LAC ದಾಟಿ ಭಾರತ ಪ್ರವೇಶಿಸಿದ್ದ ಚೀನಾ ಯೋಧನನ್ನು ಮರಳಿ ಕಳುಹಿಸಿದ ಭಾರತ
ಕಳೆದ ಶುಕ್ರವಾರ ಗಡಿ ದಾಟಿ ಭಾರತ ಭೂಪ್ರದೇಶಕ್ಕೆ ಬಂದಿದ್ದ ಚೀನಾ ಸೈನಿಕನನ್ನು, ಪೂರ್ವ ಲಡಾಖ್‌ನ ಪಾಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿ ಬಂಧಿಸಲಾಗಿತ್ತು.
ದೆಹಲಿ: ಶುಕ್ರವಾರ ಬಂಧನಕ್ಕೊಳಗಾಗಿದ್ದ ಚೀನಾ ಸೈನಿಕನನ್ನು ಭಾರತ ಇಂದು ಹಸ್ತಾಂತರಿಸಿದ. ಶುಕ್ರವಾರ, ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಭಾಗದಲ್ಲಿ ಭಾರತ ಪ್ರವೇಶಿಸಿದ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿತ್ತು. ಇಂದು ಬೆಳಗ್ಗೆ 10.10ಕ್ಕೆ ಚೀನಾ ಸೈನಿಕನನ್ನು ಭಾರತ, ಸ್ವದೇಶಕ್ಕೆ ಮರಳಿಸಿದೆ.
ಕಳೆದ ಶುಕ್ರವಾರ ಗಡಿ ದಾಟಿ ಭಾರತ ಭೂಪ್ರದೇಶಕ್ಕೆ ಬಂದಿದ್ದ ಚೀನಾ ಸೈನಿಕನನ್ನು, ಪೂರ್ವ ಲಡಾಖ್‌ನ ಪಾಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿ ಬಂಧಿಸಲಾಗಿತ್ತು. ಆತನನ್ನು ಇಂದು ಬೆಳಗ್ಗೆ, ಪೂರ್ವ ಲಡಾಖ್‌ನ ಚುಶಲ್ ಗಡಿ ಭಾಗದಲ್ಲಿ ಚೀನಾಕ್ಕೆ ಹಸ್ತಾಂತರ ಮಾಡಲಾಗಿದೆ. ಆ ಮೂಲಕ, ಚೀನಾ ಪೀಪಲ್ಸ್ ಲಿಬರೇಷನ್ ಸೇನೆಯು ಸೈನಿಕನನ್ನು ಮರಳಿ ಪಡೆದುಕೊಂಡಿದೆ.
ಶನಿವಾರ, ಭಾರತ ಗಡಿ ಭಾಗದಲ್ಲಿ ಕಣ್ಮರೆಯಾಗಿದ್ದ, ಚೀನಾ ಸೈನಿಕನನ್ನು ಮರಳಿ ಕಳುಹಿಸುವಂತೆ ಚೀನಾ ಹೇಳಿಕೆ ನೀಡಿತ್ತು. ಕತ್ತಲು ಹಾಗೂ ಕ್ಲಿಷ್ಟಕರ ಭೌಗೋಳಿಕ ಭಾಗದಿಂದಾಗಿ ಆತ ಹಾದಿ ತಪ್ಪಿರುವ ಬಗ್ಗೆ ತಿಳಿಸಿತ್ತು. ಇದೀಗ ಆತನನ್ನು ಭಾರತ ಸ್ವದೇಶಕ್ಕೆ ಮರಳಿಸಿದೆ.
ಗಡಿ ದಾಟಿ.. ದೇಶದ ಭೂ ಭಾಗ ಪ್ರವೇಶಿಸಿದ ಚೀನಾ ಸೈನಿಕ ಭಾರತೀಯ ಸೇನೆ ವಶಕ್ಕೆ
Published On - 6:33 pm, Mon, 11 January 21