ್ತು.
ಇದಕ್ಕೂ ಮುನ್ನ, 28 ವರ್ಷದ ಸಿಧು ಮೂಸೆ ವಾಲಾ ಎಂದು ಕರೆಯಲ್ಪಡುವ ಶುಭದೀಪ್ ಸಿಂಗ್ ಅವರ ಮನೆಗೆ ಅಂತಿಮ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 9:22 pm, Tue, 31 May 22