ನಾನ್ಯಾವತ್ತೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಅಂತ ಪ್ರಶಾಂತ್ ಕಿಶೋರ್ ಎರಡೂ ಕೈ ಜೋಡಿಸಿ ಹೇಳಿದರು!

ಕಳೆದ ವರ್ಷ ಅವರು ಗಾಂಧಿ ಕುಟುಂಬಕ್ಕೆ ಪ್ರಸ್ತುತಪಡಿಸಿದ ಯೋಜನೆಯಲ್ಲಿ ಸೋನಿಯಾ ಗಾಂಧಿಯನ್ನು ಪಕ್ಷದ ಅಧ್ಯಕ್ಷರಾಗಿ ಮತ್ತು ಪಕ್ಷದ ಒಬ್ಬ ‘ಗಾಂಧಿಯೇತರ’ ಸದಸ್ಯನನ್ನು ಕಾರ್ಯಾಧ್ಯಕ್ಷ ಅಥವಾ ಉಪಾಧ್ಯಕ್ಷರನ್ನಾಗಿ ಮಾಡಬೇಕೆನ್ನುವ ಸಲಹೆಯನ್ನು ನೀಡಿದ್ದರು.

ನಾನ್ಯಾವತ್ತೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಅಂತ ಪ್ರಶಾಂತ್ ಕಿಶೋರ್ ಎರಡೂ ಕೈ ಜೋಡಿಸಿ ಹೇಳಿದರು!
ನಿಮ್ಮ ಸಹವಾಸವೇ ಬೇಡ ಎಂದರು ಪ್ರಶಾಂತ್ ಕಿಶೋರ್Image Credit source: NDTV.com
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 31, 2022 | 10:35 PM

ನವದೆಹಲಿ: ಕೆಲವೇ ವಾರಗಳ ಒಂದು ಸುದ್ದಿ ಭಾರಿ ಸದ್ದು ಮಾಡುತಿತ್ತು. ಚುನಾವಣಾ ಸ್ಟ್ರಾಟಿಜಿಸ್ಟ್ (poll strategist) ಪ್ರಶಾಂತ್ ಕಿಶೋರ್ (Prashant Kishor) ಅವರು ಕಾಂಗ್ರೆಸ್ ಪಕ್ಷ (Congress party) ಸೇರುತ್ತಾರಾ ಇಲ್ಲವಾ ಅನ್ನೋದು. ಆಯ್ತು, ಅವರು ಪಕ್ಷ ಸೇರಿಯಾಗಿದೆ, ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ ಅಂತ ನಾವು ಕೂಡ ವರದಿ ಮಾಡಿದ್ದೆವು. ಬಹಳ ಕುತೂಹಲ ಮೂಡಿಸಿದ್ದ ಈ ಸುದ್ದಿ ಅವರ ಸೇರ್ಪಡೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದ ನಿರೀಕ್ಷೆಯಲ್ಲಿರುವಾಗಲೇ ಪ್ರಶಾಂತ್ ಕಾಂಗ್ರೆಸ್ ಮನೆಯಿಂದ ಮೈ ಜಾಡಿಸಿಕೊಂಡು ಹೊರಬಂದರು. ಅಲ್ಲಿಗೆ ಆ ಸುದ್ದಿಗೆ ಬ್ರೇಕ್ ಬಿದ್ದುಬಿಟ್ಟತು. ಆದರೆ ರಾಜಕೀಯ ವಲಯಗಳಲ್ಲಿ ಚರ್ಚೆ ಮುಂದುವರೆದಿತ್ತು. ಅವರಿಗಾಗಿ ಬಾಗಿಲು ಇನ್ನೂ ತೆಗೆದೇ ಇದೆ ಅಂತ ಕಾಂಗ್ರೆಸ್ ಹೇಳುತಿತ್ತು, ಅದರೆ ಪ್ರಶಾಂತ್ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ವಿಷಯವೇನು ಗೊತ್ತಾ? ಮಂಗಳವಾರ ಮಾಧ್ಯಮದವರು ಪ್ರಶಾಂತ್ ಅವರಿಗೆ ಇದೇ ಪ್ರಶ್ನೆಯನ್ನು ಕೇಳಿದಾಗ ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ‘ಇಲ್ಲ, ನಾನ್ಯಾವತ್ತೂ ಆ ಪಾರ್ಟಿಗೆ ಹೋಗೋದಿಲ್ಲ,’ ಅಂತ ಹೇಳಿದರು.

ತಾವು ಒಂದು ಹೊಸ ರಾಜಕೀಯ ಪಕ್ಷ ರಚಿಸುವ ಮತ್ತು ತಮ್ಮ ತವರು ರಾಜ್ಯ ಬಿಹಾರನಲ್ಲಿ ಒಂದು ಪರ್ಯಾಯ ಸರ್ಕಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ರಾಜ್ಯದ ಹಳ್ಳಿಗಳನ್ನು ಸುತ್ತುತ್ತಿರುವ ಪ್ರಶಾಂತ್ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು.

ಕಾಂಗ್ರೆಸ್ ಎಲ್ಲರನ್ನೂ ಜೊತೆ ಸೇರಿಸಿಕೊಂಡು ಮುಳುಗುತ್ತದೆ ಎಂದು ಪ್ರಶಾಂತ್ ಹೇಳಿದರು.

‘2015ರಲ್ಲಿ ನಾವು ಬಿಹಾರನಲ್ಲಿ ಜಯ ಸಾಧಿಸಿದೆವು, 2017ರಲ್ಲಿ ಪಂಜಾಬ್ ನಲ್ಲಿ ಗೆಲುವು ನಮಗೆ ದಕ್ಕಿತು. 2019ರಲ್ಲಿ ಆಂಧ್ರ ಪ್ರದೇಶನಲ್ಲಿ ಜಗನ್ ಮೋಹನ್ ರೆಡ್ಡಿ ಗೆದ್ದರು. ತಮಿಳುನಾಡು ಮತ್ತು ಬಂಗಾಳದಲ್ಲೂ ಗೆದ್ದೆವು. ಕಳೆದ 11 ವರ್ಷಗಳಲ್ಲಿ ನಾವು 2017ರಲ್ಲಿ ಉತ್ತರ ಪ್ರದೇಶನಲ್ಲಿ ನಡೆದ ಚುನಾವಣೆ ಮಾತ್ರ ಸೋತಿದ್ದೇವೆ. ಹಾಗಾಗೇ, ನಾನು ಕಾಂಗ್ರೆಸ್ ನೊಂದಿಗೆ ಯಾವತ್ತೂ ಕೈ ಜೋಡಿಸಬಾರದೆಂದು ನಿರ್ಧರಿಸಿದ್ದೇನೆ,’ ಎಂದು ಪಿಕೆ ಅಂತಲೂ ಕರೆಸಿಕೊಳ್ಳುವ ಪ್ರಶಾಂತ್ ಎರಡೂ ಕೈ ಜೋಡಿಸಿ ಹೇಳಿದರು.

‘ಕಾಂಗ್ರೆಸ್ ಗೆ ಪಕ್ಷದ ಸಂಘಟನೆ ಮಾಡುವುದೇ ಬೇಕಿಲ್ಲ. ಕಾಂಗ್ರೆಸ್ ನ ಈಗಿನ ಬಾಸ್ಗಳು ಹೇಗಿದ್ದಾರೆಂದರೆ ತಮ್ಮೊಂದಿಗೆ ಜನರನ್ನು ಸೇರಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ. ನಾನು ಹೋದರೆ ನಾನೂ ಮುಳುಗಿ ಬಿಡುತ್ತೇನೆ’ ಅಂತ ಪಿಕೆ ಹೇಳಿದರು.

ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಯಾದವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೈಶಾಲಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.

ಇದಕ್ಕೂ ಮೊದಲು, ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅಯೋಜಿಸಿದ್ದ ‘ಚಿಂತನ್ ಶಿವರ್’ ಅನ್ನು ‘ವಿಫಲ’, ವ್ಯರ್ಥ ಸಮಯ ಮತ್ತು ಹಣ ಹಾಳು ಎಂದು ಹೇಳಿದ್ದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಪಕ್ಷ ಅವನತಿ ಕಾಣಲಿದೆ ಎಂದು ಭವಿಷ್ಯ ನುಡಿದಿದ್ದರು.

ಪಿಕೆ ಅವರ ಪಾತ್ರದ ಬಗ್ಗೆ ತಲೆದೋರಿದ ಭಿನ್ನಾಭಿಪ್ರಾಯದಿಂದಾಗಿ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್‌ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಯಿತು. ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವಗೊಳಿಸುವ ಯೋಜನೆಯ ಭಾಗವಾಗಿ ಪ್ರಶಾಂತ ಪಕ್ಷದ ಹಿರಿಯ ನಾಯಕರ ಸಮಿತಿಯ ಮುಂದೆ 600-ಸ್ಲೈಡ್ ಗಳ ಪ್ರಸೆಂಟೇಷನ್ ನೀಡಿದರು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಕಳೆದ ವರ್ಷ ಅವರು ಗಾಂಧಿ ಕುಟುಂಬಕ್ಕೆ ಪ್ರಸ್ತುತಪಡಿಸಿದ ಯೋಜನೆಯಲ್ಲಿ ಸೋನಿಯಾ ಗಾಂಧಿಯನ್ನು ಪಕ್ಷದ ಅಧ್ಯಕ್ಷರಾಗಿ ಮತ್ತು ಪಕ್ಷದ ಒಬ್ಬ ‘ಗಾಂಧಿಯೇತರ’ ಸದಸ್ಯನನ್ನು ಕಾರ್ಯಾಧ್ಯಕ್ಷ ಅಥವಾ ಉಪಾಧ್ಯಕ್ಷರನ್ನಾಗಿ ಮಾಡಬೇಕೆನ್ನುವ ಸಲಹೆಯನ್ನು ನೀಡಿದ್ದರು. ಕಾಂಗ್ರೆಸ್ ಸಂಸದೀಯ ಮಂಡಳಿಯ ಮುಖ್ಯಸ್ಥರನ್ನಾಗಿ ರಾಹುಲ್ ಗಾಂಧಿಯನ್ನು ನೇಮಕ ಮಾಡಬೇಕೆನ್ನುವ ಶಿಫಾರಸನ್ನು ಪ್ರಶಾಂತ್ ಮಾಡಿದ್ದರು.

ಎರಡನೇ ಬಾರಿ ಕಾಂಗ್ರೆಸ್ ಪಕ್ಷದ ಜೊತೆ ಮಾತುಕತೆ ನಡೆಸಿದ ಪಿಕೆ, ಅದರ ನಾಯಕರು ತಮಗೆ ಸಬಲೀಕರಣ ಕ್ರಿಯಾ ಸಮಿತಿಯೊಂದರ ಸದಸ್ಯನಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದಾಗ, ತಾನು ಗೋಡೆಗೆ ತಲೆ ಚಚ್ಚುತ್ತಿದ್ದೇನೆ ಅಂತ ಮನವರಿಕೆ ಮಾಡಿಕೊಂಡು ತಮ್ಮ ನಿರ್ಧಾರ ಬದಲಿಸಿ ಅಲ್ಲಿಂದ ಹೊರಬಿದ್ದರು. ಪಕ್ಷದ ಸಂವಿಧಾನದಡಿಯಲ್ಲಿ ತನಗೆ ಯಾವುದೇ ಅಧಿಕಾರ ದೊರೆಯದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಒಳಜಗಳದ ಭಾಗವಾಗಿರುತ್ತಿದ್ದೆ ಮತ್ತು ಅದು ಹೆಚ್ಚಲು ಕಾರಣನಾಗುತ್ತಿದ್ದೆ ಎಂದು ಪ್ರಶಾಂತ್ ಹೇಳಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 10:34 pm, Tue, 31 May 22

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ