AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಳ್ಳಿಯಲ್ಲಿ ಪೋಷಕರ ಒಪ್ಪಿಗೆ ಪಡೆಯದೆ ಪ್ರೇಮ ವಿವಾಹವಾಗುವಂತಿಲ್ಲ

ಮದುವೆಯಲ್ಲಿ ಮೂರು ಪ್ರಕಾರಗಳಿವೆ ಒಂದು ಅರೇಂಜ್ಡ್​ ಮತ್ತೊಂದು ಲವ್ ಮ್ಯಾರೇಜ್ ಮತ್ತೊಂದು ಲವ್-ಕಮ್ ಅರೇಂಜ್ಡ್​ ಮದುವೆ. ಈ ಹಳ್ಳಿಯಲ್ಲಿ ಪ್ರೇಮ ವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೋಷಕರ ಒಪ್ಪಿಗೆ ಪಡೆಯದೆ ವಿವಾಹವಾಗುವಂತಿಲ್ಲ. ಅರೇಂಜ್ಡ್​​ ಮದುವೆಯಲ್ಲಿ ಪೋಷಕರು ನಿಶ್ಚಯಿಸಿದ ಮದುವೆಯಾಗಿರುತ್ತದೆ, ಲವ್ ಮ್ಯಾರೇಜ್​ ಅಲ್ಲಿ ತಾನು ಇಷ್ಟ ಪಟ್ಟ ಸಂಗಾತಿ ಜತೆಗೆ ಮದುವೆ ನಡೆಯುತ್ತದೆ.

ಈ ಹಳ್ಳಿಯಲ್ಲಿ ಪೋಷಕರ ಒಪ್ಪಿಗೆ ಪಡೆಯದೆ ಪ್ರೇಮ ವಿವಾಹವಾಗುವಂತಿಲ್ಲ
ಮದುವೆ Image Credit source: Times Of India
ನಯನಾ ರಾಜೀವ್
|

Updated on: Aug 05, 2025 | 7:50 AM

Share

ಪಂಜಾಬ್, ಆಗಸ್ಟ್​ 05: ಮದುವೆ(Marriage)ಯಲ್ಲಿ ಮೂರು ಪ್ರಕಾರಗಳಿವೆ ಒಂದು ಅರೇಂಜ್ಡ್​ ಮತ್ತೊಂದು ಲವ್ ಮ್ಯಾರೇಜ್ ಮತ್ತೊಂದು ಲವ್-ಕಮ್ ಅರೇಂಜ್ಡ್​ ಮದುವೆ. ಈ ಹಳ್ಳಿಯಲ್ಲಿ ಪ್ರೇಮ ವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೋಷಕರ ಒಪ್ಪಿಗೆ ಪಡೆಯದೆ ವಿವಾಹವಾಗುವಂತಿಲ್ಲ. ಅರೇಂಜ್ಡ್​​ ಮದುವೆ ಪೋಷಕರು ನಿಶ್ಚಯಿಸಿದ ಮದುವೆಯಾಗಿರುತ್ತದೆ, ಲವ್ ಮ್ಯಾರೇಜ್​ ಅಲ್ಲಿ ತಾನು ಇಷ್ಟ ಪಟ್ಟ ಸಂಗಾತಿ ಜತೆಗೆ ಮದುವೆ ನಡೆಯುತ್ತದೆ.

ಅದು ಪೋಷಕರ ಸಮ್ಮುಖದಲ್ಲೇ ಆಗಿರಬಹುದು ಅಥವಾ ಅವರಿಗೆ ತಿಳಿಯದೆ ಮಾಡಿಕೊಳ್ಳುವ ಮದುವೆಯೂ ಆಗಿರಬಹುದು. ಇನ್ನು ಮೂರನೆಯದು ಲವ್-ಕಮ್ ಅರೇಂಜ್ಡ್​ ಮದುವೆ ಇದರಲ್ಲಿ ಪೋಷಕರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿ ತಾವು ಇಷ್ಟ ಪಟ್ಟವರನ್ನು ಮದುವೆಯಾಗುತ್ತಾರೆ. ಆದರೆ ಪಂಜಾಬ್​​ನ ಈ ಹಳ್ಳಿಯಲ್ಲಿ ಈ ಪ್ರೇಮ ವಿವಾಹವನ್ನು ನಿಷೇಧಿಸಲಾಗಿದೆ.

ಪಂಜಾಬ್‌ನ ಮೊಹಾಲಿ ಜಿಲ್ಲೆಯ ಒಂದು ಹಳ್ಳಿಯ ಗ್ರಾಮ ಪಂಚಾಯತ್ ಕುಟುಂಬ ಅಥವಾ ಸಮುದಾಯದ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹಗಳನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ತೀವ್ರ ವಿವಾದವನ್ನು ಹುಟ್ಟುಹಾಕಿದೆ.

ಚಂಡೀಗಢದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಮನಕ್‌ಪುರ್ ಷರೀಫ್ ಗ್ರಾಮ ಪಂಚಾಯತ್ ತೆಗೆದುಕೊಂಡ ಈ ನಿರ್ಧಾರವು ರಾಜಕೀಯ ನಾಯಕರು ಮತ್ತು ಮಾನವ ಹಕ್ಕುಗಳ ವಕೀಲರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಜುಲೈ 31 ರಂದು ಸರ್ವಾನುಮತದಿಂದ ಅಂಗೀಕರಿಸಲಾದ ಈ ನಿರ್ಣಯವು, ತಮ್ಮ ಕುಟುಂಬಗಳ ಅನುಮೋದನೆಯಿಲ್ಲದೆ ಮದುವೆಯಾಗುವ ದಂಪತಿ ಗ್ರಾಮ ಅಥವಾ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವುದನ್ನು ನಿಷೇಧಿಸುತ್ತದೆ. ಅಂತಹ ದಂಪತಿಗಳನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವ ಯಾವುದೇ ಗ್ರಾಮಸ್ಥರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುತ್ತದೆ.

ಇದು ಶಿಕ್ಷೆಯಲ್ಲ, ಬದಲಾಗಿ ನಮ್ಮ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ರಕ್ಷಿಸುವ ಕ್ರಮವಾಗಿದೆ ಎಂದು ಗ್ರಾಮದ ಸರಪಂಚ್ ದಲ್ವೀರ್ ಸಿಂಗ್ ಹೇಳಿದರು.

ಇತ್ತೀಚೆಗೆ 26 ವರ್ಷದ ದೇವಿಂದರ್ ಎಂಬ ಯುವಕ ತನ್ನ 24 ವರ್ಷದ ಸೊಸೆ ಬೇಬಿಯನ್ನು ಮದುವೆಯಾದ ಘಟನೆಯ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಅಂದಿನಿಂದ ದಂಪತಿ ಗ್ರಾಮವನ್ನು ತೊರೆದಿದ್ದಾರೆ, ಆದರೆ ಈ ಘಟನೆಯು ಇಲ್ಲಿ ವಾಸಿಸುವ 2,000 ಗ್ರಾಮಸ್ಥರ ಮೇಲೆ ಪರಿಣಾಮ ಬೀರಿದೆ.

ಮತ್ತಷ್ಟು ಓದಿ: Shocking News: 13 ವರ್ಷದ ಬಾಲಕಿಯನ್ನು ಮದುವೆಯಾದ 40 ವರ್ಷದ ಅಂಕಲ್!

ನಾವು ಪ್ರೇಮ ವಿವಾಹ ಅಥವಾ ಕಾನೂನನ್ನು ವಿರೋಧಿಸುವುದಿಲ್ಲ, ಆದರೆ ನಮ್ಮ ಪಂಚಾಯತ್‌ನಲ್ಲಿ ನಾವು ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಸಿಂಗ್ ಹೇಳಿದರು.

ಈ ಕ್ರಮವು ತೀವ್ರ ಟೀಕೆಗೆ ಗುರಿಯಾಗಿದೆ. ಪಟಿಯಾಲದ ಕಾಂಗ್ರೆಸ್ ಸಂಸದ ಧರ್ಮವೀರ ಗಾಂಧಿ ಅವರು ನಿರ್ಣಯವನ್ನು ಖಂಡಿಸಿ, ಇದನ್ನು ತಾಲಿಬಾನಿ ಆದೇಶ ಎಂದು ಕರೆದಿದ್ದಾರೆ. ಒಬ್ಬರ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬ ವಯಸ್ಕನ ಮೂಲಭೂತ ಹಕ್ಕು. ರಾಜ್ಯವು ಮಧ್ಯಪ್ರವೇಶಿಸಿ ಅಂತಹ ದಂಪತಿಯನ್ನು ರಕ್ಷಿಸಬೇಕು ಎಂದು ಕೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ