ಬೆಂಗಳೂರು: ಇನ್ನುಮುಂದೆ ಬೆಂಗಳೂರಿನಿಂದ ಸ್ಯಾನ್ಫ್ರಾನ್ಸಿಸ್ಕೋಗೆ ವಾರದಲ್ಲಿ 2 ದಿನ ಹಾರಾಟ ನಡೆಸಲಿರುವ ಮಹಿಳಾ ಸಿಬ್ಬಂದಿಯನ್ನೊಳಗೊಂಡ ಏರ್‌ಇಂಡಿಯಾ 176 ಬೋಯಿಂಗ್ 777/200 LR ವಿಮಾನ ಇಂದು ಶುಭಾರಂಭಗೊಂಡಿದೆ. 13,993 ಕಿ.ಮೀ. ದೂರ ಕ್ರಮಿಸಿದ ಈ ವಿಮಾನವನ್ನು ಒಟ್ಟು 17 ಗಂಟೆಗಳ ಕಾಲ ನಿರಂತರವಾಗಿ ಚಲಾಯಿಸಿದ ಮಹಿಳಾ ಪೈಲಟ್ಗಳಿಗೆ ರಾಹುಲ್ ಗಾಂಧಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಏರ್ ಇಂಡಿಯಾದ ಅತ್ಯಂತ ದೂರ ಕ್ರಮಿಸುವ, ಉತ್ತರ ಧ್ರುವದ ಮೂಲಕ ಹಾದು ಹೋಗುವ ವಿಮಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಹಿಳಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು. ನೀವು ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Congratulations to the all-women cockpit crew for completing Air India’s longest flight from San Francisco to Bengaluru over the North Pole.
You have made the country proud. pic.twitter.com/OPiEzoOrsk
— Rahul Gandhi (@RahulGandhi) January 11, 2021