ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಮೋದಿ ಸಲಹೆ ನೀಡಿದ್ದೇಕೆ? ಇದು ದೊಡ್ಡ ಹಗರಣ: ರಾಹುಲ್ ಗಾಂಧಿ

ಪ್ರಧಾನಿಯವರು ಈ ಹಿಂದೆ ಷೇರು ಮಾರುಕಟ್ಟೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿಯವರು ಅತ್ಯಂತ ಆಸಕ್ತಿದಾಯಕವಾಗಿ ಮತ್ತು ಹಲವು ಬಾರಿ, ಒಂದರ ನಂತರ ಒಂದರಂತೆ, ಷೇರು ಮಾರುಕಟ್ಟೆ ಪುಟಿದೇಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಎಕ್ಸಿಟ್ ಪೋಲ್ ಗಳು ತಪ್ಪು ಎಂಬ ಮಾಹಿತಿಯೂ ಅವರ ಬಳಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಮೋದಿ ಸಲಹೆ ನೀಡಿದ್ದೇಕೆ? ಇದು ದೊಡ್ಡ ಹಗರಣ: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಸುದ್ದಿಗೋಷ್ಠಿ
Follow us
|

Updated on:Jun 06, 2024 | 6:55 PM

ದೆಹಲಿ ಜೂನ್ 06: ದೆಹಲಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), “ಐದು ಕೋಟಿ ಕುಟುಂಬಗಳಿಗೆ ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವರು ಸಲಹೆ ನೀಡಿದ್ದು ಯಾಕೆ? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಸ್ಟಾಕ್ ಮ್ಯಾನಿಪುಲೇಟ್ ಮಾಡಿದ್ದಕ್ಕಾಗಿ ಸೆಬಿ ತನಿಖೆಯಲ್ಲಿರುವ ಒಂದೇ ವ್ಯಾಪಾರ ಗುಂಪಿನ ಮಾಲೀಕತ್ವದ ಒಂದೇ ಮಾಧ್ಯಮಕ್ಕೆ ಎರಡೂ ಸಂದರ್ಶನಗಳನ್ನು ಏಕೆ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

“ಇದು ಕೇವಲ ಅದಾನಿ ಸಮಸ್ಯೆಗಿಂತ ವಿಶಾಲವಾದ ವಿಷಯವಾಗಿದೆ. ಇದು ಅದಾನಿ ವಿಷಯದೊಂದಿಗೆ ಸಂಪರ್ಕ ಹೊಂದಿದೆ, ಆದರೆ ಇದು ಹೆಚ್ಚು ವಿಶಾಲವಾದ ವಿಷಯವಾಗಿದೆ. ಇಲ್ಲಿ ನೇರವಾಗಿ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು, ನಿಜವಾದ ಚುನಾವಣಾ ಫಲಿತಾಂಶಗಳ ಡೇಟಾ ಬಗ್ಗೆ ಗೊತ್ತಿರುವವರು, ಐಬಿ ವರದಿ ಹೊಂದಿರುವವರು, ಸ್ವಂತ ಡೇಟಾವನ್ನು ಹೊಂದಿರುವವರರು ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಸಲಹೆ ನೀಡುತ್ತಾರೆ. ಇದು ಹಿಂದೆಂದೂ ಸಂಭವಿಸಿಲ್ಲ. ಪ್ರಧಾನಿಯವರು ಈ ಹಿಂದೆ ಷೇರು ಮಾರುಕಟ್ಟೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿಯವರು ಅತ್ಯಂತ ಆಸಕ್ತಿದಾಯಕವಾಗಿ ಮತ್ತು ಹಲವು ಬಾರಿ, ಒಂದರ ನಂತರ ಒಂದರಂತೆ, ಷೇರು ಮಾರುಕಟ್ಟೆ ಪುಟಿದೇಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಎಕ್ಸಿಟ್ ಪೋಲ್ ಗಳು ತಪ್ಪು ಎಂಬ ಮಾಹಿತಿಯೂ ಅವರ ಬಳಿ ಇದೆ. ಅವರ ಬಳಿ ಐಬಿ ಡೇಟಾ ಇದೆ ಮತ್ತು ಅವರ ಸ್ವಂತ ಪಕ್ಷದ ಡೇಟಾ ಕೂಡ ಇರುವುದರಿಂದ ಏನಾಗಲಿದೆ ಎಂದು ಅವರಿಗೆ ತಿಳಿದಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಸುದ್ದಿಗೋಷ್ಠಿ

“ಬಿಜೆಪಿ, ನಕಲಿ ಎಕ್ಸಿಟ್ ಪೋಲ್ ಮತ್ತು ಎಕ್ಸಿಟ್ ಪೋಲ್‌ಗಳು ಪ್ರಕಟವಾಗುವ ಒಂದು ದಿನ ಮೊದಲು ಹೂಡಿಕೆ ಮಾಡಿದ ಮತ್ತು ಐದು ಕೋಟಿ ಸಂಬಳದ ವೆಚ್ಚದಲ್ಲಿ ಭಾರಿ ಲಾಭ ಗಳಿಸಿದ ಸಂಶಯಾಸ್ಪದ ವಿದೇಶಿ ಹೂಡಿಕೆದಾರರ ನಡುವಿನ ಸಂಬಂಧವೇನು?” ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

“ನಾವು ಇದಕ್ಕೆ ಜಂಟಿ ಸಂಸದೀಯ ಸಮಿತಿ ತನಿಖೆಗೆ (JPC) ಒತ್ತಾಯಿಸುತ್ತೇವೆ. ಇದೊಂದು ಹಗರಣ ಎಂಬುದು ನಮಗೆ ಮನವರಿಕೆಯಾಗಿದೆ. ಯಾರೋ ಭಾರತೀಯ ಚಿಲ್ಲರೆ ಹೂಡಿಕೆದಾರರ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮಾಡಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಖರೀದಿಸುವ ಸೂಚನೆಯನ್ನು ನೀಡಿದ್ದಾರೆ. ಹಾಗಾಗಿ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಷೇರುಪೇಟೆ ಜಿಗಿತ ಕಾಣಲಿದೆ ಎಂದು ಮೇ 23ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. “ಜೂನ್ 4 ರಂದು, ಬಿಜೆಪಿ ದಾಖಲೆಯ ಸಂಖ್ಯೆಯನ್ನು ತಲುಪುತ್ತಿದ್ದಂತೆ, ಷೇರು ಮಾರುಕಟ್ಟೆಯು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದಿದ್ದರು ಮೋದಿ.

ಮೇ 13 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಷೇರು ಮಾರುಕಟ್ಟೆಯ ಚಲನೆಯನ್ನು ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ನೇರವಾಗಿ ಲಿಂಕ್ ಮಾಡಬೇಡಿ ಎಂದು ಒತ್ತಾಯಿಸಿದ್ದರು. “ಈ ಹಿಂದೆಯೂ ಮಾರುಕಟ್ಟೆ ಇದೇ ರೀತಿ ಆಗಿದೆ. ಹಾಗಾಗಿ ಅದನ್ನು ನೇರವಾಗಿ ಚುನಾವಣೆಗೆ ಲಿಂಕ್ ಮಾಡಬಾರದು. ಕೆಲವು ವದಂತಿಗಳು ಇದಕ್ಕೆ ಉತ್ತೇಜನ ನೀಡಿರಬಹುದು. ನನ್ನ ಅಭಿಪ್ರಾಯದಲ್ಲಿ, ಜೂನ್ 4 ರ ಮೊದಲು ಖರೀದಿಸಿ. ಮಾರುಕಟ್ಟೆಯು ಶೂಟ್-ಅಪ್ ಆಗಲಿದೆ ಎಂದು ಎನ್​​ಡಿಟಿವಿ ಫ್ರಾಫಿಟ್ ಜತೆ ಮಾತನಾಡಿದ ಅಮಿತ್ ಶಾ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Thu, 6 June 24

ತಾಜಾ ಸುದ್ದಿ